ಎತ್ತಿನಹೊಳೆಗೆ ಭೂಮಿ ಕೊಟ್ಟು ಪರಿಹಾರದ ಭರವಸೆಯಲ್ಲೇ ಕಂಗೆಟ್ಟ ಅನ್ನದಾತರು, ಇತ್ತ ಯೋಜನೆ ಇಲ್ಲ.. ಪರಿಹಾರನೂ ಇಲ್ಲ..!

ಎತ್ತಿನಹೊಳೆ ಯೋಜನೆಗೆ ಭೂಮಿಕೊಟ್ಟು ಪರಿಹಾರದ ನಿರೀಕ್ಷೆಯಲ್ಲಿದ್ದ ರೈತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಇತ್ತ ಬೆಳೆಯೂ ಇಲ್ಲ.. ಭೂಮಿಯೂ ಇಲ್ಲ ಅನ್ನುವಂತಾಗಿದೆ.

ಎತ್ತಿನಹೊಳೆಗೆ ಭೂಮಿ ಕೊಟ್ಟು ಪರಿಹಾರದ ಭರವಸೆಯಲ್ಲೇ ಕಂಗೆಟ್ಟ ಅನ್ನದಾತರು, ಇತ್ತ ಯೋಜನೆ ಇಲ್ಲ.. ಪರಿಹಾರನೂ ಇಲ್ಲ..!
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Nov 30, 2020 | 8:24 AM

ಹಾಸನ: ರಾಜ್ಯದ 7 ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯೋ ನೀರು ಒದಗಿಸೋ ರಾಜ್ಯದ ಮಹತ್ವಾಕಾಂಕ್ಷಿಯ ಎತ್ತಿನಹೊಳೆ ಯೋಜನೆಯ ಕಾಮಗಾರಿ ಪೂರ್ಣವಾಗಿ ಆಮೆಗತಿಯಲ್ಲಿ ಸಾಗ್ತಿದೆ. ಸೂಕ್ತ ಅನುದಾನದ ಕೊರತೆಯಿಂದ 5 ವರ್ಷದಿಂದ ನಡೆಯುತ್ತಿರೋ ಕಾಮಗಾರಿ ಇನ್ನೂ ಮುಗಿದಿಲ್ಲ. ಮತ್ತೊಂದೆಡೆ ಭೂಮಿ ಕೊಟ್ಟರೆ ಹೆಚ್ಚಿನ ಪರಿಹಾರ ನಿರೀಕ್ಷೆಯಲ್ಲಿದ್ದ ಬೆಳೆಗಾರರೂ ಕಂಗಾಲಾಗಿದ್ದಾರೆ.

ಅನುದಾನದ ಕೊರತೆಯಿಂದ ಪೂರ್ಣಗೊಳ್ಳದ ಯೋಜನೆ: ಕಳೆದ 5 ವರ್ಷಗಳ ಹಿಂದೆ ಆರಂಭಗೊಂಡ ಎತ್ತಿನಹೊಳೆ ಯೋಜನೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆ ಮೂಲಕ 7 ಜಿಲ್ಲೆಗಳಿಗೆ ಕುಡಿಯೋ ನೀರು ಒದಗಿಸೋ ಯೋಜನೆ ಹಾಕಿಕೊಳ್ಳಲಾಗಿತ್ತು. ಈ ಯೋಜನೆಗೆ ಭೂಮಿಕೊಟ್ಟು ಪರಿಹಾರದ ನಿರೀಕ್ಷೆಯಲ್ಲಿದ್ದ ರೈತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ.

ಹಾಸನ ಜಿಲ್ಲೆಯ ಪಶ್ಚಿಮಘಟ್ಟ ತಪ್ಪಲಿನಿಂದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿ 7 ಜಿಲ್ಲೆಗಳಿಗೆ ಕುಡಿಯೋ ನೀರು ಒದಗಿಸಲು ಸಾವಿರಾರು ಕೋಟಿ ವೆಚ್ಚದಲ್ಲಿ ಯೋಜನೆ ತಯಾರಿಸಿ ಸಕಲೇಶಪುರ ತಾಲೂಕಿನ ಕೆಲವೆಡೆ ರೈತರಿಂದ ನೇರವಾಗಿ ಭೂಮಿ ಖರೀದಿಸಿ ಹೆಚ್ಚಿನ ಪರಿಹಾರ ನೀಡಲಾಗಿತ್ತು. ಆದ್ರೆ ಇದೇ ಆಸೆ ತೋರಿಸಿ ಸಾವಿರಾರು ರೈತರಿಂದ ಭೂಸ್ವಾದಿನ ಮಾಡಿಸಿಕೊಂಡಿದ್ದ ವಿಶ್ವೇಶ್ವರಯ್ಯ ಜಲನಿಗಮ ರೈತರಿಗೆ ಪರಿಹಾರ ಕೊಡದೆ ಸತಾಯಿಸುತ್ತಿದೆ. 5 ವರ್ಷದಿಂದ ಪರಿಹಾರವೂ ಇಲ್ಲ. ಬೆಳೆಯೂ ಇಲ್ಲ. ಇತ್ತ ಭೂಮಿಯೂ ಇಲ್ಲ ಅನ್ನೋ ಪರಿಸ್ಥಿತಿ ಎದುರಾಗಿದೆ.

ಸಕಲೇಶಪುರ, ಬೇಲೂರು, ಆಲೂರು ಹಾಗೂ ಅರಸೀಕೆರೆ ಮಾರ್ಗವಾಗಿ ಎತ್ತಿನಹೊಳೆ ಯೋಜನೆಯ ಕಾಲುವೆಗಳು ಹಾದುಹೋಗಲಿದೆ. ಭಾರಿ ಆಳದ ಕಾಲುವೆ ನಿರ್ಮಾಣದಿಂದ ಅಂತರ್ಜಲ ಬತ್ತಿಹೋಗಿ ಸಮಸ್ಯೆ ಆಗಲಿದೆ ಅನ್ನೋ ಆತಂಕ ಒಂದೆಡೆಯಾದ್ರೆ, ಸ್ವಾಧೀನಪಡಿಸಿಕೊಂಡ ಭೂಮಿಗೆ ಸರ್ಕಾರ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡುತ್ತೆ ಅನ್ನೋ ಭರವಸೆಯಲ್ಲಿದ್ರು. ಆದ್ರೆ ಭೂಮಿ ಬಿಟ್ಟುಕೊಟ್ಟ ರೈತರಿಗೆ ಇದುವರೆಗೂ ಪರಿಹಾರವೇ ಸಿಕ್ಕಿಲ್ಲ. ಆದ್ರೆ ಉಸ್ತುವಾರಿ ಸಚಿವರು ಮಾತ್ರ ಬಾಕಿ ಪರಿಹಾರ ಹಣ ಕೊಡಿಸೋದಾಗಿ ಹೇಳ್ತಿದ್ದಾರೆ.

ಒಟ್ನಲ್ಲಿ ಎತ್ತಿನ ಹೊಳೆ ಯೋಜನೆಯಿಂದ ನೀರು ಬರುತ್ತೆ ಅಂತ ಲಕ್ಷಾಂತರ ರೈತರು ಕಾದು ಕುಳಿತಿದ್ದಾರೆ. ಆದ್ರೆ, ಯೋಜನೆ ಮುಗಿಸೋಕೆ ಸರ್ಕಾರ ಮನಸ್ಸು ಮಾಡ್ತಿಲ್ಲ. ಮತ್ತೊಂದೆಡೆ ರೈತರು ಇವತ್ತು ಪರಿಹಾರ ಸಿಗುತ್ತೆ ನಾಳೆ ಸಿಗುತ್ತೆ ಅಂತ ಎದುರು ನೋಡ್ತಿದ್ದಾರೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ಪರಿಹಾರ ಕೊಡಿಸೋ ಕೆಲ್ಸ ಮಾಡ್ಬೇಕಿದೆ.

Published On - 7:39 am, Mon, 30 November 20

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ