ಕಂಕಣ ಸೂರ್ಯ ಗ್ರಹಣ ವೀಕ್ಷಣೆಗೆ ಕೊರೊನಾ ಕಂಟಕ, ನೆಹರು ತಾರಾಲಯಕ್ಕಿಲ್ಲ ಸಾರ್ವಜನಿಕರಿಗೆ ಎಂಟ್ರಿ
ಬೆಂಗಳೂರು: ಇಂದು ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ನೆಹರು ತಾರಾಲಯದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಅದು ಕೇವಲ ಅಧ್ಯಯನದ ದೃಷ್ಟಿಯಿಂದ ಮಾತ್ರ. ಕೊರೊನಾದಿಂದಾಗಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಸಾರ್ವಜನಿಕರಿಗೆ ಅವಕಾಶ ನೀಡಿದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುತ್ತೆ. ಹೀಗಾಗಿ ನೆಹರು ತಾರಾಲಯದ ವೆಬ್‌ಸೈಟ್‌ನಲ್ಲಿ ನೇರ ಪ್ರಸಾರವಾಗಲಿದೆ. ಈ ಮೂಲಕ ಗ್ರಹಣ ವೀಕ್ಷಿಸಬಹುದು. ಮನೆಯಲ್ಲಿದ್ದರೂ ಬರಿಗಣ್ಣಿನಿಂದ ಸೂರ್ಯನನ್ನ ನೋಡಬೇಡಿ . ಸೋಲಾರ್ ಕನ್ನಡಕ ಬಳಸಿ ಸೂರ್ಯಗ್ರಹಣವನ್ನು ವೀಕ್ಷಿಸಿ ಎಂದು ಟಿವಿ9ಗೆ ನೆಹರು ತಾರಾಲಯದ ನಿರ್ದೇಶಕ […]

ಬೆಂಗಳೂರು: ಇಂದು ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ನೆಹರು ತಾರಾಲಯದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಅದು ಕೇವಲ ಅಧ್ಯಯನದ ದೃಷ್ಟಿಯಿಂದ ಮಾತ್ರ. ಕೊರೊನಾದಿಂದಾಗಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.
ಸಾರ್ವಜನಿಕರಿಗೆ ಅವಕಾಶ ನೀಡಿದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುತ್ತೆ. ಹೀಗಾಗಿ ನೆಹರು ತಾರಾಲಯದ ವೆಬ್‌ಸೈಟ್‌ನಲ್ಲಿ ನೇರ ಪ್ರಸಾರವಾಗಲಿದೆ. ಈ ಮೂಲಕ ಗ್ರಹಣ ವೀಕ್ಷಿಸಬಹುದು. ಮನೆಯಲ್ಲಿದ್ದರೂ ಬರಿಗಣ್ಣಿನಿಂದ ಸೂರ್ಯನನ್ನ ನೋಡಬೇಡಿ . ಸೋಲಾರ್ ಕನ್ನಡಕ ಬಳಸಿ ಸೂರ್ಯಗ್ರಹಣವನ್ನು ವೀಕ್ಷಿಸಿ ಎಂದು ಟಿವಿ9ಗೆ ನೆಹರು ತಾರಾಲಯದ ನಿರ್ದೇಶಕ ಡಾ.ಪ್ರಮೋದ್ ಗಲಗಲಿ ತಿಳಿಸಿದ್ರು.
Published On - 8:17 am, Sun, 21 June 20




