ನಡುಗಡ್ಡೆಯಾದ ತಾರಾಪುರ: ಮತ್ತೊಬ್ಬ ಬಾಣಂತಿಯನ್ನ ಹೊರಗೆ ಕರೆ ತಂದ ತಹಶೀಲ್ದಾರ್
ವಿಜಯಪುರ: ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪುರ ಗ್ರಾಮದಲ್ಲಿ ಸಿಲುಕಿದ್ದ ಮತ್ತೊಬ್ಬ ಬಾಣಂತಿಯನ್ನು ರಕ್ಷಣೆ ಮಾಡಲಾಗಿದೆ. ಪ್ರವಾಹದಿಂದ ನಡುಗಡ್ಡೆಯಾದ ತಾರಾಪುರ ಗ್ರಾಮದ ತವರಿನಲ್ಲಿದ್ದ ಬಾಣಂತಿ ಹಾಗೂ ಮೂರು ತಿಂಗಳ ಮಗುವನ್ನು ತಹಶೀಲ್ದಾರ್ ಹೊರಗೆ ಕರೆ ತಂದಿದ್ದಾರೆ. ಬಾಣಂತಿ ತನ್ನ ಮಗುವಿನ ಜೊತೆಗೆ ಆಲಮೇಲ ಪಟ್ಟಣದಲ್ಲಿನ ಸಂಬಂಧಿಕರ ಮನೆಗೆ ತೆರಳಲು ಒಪ್ಪಿದ್ದಾರೆ. ದೋಣಿಯ ಮೂಲಕ ಇಬ್ಬರು ಬಾಣಂತಿಯರು ಹಾಗೂ ಮೂರು ತಿಂಗಳ ಮಕ್ಕಳನ್ನು ತಹಶೀಲ್ದಾರ್ ಹಾಗೂ ಅಗ್ನಿಶಾಮಕ ದಳ ಅಧಿಕಾರಿಗಳು ತಾರಾಪುರದಿಂದ ಹೊರಗೆ ಕಳುಹಿಸಿದ್ದಾರೆ. ಅದಕ್ಕೂ ಮುನ್ನ, ಸಿಂದಗಿ ತಹಶೀಲ್ದಾರ್ […]

ವಿಜಯಪುರ: ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪುರ ಗ್ರಾಮದಲ್ಲಿ ಸಿಲುಕಿದ್ದ ಮತ್ತೊಬ್ಬ ಬಾಣಂತಿಯನ್ನು ರಕ್ಷಣೆ ಮಾಡಲಾಗಿದೆ.
ಪ್ರವಾಹದಿಂದ ನಡುಗಡ್ಡೆಯಾದ ತಾರಾಪುರ ಗ್ರಾಮದ ತವರಿನಲ್ಲಿದ್ದ ಬಾಣಂತಿ ಹಾಗೂ ಮೂರು ತಿಂಗಳ ಮಗುವನ್ನು ತಹಶೀಲ್ದಾರ್ ಹೊರಗೆ ಕರೆ ತಂದಿದ್ದಾರೆ. ಬಾಣಂತಿ ತನ್ನ ಮಗುವಿನ ಜೊತೆಗೆ ಆಲಮೇಲ ಪಟ್ಟಣದಲ್ಲಿನ ಸಂಬಂಧಿಕರ ಮನೆಗೆ ತೆರಳಲು ಒಪ್ಪಿದ್ದಾರೆ.
ದೋಣಿಯ ಮೂಲಕ ಇಬ್ಬರು ಬಾಣಂತಿಯರು ಹಾಗೂ ಮೂರು ತಿಂಗಳ ಮಕ್ಕಳನ್ನು ತಹಶೀಲ್ದಾರ್ ಹಾಗೂ ಅಗ್ನಿಶಾಮಕ ದಳ ಅಧಿಕಾರಿಗಳು ತಾರಾಪುರದಿಂದ ಹೊರಗೆ ಕಳುಹಿಸಿದ್ದಾರೆ. ಅದಕ್ಕೂ ಮುನ್ನ, ಸಿಂದಗಿ ತಹಶೀಲ್ದಾರ್ ಸಜೀವಕುಮಾರ ನೇತೃತ್ವದಲ್ಲಿ ಬಾಣಂತಿಯರನ್ನು ಸ್ಥಳ ತೆರವುಗೊಳಿಸುವಂತೆ ಮನವೊಲಿಕೆ ಮಾಡಲಾಯಿತು.





