ತಿಮ್ಮಪ್ಪ ದೇಗುಲದ ಪುಷ್ಕರಣಿಯಲ್ಲಿ ಸಿಕ್ಕ ನಾಣ್ಯಗಳ ಇತಿಹಾಸದ ರಹಸ್ಯವಾದರೂ ಏನು?

ತಿಮ್ಮಪ್ಪ ದೇಗುಲದ ಪುಷ್ಕರಣಿಯಲ್ಲಿ ಸಿಕ್ಕ ನಾಣ್ಯಗಳ ಇತಿಹಾಸದ ರಹಸ್ಯವಾದರೂ ಏನು?

ತುಮಕೂರು: ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಟಿ ಎನ್ ಬೆಟ್ಟದ ತಪ್ಪಲಿನಲ್ಲಿರುವ ಸನಾತನ ಪುಷ್ಕರಣಿಯಲ್ಲಿ ಐತಿಹಾಸಿಕ 18 ಮತ್ತು19 ನೇ ಶತಮಾನದ ನಾಣ್ಯಗಳು ದೊರೆತಿವೆ. ಅಪರೂಪದ ಈ ನಾಣ್ಯಗಳು ತಮ್ಮ ಗ್ರಾಮದ ಇತಿಹಾಸದ ಬಗ್ಗೆ ಸ್ಥಳೀಯ ಜನರಲ್ಲಿ ಕುತೂಹಲ ಮೂಡಿಸಿದೆ. ಹೌದು ಪಾವಗಡ ತಾಲೂಕಿನ ಗುಜ್ಜುನಡು ವ್ಯಾಪ್ತಿಯಲ್ಲಿ ಬರುವ ಟಿ ಎನ್ ಬೆಟ್ಟದಲ್ಲಿ ತಿಮ್ಮಪ್ಪನ ದೇಗುಲವಿದೆ. ಇದಕ್ಕೆ ಎರಡನೇ ತಿರುಪತಿ ಎಂಬ ಪ್ರತೀತಿ ಇದೆ. ಶ್ರಾವಣ ಮಾಸದಲ್ಲಿ ದೂರದೂರುಗಳಿಂದ ಸಾವಿರಾರು ಭಕ್ತರು ಇಲ್ಲಿನ ತಿಮ್ಮಪ್ಪನ ದರ್ಶನ ಪಡೆಯಲು […]

Guru

| Edited By:

Jul 23, 2020 | 6:07 PM

ತುಮಕೂರು: ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಟಿ ಎನ್ ಬೆಟ್ಟದ ತಪ್ಪಲಿನಲ್ಲಿರುವ ಸನಾತನ ಪುಷ್ಕರಣಿಯಲ್ಲಿ ಐತಿಹಾಸಿಕ 18 ಮತ್ತು19 ನೇ ಶತಮಾನದ ನಾಣ್ಯಗಳು ದೊರೆತಿವೆ. ಅಪರೂಪದ ಈ ನಾಣ್ಯಗಳು ತಮ್ಮ ಗ್ರಾಮದ ಇತಿಹಾಸದ ಬಗ್ಗೆ ಸ್ಥಳೀಯ ಜನರಲ್ಲಿ ಕುತೂಹಲ ಮೂಡಿಸಿದೆ.

ಹೌದು ಪಾವಗಡ ತಾಲೂಕಿನ ಗುಜ್ಜುನಡು ವ್ಯಾಪ್ತಿಯಲ್ಲಿ ಬರುವ ಟಿ ಎನ್ ಬೆಟ್ಟದಲ್ಲಿ ತಿಮ್ಮಪ್ಪನ ದೇಗುಲವಿದೆ. ಇದಕ್ಕೆ ಎರಡನೇ ತಿರುಪತಿ ಎಂಬ ಪ್ರತೀತಿ ಇದೆ. ಶ್ರಾವಣ ಮಾಸದಲ್ಲಿ ದೂರದೂರುಗಳಿಂದ ಸಾವಿರಾರು ಭಕ್ತರು ಇಲ್ಲಿನ ತಿಮ್ಮಪ್ಪನ ದರ್ಶನ ಪಡೆಯಲು ಬರುತ್ತಾರೆ. ಆ ವೇಳೆ ಇಲ್ಲಿನ ಪುರಾತನ ಕಾಲದ ಪುಷ್ಕರಣಿಯಲ್ಲಿ ಭಕ್ತರು ಹರಕೆ ಮಾಡಿಕೊಂಡು ನಾಣ್ಯಗಳನ್ನು ಭಕ್ತಿಯಿಂದ ಹಾಕಿದರೆ ತಮ್ಮ ಹರಕೆಗಳು ಈಡೇರುತ್ತವೆ ಎನ್ನುವ ಅಪಾರ ನಂಬಿಕೆ ಇಲ್ಲಿಗೆ ಬರುವ ಭಕ್ತರದ್ದಾಗಿದೆ.

18 ಮತ್ತು 19ನೇ ಶತಮಾನದ ನಾಣ್ಯಗಳು ಹೀಗಾಗಿ ಇದನ್ನು ತಿಮ್ಮಪ್ಪನ ದೊಣೆಯೆಂತಲೂ ಕರೆಯಲಾಗುತ್ತದೆ. ಇದನ್ನು ಸ್ಥಳೀಯ ಗ್ರಾಮಸ್ಥರು ಸ್ವಚ್ಚಗೊಳಿಸೋ ವೇಳೆ ವಿಜಯನಗರ ಅರಸರ ಮತ್ತು ಮೈಸೂರು ಅರಸರ ಹಾಗೂ ಬ್ರಿಟಿಷರ ಕಾಲದ ನಾಣ್ಯಗಳು ದೊರೆತಿವೆ. ಇವೆಲ್ಲವೂ 18 ಮತ್ತು 19 ನೇ ಶತಮಾನದಲ್ಲಿ ಟಂಕಿಸಲಾದ ನಾಣ್ಯಗಳು ಅನ್ನೊದು ಸ್ಥಳೀಯರಲ್ಲಿ ಕುತೂಹಲ ಹೆಚ್ಚಿಸಿದೆ. ಪುರಾತನ ನಾಣ್ಯಗಳ ಗೋಚರಿಕೆಯಿಂದ ಸುತ್ತಮುತ್ತಲಿನ ಜನರು ಆಶ್ಚರ್ಯಚಕಿತರಾಗಿ ಈ ನಾಣ್ಯಗಳನ್ನು ನೋಡಲು ಮುಗಿಬಿದ್ದಿದ್ದಾರೆ.

ವಿಜಯನಗರ ಅರಸರ ಕಾಲದ ನಾಣ್ಯಗಳು ಪ್ರತಿಯೊಬ್ಬರನ್ನು ಆಶ್ಚರ್ಯ ಚಕಿತರನ್ನಾಗಿಸುವ ರೀತಿಯಲ್ಲಿ ನಾಣ್ಯಗಳು ದೊರೆತಿರುವ ಈ ಪುಣ್ಯಸ್ಥಳಕ್ಕೆ ಲಿಖಿತ ರೂಪದ ಇತಿಹಾಸದ ಉಲ್ಲೇಖಗಳಿಲ್ಲ. ಆದರೂ ದೊರೆತಿರುವ ನಾಣ್ಯಗಳ ಲಾಂಛನಗಳ ವಿನ್ಯಾಸ ಹಾಗೂ ಟಂಕಿಸಲಾಗಿರುವ ಇಸವಿಗಳ ಆಧಾರದಲ್ಲಿ ಇವುಗಳನ್ನು ಪಕ್ಕಾ 18 ಮತ್ತು 19 ನೇ ಶತಮಾನದ ವಿಜಯನಗರದ ಅರಸರ ಮತ್ತು ಮೈಸೂರು ಅರಸರ ಕಾಲದ್ದು ಎನ್ನಲಾಗ್ತಿದೆ.

ಹೊಟ್ಟಣ್ಣ ನಾಯಕ ಕಾಲದ್ದು ಇದನ್ನೆ ಮುಂದಿಟ್ಟುಕೊಂಡು ಗಮನಿಸುವುದಾದರೆ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಈ ತಿಮ್ಮಪ್ಪನ ಕ್ಷೇತ್ರ ಇತಿಹಾಸ ಪ್ರಸಿದ್ದವಾಗಿತ್ತು. ಆಗ ನಿಡಗಲ್ ಪ್ರಾಂತ್ಯವನ್ನು ಹೊಟ್ಟಣ್ಣ ನಾಯಕ ಆಳ್ವಿಕೆ ನಡೆಸುತ್ತಿದ್ದ. ಆ ವೇಳೆಯಲ್ಲಿ ಪ್ರಾಂತೀಯ ಒಡೆಯ ತಿಮ್ಮನಾಯಕ ವಿಜಯನಗರ ಸಾಮ್ರಾಜ್ಯದ ಅಧೀನ ನಾಯಕನಾಗಿ ಆಳ್ವಿಕೆ ನಡೆಸಿರಬಹುದು ಎನ್ನಲಾಗ್ತಿದೆ.

  • ಪುಷ್ಕರಣಿ ಕಟ್ಟಿಸಿದ್ದು ತಿಮ್ಮಪ್ಪ ನಾಯಕ ತಿಮ್ಮನಾಯಕನ ಆಳ್ವಿಕಾವಧಿಯಲ್ಲಿ ತಿಮ್ಮಪ್ಪನ ಜಾತ್ರೋತ್ಸವ ತುಂಬಾ ಅದ್ದೂರಿಯಾಗಿ ನಡೆಯುತ್ತಿತ್ತು ಎನ್ನಲಾಗ್ತಿದೆ. ಹೀಗಾಗಿಯೇ ಇಂದಿಗೂ ಜಾತ್ರೆ ಕೈಂಕರ್ಯಗಳು ಶ್ರಧ್ಥೆ, ಭಕ್ತಿ, ವಿಜೃಂಭಣೆಯಿಂದ ನಡೆಯುತ್ತವೆ. ಜೊತೆಗೆ ಇಲ್ಲಿರುವ ಕೆರೆ, ಕುಂಟೆ, ಕಟ್ಟೆಗಳು, ಹಾಗೂ ಭಕ್ತರಿಗೆ ಕುಡಿಯುವ ನೀರಿಗಾಗಿ ಈ ಪುಷ್ಕರಣಿಯನ್ನ ತಿಮ್ಮನಾಯಕನ ಕಾಲದಲ್ಲಿಯೇ ನಿರ್ಮಾಣಮಾಡಿರಬಹುದು ಎಂದು ಇತಿಹಾಸಕಾರರ ಅಭಿಪ್ರಾಯ. ಒಟ್ಟಾರೆ ಇತಿಹಾಸದ ಸಾರವನ್ನ ತನ್ನ ಒಡಲಲ್ಲಿಟ್ಟುಕೊಂಡಿರುವ ಈ ತಿಮ್ಮಪ್ಪನ ಬೆಟ್ಟವನ್ನು ಪುರಾತತ್ವ ಇಲಾಖೆ ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ರಕ್ಷಿಸಿ ಇಲ್ಲಿನ ಇತಿಹಾಸವನ್ನ ಸಂರಕ್ಷಿಸಬೇಕಿದೆ.-ಮಹೇಶ್

Follow us on

Related Stories

Most Read Stories

Click on your DTH Provider to Add TV9 Kannada