ಜಮೀನು ಕಲಹ: ಮಗನ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ ಹೆತ್ತವರು

ಗಲಾಟೆ ವಿಕೋಪಕ್ಕೆ ಹೋಗಿ, ಶಂಕರಲಿಂಗೇಗೌಡನ ಮೇಲೆ ಹಲ್ಲೆ ನಡೆದಿದೆ.  ಹಲ್ಲೆಗೊಳಗಾದ ವ್ಯಕ್ತಿ ಸದ್ಯ ಸ್ಥಳೀಯ ಖಾಸಗಿ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಜಮೀನು ಕಲಹ: ಮಗನ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ ಹೆತ್ತವರು
ಮಗನ ಮೇಲೆ ಹಲ್ಲೆ ನಡೆಸುತ್ತಿರುವ ಪೋಷಕರು
sandhya thejappa

| Edited By: Lakshmi Hegde

Jan 24, 2021 | 12:04 PM

ಮಂಡ್ಯ: ಜಮೀನು ವಿಚಾರಕ್ಕೆ ಮಗನ ಮೇಲೆ ಹೆತ್ತವರು ಖಾರದ ಪುಡಿ ಎರಚಿ ಹಲ್ಲೆ ಮಾಡಿರುವ ಘಟನೆ ನಾಗಮಂಗಲ ತಾಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಂಕರಲಿಂಗೇಗೌಡ ಎಂಬಾತ ಹಲ್ಲೆಗೊಳಗಾದ ವ್ಯಕ್ತಿ. ಈತನ ಮೇಲೆ ಅಪ್ಪ ಮರಿಗೌಡ, ಸಹೋದರ ಅಭಿಷೇಕ್​ ಮತ್ತು ಅಮ್ಮ ಚೆನ್ನಮ್ಮ ಸೇರಿ ಹಲ್ಲೆ ಮಾಡಿದ್ದಾರೆ. ಈ ಕುಟುಂಬ 20 ಎಕರೆ ಜಮೀನು ಹೊಂದಿದೆ. ಅದರಲ್ಲಿ ಆರು ಎಕರೆ ಜಮೀನು ಶಂಕರಲಿಂಗೇಗೌಡನಿಗೆ ಸೇರಿದ್ದಾದರೂ ಅಲ್ಲಿ ಬೇಸಾಯ ಮಾಡಲು ಸಹೋದರ ಅಭಿಷೇಕ್​ ಹಾಗೂ ಪಾಲಕರು ಬಿಡುತ್ತಿಲ್ಲ ಎಂದೂ ಶಂಕರಲಿಂಗೇಗೌಡ ಆರೋಪಿಸಿದ್ದಾರೆ. ಇದೇ ವಿಚಾರವಾಗಿ ಹಲವು ವರ್ಷಗಳಿಂದಲೂ ಈ ಕುಟುಂಬದಲ್ಲಿ ಜಗಳ ನಡೆಯುತ್ತಲೇ ಇತ್ತು.

ಇದೀಗ ಈ ಗಲಾಟೆ ವಿಕೋಪಕ್ಕೆ ಹೋಗಿ, ಶಂಕರಲಿಂಗೇಗೌಡನ ಮೇಲೆ ಹಲ್ಲೆ ನಡೆದಿದೆ.  ಹಲ್ಲೆಗೊಳಗಾದ ವ್ಯಕ್ತಿ ಸದ್ಯ ಸ್ಥಳೀಯ ಖಾಸಗಿ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಬೆಂಗಳೂರಲ್ಲಿ ಹತ್ಯೆ ಮಾಡಿದ್ದವರು ತಮಿಳುನಾಡಿನಲ್ಲಿ ಬಂಧನ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada