ಭಾರತದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಕಟ: ಪ್ರಶಸ್ತಿಗೆ ಭಾಜನರಾದ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಗಾಯಕ ಬಿಸ್ವಜಿತ್ ಚಟರ್ಜಿ

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಈ ಪ್ರಶಸ್ತಿ ಪ್ರಕಟಿಸಿದರು. ಮಾರ್ಚ್ 21ರಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

  • TV9 Web Team
  • Published On - 21:00 PM, 16 Jan 2021
ಭಾರತದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಕಟ: ಪ್ರಶಸ್ತಿಗೆ ಭಾಜನರಾದ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಗಾಯಕ ಬಿಸ್ವಜಿತ್ ಚಟರ್ಜಿ

ಗೋವಾದಲ್ಲಿ ನಡೆಯುತ್ತಿರುವ 51ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಕಟಿಸಲಾಗಿದ್ದು, ಹಿಂದಿ ಮತ್ತು ಬೆಂಗಾಲಿ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಗಾಯಕ ಬಿಸ್ವಜಿತ್ ಚಟರ್ಜಿ ಅವರಿಗೆ ಈ ಪ್ರಶಸ್ತಿ ದೊರೆತಿದೆ.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಈ ಪ್ರಶಸ್ತಿ ಪ್ರಕಟಿಸಿದರು. ಮಾರ್ಚ್ 21ರಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಬೀಸ್ ಸಾಲ್ ಬಾತ್, ಕೋಹ್ರಾ, ಏಪ್ರಿಲ್ ಫೂಲ್, ಮೇರೆ ಸನಮ್, ನೈಟ್ ಇನ್ ಲಂಡನ್, ದೋ ಕಾಲಿಯಾನ್ ಮತ್ತು ಕಿಸ್ಮತ್ ಬಿಸ್ವಜಿತ್ ಚಟರ್ಜಿ ಅವರ ಪ್ರಮುಖ ಚಿತ್ರಗಳು. ಹೆಸರಾಂತ ನಟಿಯರಾದ ಆಶಾ ಪರೇಖ್, ವಹೀದಾ ರೆಹಮಾನ್, ಮುಮ್ತಾಜ್, ಮಾಲಾ ಸಿನ್ಹ ಮತ್ತು ರಾಜಶ್ರೀ ಅವರೊಂದಿಗೆ ನಟಿಸಿದ್ದರು. ಅವರ ಕೆಲವು ಬೆಂಗಾಲಿ ಚಿತ್ರಗಳಲ್ಲಿ ಚೌರಿಂಗೀ (1968) ಮತ್ತು  ಘರ್ ನಸಿಂಪುರ್, ಶ್ರೀಮಾನ್ ಪೃಥ್ವಿರಾಜ್ (1973), ಜೈ ಬಾಬಾ ತಾರಕ್ ನಾಥ್ (1977) ಮತ್ತು ಅಮರ್ ಗೀತಿ (1983) ಸೇರಿವೆ. 1975ರಲ್ಲಿ ಬಿಸ್ವಜಿತ್ ತಮ್ಮದೇ ಸ್ವಂತ ಚಿತ್ರ ಖಹೆತೇ ಹೇ ಮುಜ್ಕೋ ರಾಜಾ ಚಿತ್ರವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದರು. ನಟನೆ, ನಿರ್ದೇಶನದ ಜೊತೆಗೆ ಅವರು ಗಾಯಕ ಮತ್ತು ನಿರ್ಮಾಪಕರೂ ಆಗಿದ್ದರು.