ಅಜಿಂಕ್ಯ ರಹಾನೆ ನೇತೃತ್ವದ ಭಾರತೀಯ ತಂಡವು ಬ್ರಿಸ್ಬೇನ್‌ನ ಗಬ್ಬಾದಲ್ಲಿ ಆಸ್ಟ್ರೇಲಿಯಾವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿ ನಾಲ್ಕು ಟೆಸ್ಟ್ ಸರಣಿಯನ್ನು 2-1 ರಿಂದ ಗೆದ್ದು ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಟೀಂ ಇಂಡಿಯಾಕ್ಕೆ ಶುಭಾಶಯ ತಿಳಿಸಿರುವ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್‌ಮೊರಿಸನ್, ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅದ್ಭುತ ಗೆಲುವು ಸಾಧಿಸಿದ ಟೀಂ ಇಂಡಿಯಾಕ್ಕೆ ಅಭಿನಂದನೆಗಳು. ಇದು ಕ್ರಿಕೆಟ್ ಆಟದ ಎರಡು ಅತ್ಯುತ್ತಮ ತಂಡಗಳು ಮತ್ತು ಆಟಗಾರರ ನಡುವೆ ನಡೆದ ಕಠಿಣ ಹೋರಾಟದ ಸ್ಪರ್ಧೆಯಾಗಿತ್ತು. ಅಲ್ಲದೆ ಟಿಮ್ ಪೈನ್ ಮತ್ತು ಆಸ್ಟ್ರೇಲಿಯಾದ ಪುರುಷರ ಟೆಸ್ಟ್ ತಂಡ ಮತ್ತೆ ಲಯಕ್ಕೆ ಮರಳುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಮಾರಿಸನ್ ಅವರ ಟ್ವೀಟ್ಗೆ ಉತ್ತರಿಸಿದ ಮೋದಿ, ಧನ್ಯವಾದಗಳು ಸ್ಕಾಟ್‌ಮೊರಿಸನ್, ಇದು ರೋಮಾಂಚಕ ಸರಣಿಯಾಗಿದ್ದು, ಎರಡೂ ತಂಡಗಳು ಸಹ ಉತ್ತಮವಾದ ಪ್ರದರ್ಶನ ತೋರಿವೆ. ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಅಸಾಧಾರಣ ಸ್ಪರ್ಧಿಗಳನ್ನು ರೂಪಿಸುತ್ತವೆ ಎಂದು ರೀ ಟ್ವೀಟ್ ಮಾಡಿದ್ದಾರೆ.
India vs Australia Test Series | ಐತಿಹಾಸಿಕ ಗೆಲುವು; ಟೀಮ್ ಇಂಡಿಯಾಗೆ ಮೋದಿ ಅಭಿನಂದನೆ