ವೀಕೆಂಡ್ ಅಂತ ಡೆಡ್ಲಿ ವ್ಹೀಲಿಂಗ್ ಮಾಡ್ತಿದ್ದ 8 ಪುಂಡರು ಅರೆಸ್ಟ್
ದೇವನಹಳ್ಳಿ: ವೀಕೆಂಡ್ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಡ್ಲಿ ವ್ಹೀಲಿಂಗ್ ಮಾಡುತ್ತಿದ್ದ 8 ಆರೋಪಿಗಳನ್ನು ಈಶಾನ್ಯ ವಿಭಾಗ ಸಂಚಾರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಡಿಸಿಪಿ ಸಜಿತ್ ನೇತೃತ್ವದಲ್ಲಿ ನಡೆದ ಪೊಲೀಸರ ಕಾರ್ಯಾಚರಣೆ ವೇಳೆ ಏರ್ಪೋಟ್ ರಸ್ತೆಯಲ್ಲಿ ವೀಲಿಂಗ್ ಮಾಡ್ತಿದ್ದ 8 ಜನ ಪುಂಡರನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ ವೀಲಿಂಗ್ ಮಾಡಲು ಬಳಸಿದ ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪುಂಡರು ವೀಲಿಂಗ್ ಮಾಡಲೆಂದೇ ವಿಶೇಷವಾಗಿ ಬೈಕ್ಗಳನ್ನು ಆಲ್ಟರ್ ಮಾಡಿದ್ದರು. ವೀಲಿಂಗ್ ಮಾಡುತ್ತಾ ಇತರೆ ವಾಹನ ಸವಾರರಿಗೂ ಕಿರಿಕಿರಿ ಮಾಡ್ತಿದ್ದರು. ಸದ್ಯ […]

ದೇವನಹಳ್ಳಿ: ವೀಕೆಂಡ್ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಡ್ಲಿ ವ್ಹೀಲಿಂಗ್ ಮಾಡುತ್ತಿದ್ದ 8 ಆರೋಪಿಗಳನ್ನು ಈಶಾನ್ಯ ವಿಭಾಗ ಸಂಚಾರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಡಿಸಿಪಿ ಸಜಿತ್ ನೇತೃತ್ವದಲ್ಲಿ ನಡೆದ ಪೊಲೀಸರ ಕಾರ್ಯಾಚರಣೆ ವೇಳೆ ಏರ್ಪೋಟ್ ರಸ್ತೆಯಲ್ಲಿ ವೀಲಿಂಗ್ ಮಾಡ್ತಿದ್ದ 8 ಜನ ಪುಂಡರನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ ವೀಲಿಂಗ್ ಮಾಡಲು ಬಳಸಿದ ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪುಂಡರು ವೀಲಿಂಗ್ ಮಾಡಲೆಂದೇ ವಿಶೇಷವಾಗಿ ಬೈಕ್ಗಳನ್ನು ಆಲ್ಟರ್ ಮಾಡಿದ್ದರು.
ವೀಲಿಂಗ್ ಮಾಡುತ್ತಾ ಇತರೆ ವಾಹನ ಸವಾರರಿಗೂ ಕಿರಿಕಿರಿ ಮಾಡ್ತಿದ್ದರು. ಸದ್ಯ 8 ಜನರನ್ನು ಬಂಧಿಸಿದ್ದು ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.