ಪದೇಪದೆ ತಪ್ಪು ಮಾಡುತ್ತಿರುವ ಪಾಕ್ ಪ್ರೇಮಿ, ಪೇದೆ ಸನಾವುಲ್ಲಾ SUSPEND
ದಾವಣಗೆರೆ: ಪವರ್ ಆಫ್ ಪಾಕಿಸ್ತಾನ ಪೇಜ್ನಲ್ಲಿ ಪಾಕ್ ಪರ ಸಂದೇಶ ಶೇರ್ ಮಾಡಿದ್ದ ಪ್ರಕರಣದಲ್ಲಿ ಕಾನ್ಸ್‌ಟೇಬಲ್ ಸನಾವುಲ್ಲಾನನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಸನಾವುಲ್ಲಾನನ್ನ ನಿನ್ನೆಯೇ ಸೇವೆಯಿಂದ ಅಮಾನತ್ತುಗೊಳಿಸಿದ್ದಾರೆ. ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಯಿಂದ ವಿಚಾರಣೆ ಆರಂಭವಾಗಿದೆ. ಎರಡು ದಿನಗಳಲ್ಲಿ ಪ್ರಕರಣ ಸಂಬಂಧ ವರದಿ ಸಲ್ಲಿಕೆ ಸಾಧ್ಯತೆಯಿದೆ. ಪಾಕ್ ಪರ ಸಂದೇಶ ಹಂಚಿಕೆ ಪ್ರಕರಣದಲ್ಲಿ ಅಮಾನತ್ತುಗೊಂಡಿರುವ ಕಾನ್ಸ್‌ಟೇಬಲ್ ಸನಾವುಲ್ಲಾ ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಸೇವೆಯಲ್ಲಿದ್ದ. […]

ದಾವಣಗೆರೆ: ಪವರ್ ಆಫ್ ಪಾಕಿಸ್ತಾನ ಪೇಜ್ನಲ್ಲಿ ಪಾಕ್ ಪರ ಸಂದೇಶ ಶೇರ್ ಮಾಡಿದ್ದ ಪ್ರಕರಣದಲ್ಲಿ ಕಾನ್ಸ್‌ಟೇಬಲ್ ಸನಾವುಲ್ಲಾನನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಸನಾವುಲ್ಲಾನನ್ನ ನಿನ್ನೆಯೇ ಸೇವೆಯಿಂದ ಅಮಾನತ್ತುಗೊಳಿಸಿದ್ದಾರೆ. ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಯಿಂದ ವಿಚಾರಣೆ ಆರಂಭವಾಗಿದೆ. ಎರಡು ದಿನಗಳಲ್ಲಿ ಪ್ರಕರಣ ಸಂಬಂಧ ವರದಿ ಸಲ್ಲಿಕೆ ಸಾಧ್ಯತೆಯಿದೆ.
ಪಾಕ್ ಪರ ಸಂದೇಶ ಹಂಚಿಕೆ ಪ್ರಕರಣದಲ್ಲಿ ಅಮಾನತ್ತುಗೊಂಡಿರುವ ಕಾನ್ಸ್‌ಟೇಬಲ್ ಸನಾವುಲ್ಲಾ ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಸೇವೆಯಲ್ಲಿದ್ದ. ಈತ ಪವರ್ ಆಫ್ ಪಾಕಿಸ್ತಾನ್ ಎಂಬ ಸಂದೇಶವಿದ್ದ ಫೇಸ್ಬುಕ್ ಪೇಜ್ ಲೈಕ್ ಮಾಡಿ, ವಾಟ್ಸ್ ಆಪ್ ಗ್ರೂಪ್ ನಲ್ಲಿ ಆಡಿಯೋ ತುಣುಕುಗಳನ್ನ ಶೇರ್ ಮಾಡಿದ್ದ. ಇದೇ ರೀತಿ ಈ ಹಿಂದೆಯೂ ಅನೇಕ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಕಾನ್ಸ್‌ಟೇಬಲ್ ಸನಾವುಲ್ಲಾ ಸಂದೇಶಗಳನ್ನ ಹಾಕಿದ್ದ.