ಬೆಂಗಳೂರು: ಟೌನ್ಹಾಲ್ ಬಳಿ ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ
ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೇ ಸಹ ಕೂಗಿದರು. ಸಿಎಂ ಯಡಿಯೂರಪ್ಪರ ಫೋಟೋಗೆ ಚಪ್ಪಲಿಯಿಂದ ಹೊಡೆದು ತಮ್ಮ ಆಕ್ರೋಶ ಹೊರಹಾಕಿದರು.ಈ ವೇಳೆ, ಪ್ರತಿಭಟನಾಕಾರರನ್ನು ಬಂಧಿಸಲು ಪೊಲೀಸರು ಮುಂದಾದರು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದ ಧರಣಿನಿರತರನ್ನು ಬಿಎಂಟಿಸಿ ಬಸ್ಗಳಲ್ಲಿ ತುಂಬಿಸಿ ವಶಕ್ಕೆ ಪಡೆದರು.
ಬೆಂಗಳೂರು: ಮರಾಠ ನಿಗಮ ರಚನೆ ವಿರೋಧಿಸಿ ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನೂರಾರು ಕನ್ನಡ ಪರ ಸಂಘಟನೆಗಳ ಸದಸ್ಯರು ಟೌನ್ಹಾಲ್ ಬಳಿ ಜಮಾಯಿಸಿದರು. ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೇ ಸಹ ಕೂಗಿದರು. ಸಿಎಂ ಯಡಿಯೂರಪ್ಪರ ಫೋಟೋಗೆ ಚಪ್ಪಲಿಯಿಂದ ಹೊಡೆದು ತಮ್ಮ ಆಕ್ರೋಶ ಹೊರಹಾಕಿದರು.
ಈ ವೇಳೆ, ಪ್ರತಿಭಟನಾಕಾರರನ್ನು ಬಂಧಿಸಲು ಪೊಲೀಸರು ಮುಂದಾದರು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದ ಧರಣಿನಿರತರನ್ನು ಬಿಎಂಟಿಸಿ ಬಸ್ಗಳಲ್ಲಿ ತುಂಬಿಸಿ ವಶಕ್ಕೆ ಪಡೆದರು. ಪ್ರತಿಭಟನಾಕಾರರನ್ನು ಚಾಮರಾಜಪೇಟೆ ಸಿಎಆರ್ ಗ್ರೌಂಡ್ಗೆ ಶಿಫ್ಟ್ ಮಾಡಲಾಯಿತು ಎಂದು ತಿಳಿದುಬಂದಿದೆ.
ಟೌನ್ ಹಾಲ್ ಆಯ್ತು ಪ್ರತಿಭಟನೆಯ ಪವರ್ ಸೆಂಟರ್: ಒಬ್ಬರು ಅರೆಸ್ಟ್ ಆಗ್ತಿದಂತೆ ಮತ್ತೊಂದು ಗುಂಪು ಧರಣಿಗೆ ರೆಡಿ
Published On - 8:57 am, Sat, 5 December 20