ಕತ್ತಲಲ್ಲಿ ಶಾಪಿಂಗ್ ಮಾಲ್‌ಗಳಿಗೆ ನುಗ್ಗಿ ಕಳ್ಳತನ ಮಾಡ್ತಿದ್ದ ಕಳ್ಳರ ಬಂಧನ
ಶಾಪಿಂಗ್ ಮಾರ್ಟ್ಗಳನ್ನು ಗುರಿಯಾಗಿಸಿಕೊಂಡು ರಾತ್ರಿ ಹೊತ್ತಿನಲ್ಲಿ ಅಲ್ಲಿಗೆ ಹೋಗಿ ಕಳ್ಳತನ ಮಾಡುತ್ತಿದ್ದ ಖದೀಮರನ್ನು ತನಿಖೆ ನಡೆಸಿ ಬೆಂಗಳೂರಿನ ಬಾಗಲಗುಂಟೆ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ನೆಲಮಂಗಲ: ಶಾಪಿಂಗ್ ಮಾಲ್‌ಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಕಳ್ಳರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಮನ್ಸೂರ್(26), ಇಮ್ರಾನ್(24), ಜಿಲ್ಲಾನ್(25) ಬಂಧಿತ ಆರೋಪಿಗಳು.
ಈ ಖದೀಮರು ಶಾಪಿಂಗ್ ಮಾರ್ಟ್ಗಳನ್ನು ಗುರಿಯಾಗಿಸಿಕೊಂಡು ರಾತ್ರಿ ಹೊತ್ತಿನಲ್ಲಿ ಅಲ್ಲಿಗೆ ಹೋಗಿ ಕಳ್ಳತನ ಮಾಡುತ್ತಿದ್ದರು. ಇದೇ ರೀತಿ ಬೆಂಗಳೂರಿನ ನಾಲ್ಕು ಠಾಣೆ ವ್ಯಾಪ್ತಿಗಳಲ್ಲಿ ಶಾಪಿಂಗ್ ಮಾಲ್ ಬೀಗ ಒಡೆದು ಕಳ್ಳತನ ಮಾಡಿದ್ದರು. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತನಿಖೆ ನಡೆಸಿ ಬೆಂಗಳೂರಿನ ಬಾಗಲಗುಂಟೆ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರಿಂದ ಬೈಕ್, ಮೊಬೈಲ್, 50 ಸಾವಿರ ನಗದು ಜಪ್ತಿ ಮಾಡಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ವಿಜಯಪುರ ಸರಣಿ ಮನೆ, ದೇವಸ್ಥಾನಗಳ ಕಳ್ಳತನ ಮುಂದುವರಿಕೆ: ಫಿನಾಯಿಲ್ ಮಾರಾಟ ನೆಪದಲ್ಲಿ ಬಂದವರಿಂದ ಕುಕೃತ್ಯ