AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಸೋಂಕು ಮತ್ತು ಪಾಸಿಟಿವಿ ಪ್ರಮಾಣ ಗಣನೀಯವಾಗಿ ತಗ್ಗಿದ್ದರೂ ಶನಿವಾರ 45 ಸೋಂಕಿತರು ಪಿಡುಗಿಗೆ ಬಲಿಯಾಗಿದ್ದಾರೆ

ಸೋಂಕಿನ ಪ್ರಮಾಣ ಮತ್ತು ಪಾಸಿಟಿವಿಟಿ ದರ ತಗ್ಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರು ವೀಕೆಂಡ್ ಕರ್ಫ್ಯೂ ತೆರವುಗೊಳಿಸುವ ಕುರಿತು ಕಳಿಸಿದ ಪ್ರಸ್ತಾಪವೊಂದನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರು ತಳ್ಳಿಹಾಕಿದ್ದಾರೆ.

ದೆಹಲಿಯಲ್ಲಿ ಸೋಂಕು ಮತ್ತು ಪಾಸಿಟಿವಿ ಪ್ರಮಾಣ ಗಣನೀಯವಾಗಿ ತಗ್ಗಿದ್ದರೂ ಶನಿವಾರ 45 ಸೋಂಕಿತರು ಪಿಡುಗಿಗೆ ಬಲಿಯಾಗಿದ್ದಾರೆ
ದೆಹಲಿಯಲ್ಲಿ ಟೆಸ್ಟಿಂಗ್ ಹೆಚ್ಚುತ್ತಿದೆ
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Jan 22, 2022 | 11:16 PM

Share

ನವದೆಹಲಿ: ಕೋವಿಡ್ ಮೂರನೇ ಅಲೆಯಲ್ಲಿ (third wave) ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆಯಾದರೂ ಕೆಲವು ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ದೆಹಲಿ (Delhi ) ಮತ್ತು ಮುಂಬೈ (Mumbai) ಮಹಾನಗರಗಳಲ್ಲಿ ಸೋಂಕಿತರ ಸಂಖ್ಯೆ ಮತ್ತು ಪಾಸಿಟಿವಿಟಿ ಪ್ರಮಾಣ (positivity rate) ತಗ್ಗುತ್ತಿದೆ. ಅಲ್ಲದೆ, ಸೋಂಕಿತರನ್ನು ಅಸ್ಪತ್ರೆಗೆ ಸೇರಿಸುವ ಪರಿಸ್ಥಿತಿಯೂ ಎರಡನೇ ಅಲೆಯಲ್ಲಿದ್ದಂತೆ ಸೃಷ್ಟಿಯಾಗುತ್ತಿಲ್ಲ. ದೆಹಲಿಯಲ್ಲಿ ಶನಿವಾರ 11,486 ಸೋಂಕಿತರು ಪತ್ತೆಯಾಗಿದ್ದಾರೆ. ಶುಕ್ರವಾರದ ಸಂಖ್ಯೆಗೆ (10,756) ಹೋಲಿಸಿದರೆ ಇದು ಶೇಕಡಾ 7 ರಷ್ಟು ಹೆಚ್ಚಿದೆಯಾದರೂ ಟೆಸ್ಟ್ಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಶುಕ್ರವಾರದಂದು 59,629 ಜನರ ಟೆಸ್ಟ್ ನಡೆದರೆ ಶನಿವಾರ 70,226 ಜನರ ಕೋವಿಡ್ ಟೆಸ್ಟ್ ಗೊಳಗಾಗಿದ್ದಾರೆ. ರಾಷ್ಟ್ರದ ರಾಜಧಾನಿಯಲ್ಲಿ ಪಾಸಿಟಿವಿಟಿ ದರ ಹೆಚ್ಚುಕಡಿಮೆ ಅರ್ಧದಷ್ಟು ಕಡಿಮೆಯಾಗಿರುವುದು ಉತ್ತೇಜನಕಾರಿ ಸಂಗತಿ. ಜನೆವರಿ 15ರಂದು ಶೇಕಡಾ 30.64 ಇದ್ದ ಪಾಸಿಟಿವಿಟಿ ರೇಟ್ ಶನಿವಾರ ಶೇ. 16.36 ಕ್ಕೆ ಇಳಿದಿದೆ. ಆದರೆ ಶನಿವಾರ ದೆಹಲಿಯಲ್ಲಿ ಪಿಡುಗಿಗೆ 45 ಜನ ಬಲಿಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಯಾಕೆಂದರೆ ಕಳೆದ 7 ತಿಂಗಳಲ್ಲಿ ಇದೇ ಅತಿ ಹೆಚ್ಚು ಸಾವುಗಳ ಸಂಖ್ಯೆಯಾಗಿದೆ. ಕಳೆದ ಜೂನ್ 5 ರಂದು 68 ಜನ ಮಹಾಮಾರಿಗೆ ಬಲಿಯಾಗಿದ್ದರು.

ಶನಿವಾರದ ಸೋಂಕಿನ ಪ್ರಕರಣಗಳ ಸೇರಿಸಿದರೆ, ದೆಹಲಿಯಲ್ಲಿ ಇದುವರೆಗೆ ಸೋಂಕು ತಾಕಿಸಿಕೊಂಡವರ ಸಂಖ್ಯೆ 17,82,514 ಕ್ಕೆ ಏರಿದೆ. ಹಾಗೆಯೇ ಇಂದು ಬಲಿಯಾದವರು ಸೇರಿ ಮೃತರ ಸಂಖ್ಯೆ 25,586ಕ್ಕೆ ಏರಿದೆ.

ಸೋಂಕಿನ ಪ್ರಮಾಣ ಮತ್ತು ಪಾಸಿಟಿವಿಟಿ ದರ ತಗ್ಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರು ವೀಕೆಂಡ್ ಕರ್ಫ್ಯೂ ತೆರವುಗೊಳಿಸುವ ಕುರಿತು ಕಳಿಸಿದ ಪ್ರಸ್ತಾಪವೊಂದನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರು ತಳ್ಳಿಹಾಕಿದ್ದಾರೆ. ವೀಕೆಂಡ್ ಕರ್ಫ್ಯೂ ಅಲ್ಲದೆ ದೆಹಲಿ ಅಂಗಡಿ ಮುಗ್ಗಟ್ಟುಗಳು ಸಮ-ಬೆಸ ಸಂಖ್ಯೆ ಆಧಾರದಲ್ಲಿ ತೆರೆದಿರುತ್ತವೆ.

ಕೋವಿಡ್ ಸ್ಥಿತಿಯಲ್ಲಿ ಮತ್ತಷ್ಟು ಸುಧಾರಣೆ ಅಗುವವರೆಗೆ ಸದ್ಯದ ವ್ಯವಸ್ಥೆಯೇ ಮುಂದುದವರಿಯಲಿ ಎಂದು ಬೈಜ್ವಾಲ್ ಹೇಳಿದ್ದಾರೆ. ಆದರೆ ದೆಹಲಿ ಖಾಸಗಿ ಕಚೇರಿಗಳಲ್ಲಿ ಶೇ. 50 ರಷ್ಟು ಹಾಜರಾತಿಗೆ ಅನುಮತಿ ನೀಡುವ ಸರ್ಕಾರದ ಪ್ರಸ್ತಾಪಕ್ಕೆ ಅವರು ಸಮ್ಮತಿ ಸೂಚಿಸಿದ್ದಾರೆ.

ಜನೆವರಿ 14ರವೆರೆಗೆ ದೆಹಲಿಯಲ್ಲಿ ದಿನಕ್ಕೆ 30,000 ದಷ್ಟು ಸೋಂಕಿನ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಅಲ್ಲಿಂದೀಚೆಗೆ ಪ್ರತಿದಿನ 12,000 ಕ್ಕಿಂತ ಕಡಿಮೆ ಕೇಸ್ಗಳು ಪತ್ತೆಯಾಗುತ್ತಿವೆ.

ದೆಹಲಿ ಸರ್ಕಾರದ ಅರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ದೆಹಲಿ ಮಹಾನಗರದಲ್ಲಿ 58,593 ಸಕ್ರಿಯ ಪ್ರಕರರಣಗಳಿವೆಯಾದರೂ ಅವುಗಳ ಪೈಕಿ 48,356 ಪ್ರಕರಣಗಳು ಹೋಮ್ ಐಸೊಲೇಶನ್ನಲಿವೆ. ಹಾಗಾಗಿ ವ್ಯದ್ಯಕೀಯ ವ್ಯವಸ್ಥೆ ಮೇಲೆ ಯಾವುದೇ ಹೆಚ್ಚುವರಿ ಒತ್ತಡ ಬೀಳುತ್ತಿಲ್ಲ.

ಇದನ್ನೂ ಓದಿ:   ಕೋವಿಡ್​​ನಿಂದಾಗಿ ಮನೆ ಬಿಡಲು ಸಾಧ್ಯವಾಗ್ತಿಲ್ಲ ಎಂದು ಸಬೂಬು ಹೇಳಿಕೊಂಡು ಬಂದಿದ್ದ ವಿಜಯ್ ಮಲ್ಯ ಇನ್ನು ಲಂಡನ್​ ಮನೆ ಬಿಡಲೇಬೇಕು!

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ