AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್​​ನಿಂದಾಗಿ ಮನೆ ಬಿಡಲು ಸಾಧ್ಯವಾಗ್ತಿಲ್ಲ ಎಂದು ಸಬೂಬು ಹೇಳಿಕೊಂಡು ಬಂದಿದ್ದ ವಿಜಯ್ ಮಲ್ಯ ಇನ್ನು ಲಂಡನ್​ ಮನೆ ಬಿಡಲೇಬೇಕು!

UBS bank: ಲಂಡನ್‌ನಲ್ಲಿನ ವಿಜಯ್ ಮಲ್ಯ ಐಷಾರಾಮಿ ಮನೆ ಮರು ಸ್ವಾಧೀನ ಮತ್ತು ಮಾರಾಟದ ಹಕ್ಕನ್ನು UBS ಬ್ಯಾಂಕ್‌ ಪಡೆದುಕೊಂಡಿದೆ. ಲಂಡನ್‌ನಲ್ಲಿ (London) ಮಗ, 95 ವರ್ಷದ ತಾಯಿ ಜತೆ ಮಲ್ಯ ವಾಸವಿದ್ದಾನೆ.

ಕೋವಿಡ್​​ನಿಂದಾಗಿ ಮನೆ ಬಿಡಲು ಸಾಧ್ಯವಾಗ್ತಿಲ್ಲ ಎಂದು ಸಬೂಬು ಹೇಳಿಕೊಂಡು ಬಂದಿದ್ದ ವಿಜಯ್ ಮಲ್ಯ ಇನ್ನು ಲಂಡನ್​ ಮನೆ ಬಿಡಲೇಬೇಕು!
ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಆಸ್ತಿ ಪರಭಾರೆ ಕೇಸ್​ ಗೆದ್ದ UBS ಬ್ಯಾಂಕ್‌
TV9 Web
| Edited By: ಸಾಧು ಶ್ರೀನಾಥ್​|

Updated on:Jan 19, 2022 | 7:58 AM

Share

ಲಂಡನ್‌: ಮುಖ್ಯವಾಗಿ ಸರ್ಕಾರಿ ಬ್ಯಾಂಕ್​ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಸೇರಿದಂತೆ ಅನೇಕ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿ ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ( Vijay Mallya) ವಿರುದ್ಧ ಆಸ್ತಿ ಪರಭಾರೆ (mortgage) ಪ್ರಕರಣದಲ್ಲಿ Swiss bank UBS ಬ್ಯಾಂಕ್‌ ಗೆಲುವು ಸಾಧಿಸಿದೆ. ಸೆಂಟ್ರಲ್​​ ಲಂಡನ್‌ನಲ್ಲಿನ ವಿಜಯ್ ಮಲ್ಯ ಐಷಾರಾಮಿ ಮನೆ ಮರು ಸ್ವಾಧೀನ ಮತ್ತು ಮಾರಾಟದ ಹಕ್ಕನ್ನು ಯುಬಿಎಸ್​ ಬ್ಯಾಂಕ್‌ ಪಡೆದುಕೊಂಡಿದೆ. ಲಂಡನ್‌ನಲ್ಲಿ 35 ವರ್ಷದ ಮಗ ಸಿದ್ಧಾರ್ಥ, 95 ವರ್ಷದ ತಾಯಿ ಲಲಿತಾ ಅವರ ಜತೆ 66 ವರ್ಷದ ಮಲ್ಯ ವಾಸವಿದ್ದಾನೆ. ಕುತೂಹಲಕಾರಿ ಸಂಗತಿಯೆಂದರೆ 2020ರ ಏಪ್ರಿಲ್​​ನಿಂದ UBS ಬ್ಯಾಂಕ್‌ಗೆ ಸಾಲ ಮರುಪಾವತಿ ಮಾಡದೆ ಕಾಲ ತಳ್ಳಿಕೊಂಡು ಬಂದಿದ್ದ. ಕೋವಿಡ್​​ನಿಂದಾಗಿ ಮನೆ ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಸಬೂಬು ಹೇಳಿಕೊಂಡು ಬಂದಿದ್ದ ವಿಜಯ್ ಮಲ್ಯಗೆ ಈಗ ಐಷಾರಾಮಿ ಮನೆಯಿಂದ ಹೊರಬೀಳುವುದು ಅನಿವಾರ್ಯವಾಗಿದೆ.

ಮಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ಸೆಂಟ್ರಲ್ ಲಂಡನ್​ನಲ್ಲಿರುವ ಪ್ರತಿಷ್ಠಿತ ಮ್ಯಾಡಮ್ ಟುಸ್ಸಾಡ್ ಮೇಣದ ಮ್ಯೂಸಿಯಂ, ರೆಜೆಂಟ್ಸ್​ ಪಾರ್ಕ್​, ಕಾರ್ನ್​​ವಾಲ್​ ಟೆರೇಸ್ ಆಜುಬಾಜಿನಲ್ಲಿ ​ಐಷಾರಾಮಿ ಮನೆ ಮಾಡಿಕೊಂಡಿದ್ದ. ಆದರೆ ಇದನ್ನು ಕೋಟ್ಯಂತರ ರೂಪಾಯಿ ಸಾಲಕ್ಕಾಗಿ UBS ಬ್ಯಾಂಕ್‌ಗೆ ಮಾರ್ಟ್​ಗೇಜ್​ ಮಾಡಿದ್ದ. ಸಾಲ ತೀರಿಸಲು ವಿಜಯ್ ಮಲ್ಯ ಅಸಹಾಯಕನಾಗಿರುವುದರಿಂದ ಮನೆಯನ್ನು ಸ್ವಾಧೀನಪಡಿಸಿಕೊಳ್ಳಲು (repossess and sell) ಅವಕಾಶ ನೀಡಬೇಕೆಂದು ಸ್ವಿಸ್​ ಮೂಲ ಯುಬಿಎಸ್ ಬ್ಯಾಂಕ್​ ಲಂಡನ್ ಕೋರ್ಟ್​​ನಲ್ಲಿ ದಾವೆ ಹೂಡಿತ್ತು. ವಿಜಯ್ ಮಲ್ಯ Rose Capital Ventures Limite ಗೆ ಸುಮಾರು 200 ಕೋಟಿ ರೂಪಾಯಿ ಸಾಲ ತೀರಿಸಬೇಕಿದೆ.

ಅಂದಹಾಗೆ ವಿಜಯ್ ಮಲ್ಯ ಈ ಮನೆಯನ್ನು ಬಿಟ್ಟರೆ ಸೀದಾ ನಾಳೆಯೇ ಬೀದಿಗೆ ಬರುತ್ತಾರೆ ಅಂತೇನೂ ಇಲ್ಲ. ಏಕೆಂದರೆ ಮಲ್ಯ ಲಂಡನ್​​ನಲ್ಲಿ ಇಂತಹುದೇ ಇನ್ನೂ ಅನೇಕ ವೈಭವೋಪೇತ ಮನೆಗಳನ್ನು ಹೊಂದಿದ್ದಾರೆ!

ಇದನ್ನೂ ಓದಿ: Vijay Mallya: ವಿಜಯ್ ಮಲ್ಯ ದಿವಾಳಿ ಎಂದ ಬ್ರಿಟನ್ ಕೋರ್ಟ್

ಉದ್ಯಮಿ ವಿಜಯ್ ಮಲ್ಯ ವಿರುದ್ಧ ಆಸ್ತಿ ಪರಭಾರೆ ಕೇಸ್​ ಗೆದ್ದ UBS ಬ್ಯಾಂಕ್‌ ಕುರಿತಾದ ANI ಟ್ವೀಟ್​:

Published On - 7:23 am, Wed, 19 January 22

Follow Us
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ