Big News: ದೇಶದ 80 ಕೋಟಿ ಬಡವರಿಗೆ ಮತ್ತೆ 3 ತಿಂಗಳು ಉಚಿತ ರೇಷನ್; ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

ಭಾರತದ 80 ಕೋಟಿ ಬಡವರಿಗೆ ಇನ್ನೂ 3 ತಿಂಗಳು ಉಚಿತ ಪಡಿತರ ಸಿಗಲಿದೆ. ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

Big News: ದೇಶದ 80 ಕೋಟಿ ಬಡವರಿಗೆ ಮತ್ತೆ 3 ತಿಂಗಳು ಉಚಿತ ರೇಷನ್; ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಸಾಂದರ್ಭಿಕ ಚಿತ್ರ
TV9kannada Web Team

| Edited By: Sushma Chakre

Sep 28, 2022 | 1:52 PM

ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY)ಯನ್ನು 3 ತಿಂಗಳು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಬಡವರಿಗೆ ಮತ್ತೆ 3 ತಿಂಗಳ ಕಾಲ ಉಚಿತ ರೇಷನ್ (Free Ration) ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ 80 ಕೋಟಿ ಬಡವರಿಗೆ ಇನ್ನೂ 3 ತಿಂಗಳು ಉಚಿತ ಪಡಿತರ ಸಿಗಲಿದೆ. ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

PMGKAY ಯೋಜನೆಯಡಿ ಕೇಂದ್ರ ಸರ್ಕಾರವು ಬಡವರಿಗೆ ಉಚಿತ ಪಡಿತರವನ್ನು ನೀಡುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ಬಡವರ ಕಷ್ಟವನ್ನು ಕಡಿಮೆ ಮಾಡಲು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಸುಮಾರು 80 ಕೋಟಿ ಫಲಾನುಭವಿಗಳಿಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲು ಈ ಯೋಜನೆಯನ್ನು ಮಾರ್ಚ್ 2020ರಲ್ಲಿ ಪ್ರಾರಂಭಿಸಲಾಗಿತ್ತು. ಅಂದಿನಿಂದ ಈ ಯೋಜನೆಯನ್ನು ಹಲವಾರು ಬಾರಿ ವಿಸ್ತರಿಸಲಾಗಿದೆ. ಸೆಪ್ಟೆಂಬರ್ 30ರವರೆಗೆ ಜಾರಿಯಲ್ಲಿದ್ದ ಈ ಯೋಜನೆಯನ್ನು ಇನ್ನೂ 3 ತಿಂಗಳು ವಿಸ್ತರಿಸಲಾಗಿದೆ.

ಇದನ್ನೂ ಓದಿ: ಉಚಿತ ಆಹಾರ ಧಾನ್ಯಗಳ ವಿತರಣೆ ಯೋಜನೆ ಮೂರು ತಿಂಗಳಿಗೆ ವಿಸ್ತರಿಸುವ ಸಾಧ್ಯತೆ: ವರದಿ

ಉಚಿತ ಧಾನ್ಯಗಳು ಎನ್‌ಎಫ್‌ಎಸ್‌ಎ ಅಡಿಯಲ್ಲಿ ಒದಗಿಸಲಾದ ಸಾಮಾನ್ಯ ಕೋಟಾಕ್ಕಿಂತ ಹೆಚ್ಚು ಮತ್ತು ಹೆಚ್ಚು ಸಬ್ಸಿಡಿ ದರದಲ್ಲಿ ಪ್ರತಿ ಕೆಜಿಗೆ 2-3 ರೂ. ನೀಡಲಾಗುತ್ತಿದೆ. ಆರಂಭದಲ್ಲಿ 2020-21 ರಲ್ಲಿ PMGKAY ಯೋಜನೆಯನ್ನು 3 ತಿಂಗಳ ಅವಧಿಗೆ ಮಾತ್ರ ಘೋಷಿಸಲಾಯಿತು. ನಂತರ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜುಲೈನಿಂದ ನವೆಂಬರ್ 2020ರವರೆಗೆ ವಿಸ್ತರಿಸಿತು ಕೊವಿಡ್-19 ಬಿಕ್ಕಟ್ಟು 2021-22ರಲ್ಲಿ ಮುಂದುವರೆದಿದ್ದರಿಂದ ಕೇಂದ್ರ ಸರ್ಕಾರ ಏಪ್ರಿಲ್ 2021ರಲ್ಲಿ 2 ತಿಂಗಳ ಅವಧಿಗೆ ಮೇ ಮತ್ತು ಜೂನ್ 2021ರವರೆಗೆ ಈ ಯೋಜನೆಯನ್ನು ಮತ್ತೆ ವಿಸ್ತರಿಸಿತು. ನಂತರ ಜುಲೈನಿಂದ ನವೆಂಬರ್‌ವರೆಗೆ ಇನ್ನೂ 5 ತಿಂಗಳವರೆಗೆ ಈ ಯೋಜನೆಯನ್ನು ವಿಸ್ತರಿಸಿತು. ನಂತರ ಈ ಯೋಜನೆಯನ್ನು ಮತ್ತೆ ಡಿಸೆಂಬರ್ 2021 ರಿಂದ ಮಾರ್ಚ್ 2022ರವರೆಗೆ ವಿಸ್ತರಿಸಲಾಯಿತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶುರುವಾಯಿತು ಆಪರೇಷನ್​ ಒತ್ತುವರಿ ತೆರವು, 600 ಕಟ್ಟಡಗಳಿಗೆ ನೋಟಿಸ್​: ತುಷಾರ್ ಗಿರಿನಾಥ್

80 ಸಾವಿರ ಕೋಟಿ ರೂ. ವೆಚ್ಚದಲ್ಲಿ ಬಡವರಿಗೆ 5 ಕೆಜಿ ಆಹಾರಧಾನ್ಯಗಳನ್ನು ಉಚಿತವಾಗಿ ನೀಡುವ ಯೋಜನೆಯನ್ನು ಕೇಂದ್ರವು ಮಾರ್ಚ್ 26ರಿಂದ ಸೆಪ್ಟೆಂಬರ್ 30ರವರೆಗೆ ಅಂದರೆ 6 ತಿಂಗಳವರೆಗೆ ವಿಸ್ತರಿಸಿತ್ತು. PMGKAY ಅಡಿಯಲ್ಲಿ ಈ ಯೋಜನೆಯ ಒಟ್ಟು ವೆಚ್ಚ ಸುಮಾರು 3.40 ಲಕ್ಷ ಕೋಟಿ ರೂ. ಆಗಿದೆ. ಈ ಯೋಜನೆಯಡಿ ಪಡೆದ ಉಚಿತ ಪಡಿತರವು ಪಡಿತರ ಅಂಗಡಿಗಳ ಮೂಲಕ ಕಾರ್ಡ್​​ದಾರರಿಗೆ ಒದಗಿಸುವ ಸಬ್ಸಿಡಿ ಆಹಾರ ಧಾನ್ಯಗಳಿಗಿಂತ ಹೆಚ್ಚಾಗಿರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada