B.Y. ವಿಜಯೇಂದ್ರಗೆ ಹೆಚ್ಚಿದ ಬೇಡಿಕೆ.. ಮಸ್ಕಿ ಬೈಎಲೆಕ್ಷನ್ ಉಸ್ತುವಾರಿ ವಹಿಸಲು ‘ಮಸ್ಕಾ’!
ಬೆಂಗಳೂರು: ಮೊದಲು K.R. ಪೇಟೆ.. ಇದೀಗ ಶಿರಾ ಉಪಚುನಾವಣೆ. ಕರ್ನಾಟಕದಲ್ಲಿ ಕಮಲವನ್ನು ಅರಳಿಸಲು ಕೇಸರಿ ಪಕ್ಷ ಭಾರಿ ಕಸರತ್ತು ನಡೆಸಿದೆ. ಬಿಜೆಪಿ ನಡೆಸಿರುವ ಚುನಾವಣಾ ಅಶ್ವಮೇಧ ಯಾಗದಲ್ಲಿ ರಾಜ್ಯದ ಹಲವು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಪಡೆದಿದೆ. ಅದರಲ್ಲೂ ಪಕ್ಷದ ಯುವ ನಾಯಕ ಹಾಗೂ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಚುನಾವಣೆಯ ಉಸ್ತುವಾರಿ ವಹಸಿಕೊಂಡರೆ ಬಿಜೆಪಿಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬ ಮಾತು ಕಮಲ ಪಾಳಯದಲ್ಲಿ ಜೋರಾಗಿ ರೌಂಡ್ಸ್ ಹೊಡೀತಿದೆ. ಮಸ್ಕಿ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಹೆಚ್ಚಾಗಿರುವ […]

ಬೆಂಗಳೂರು: ಮೊದಲು K.R. ಪೇಟೆ.. ಇದೀಗ ಶಿರಾ ಉಪಚುನಾವಣೆ. ಕರ್ನಾಟಕದಲ್ಲಿ ಕಮಲವನ್ನು ಅರಳಿಸಲು ಕೇಸರಿ ಪಕ್ಷ ಭಾರಿ ಕಸರತ್ತು ನಡೆಸಿದೆ. ಬಿಜೆಪಿ ನಡೆಸಿರುವ ಚುನಾವಣಾ ಅಶ್ವಮೇಧ ಯಾಗದಲ್ಲಿ ರಾಜ್ಯದ ಹಲವು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಪಡೆದಿದೆ. ಅದರಲ್ಲೂ ಪಕ್ಷದ ಯುವ ನಾಯಕ ಹಾಗೂ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಚುನಾವಣೆಯ ಉಸ್ತುವಾರಿ ವಹಸಿಕೊಂಡರೆ ಬಿಜೆಪಿಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬ ಮಾತು ಕಮಲ ಪಾಳಯದಲ್ಲಿ ಜೋರಾಗಿ ರೌಂಡ್ಸ್ ಹೊಡೀತಿದೆ.
ಮಸ್ಕಿ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಹೆಚ್ಚಾಗಿರುವ ಕಾರಣ ವಿಜಯೇಂದ್ರ ಉಸ್ತುವಾರಿಗೆ ದುಂಬಾಲು! ಇದೀಗ, ಮಸ್ಕಿ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೇ ವಹಿಸಬೇಕು ಎಂದು ಬಿಜೆಪಿಯ ಸಂಭವನೀಯ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಸ್ಕಿ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಹೆಚ್ಚಾಗಿರುವ ಕಾರಣ ವಿಜಯೇಂದ್ರ ಅವರನ್ನೇ ಉಸ್ತುವಾರಿ ಮಾಡಿ ಎಂದು ನಿಯೋಗದ ಮೂಲಕ ಬಂದು ಸಿಎಂಗೆ ಪ್ರತಾಪಗೌಡ ಪಾಟೀಲ್ ಮನವಿ ಮಾಡಿಕೊಂಡಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪ್ರತಾಪಗೌಡ ಪಾಟೀಲ್ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ, ಬಿಜೆಪಿ ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಪ್ರತಾಪಗೌಡ ಪಾಟೀಲ್ಗೆ ಸಿಎಂ ಭರವಸೆ ಕೊಟ್ಟಿದ್ದಾರೆ.
Published On - 1:37 pm, Tue, 10 November 20