ಗೋಹತ್ಯೆ ನಿಷೇಧ ಕಾಯ್ದೆಗೆ ಹಿನ್ನಡೆ: ಕುತೂಹಲ ಮೂಡಿಸಿದ ಅಶೋಕ್ ಹೇಳಿಕೆ

ಕಾಯ್ದೆಯ ಭವಿಷ್ಯದ ಬಗ್ಗೆ ಮುಂದಿನ ಸಂಪುಟ ಸಭೆಯ ನಂತರ ನಿಮಗೆ ತಿಳಿಯುತ್ತದೆ ಎಂದು ಅಶೋಕ್ ನುಡಿದರು.

ಗೋಹತ್ಯೆ ನಿಷೇಧ ಕಾಯ್ದೆಗೆ ಹಿನ್ನಡೆ: ಕುತೂಹಲ ಮೂಡಿಸಿದ ಅಶೋಕ್ ಹೇಳಿಕೆ
ಆರ್. ಅಶೋಕ್
Edited By: ಸಾಧು ಶ್ರೀನಾಥ್​

Updated on: Dec 11, 2020 | 2:11 PM

ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಜಾರಿ ವಿಚಾರ ಏನಾಗುತ್ತೆ ಅಂತ ಮುಂದಿನ ಸಚಿವ ಸಂಪುಟ ಸಭೆಯವರೆಗೂ ಕಾದು ನೋಡಿ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ವಿಧಾನ ಪರಿಷತ್​ನಲ್ಲಿ ಈ ಮಸೂದೆಗೆ ಅಂಗೀಕಾರ ಸಿಗದಂತೆ ಮಾಡಲು ಪ್ರತಿಪಕ್ಷಗಳು ತಂತ್ರಗಾರಿಕೆ ಮಾಡಿಕೊಂಡಿದ್ದವು ಎಂಬ ಮಾಹಿತಿ ನಮಗೆ ಸಿಕ್ಕಿತ್ತು. ನಾವು ಅವರಿಗಿಂತಲೂ ಚಾಣಾಕ್ಷರಿದ್ದೇವೆ. ಕಾಯ್ದೆಯ ಭವಿಷ್ಯದ ಬಗ್ಗೆ ಮುಂದಿನ ಸಂಪುಟ ಸಭೆಯ ನಂತರ ನಿಮಗೆ ತಿಳಿಯುತ್ತದೆ ಎಂದು ಅಶೋಕ್ ನುಡಿದರು.

ರೈತರ ಜೊತೆಗೆ ಚರ್ಚಿಸಬೇಕಿತ್ತು: ಇಬ್ರಾಹಿಂ

ವಿಧಾನಸಭೆಯಲ್ಲಿ ಅಂಗೀಕಾರ ದೊರೆತ ಗೋಹತ್ಯಾ ನಿಷೇಧ ಮಸೂದೆಯನ್ನು ವಿಧಾನ ಪರಿಷತ್​ನಲ್ಲಿ ಸರ್ಕಾರ ಮಂಡಿಸಲೇ ಇಲ್ಲ. ಜೆಡಿಎಸ್​ ಬೆಂಬಲ ಸಿಗಬಹುದು ಎಂದು ಬಿಜೆಪಿ ಈ ಹಿಂದೆ ಅಂದುಕೊಂಡಿತ್ತು. ಆದರೆ ಅದು ಅನುಮಾನ ಎಂದು ಖಾತ್ರಿಯಾಗುತ್ತಿದ್ದಂತೆ ನಡೆಯನ್ನು ಹಿಂದೆ ಸರಿಸಿತು ಎಂದು ಕಾಂಗ್ರೆಸ್​ ನಾಯಕ ಸಿ.ಎಂ.ಇಬ್ರಾಹಿಂ ಹೇಳಿದರು.

ಗೋವುಗಳನ್ನು ಸಾಕುವವರು ರಾಜಕಾರಣಿಗಳಲ್ಲ, ರೈತರು. ಮುಂದೆ ಇಂಥ ಮಸೂದೆಗಳನ್ನು ತರುವಾಗ ಸರ್ಕಾರ ರೈತರೊಡನೆ ಸಮಾಲೋಚನೆ ನಡೆಸಬೇಕು. ಬಿಜೆಪಿ ಸರ್ಕಾರ ಇರುವ ದೇಶದ ಇತರ ರಾಜ್ಯಗಳಲ್ಲಿ ಇಂಥ ಮಸೂದೆಗಳನ್ನು ತಂದಿಲ್ಲ. ಇಲ್ಲಿನ ನಾಯಕರೂ ಯೋಚಿಸಬೇಕಿತ್ತು ಎಂದು ನುಡಿದರು.

ಗೋಹತ್ಯೆ ನಿಷೇಧ ವಿಧೇಯಕಕ್ಕೆ ಹಿನ್ನಡೆ: ವಿಧಾನ ಪರಿಷತ್​ನಲ್ಲಿ ಮಂಡನೆಯೇ ಆಗಲಿಲ್ಲ

 

Published On - 8:00 pm, Thu, 10 December 20

Ghanashyam D M | ಡಿ.ಎಂ.ಘನಶ್ಯಾಮ
Loading...
Unable to load recommendations.
Follow Us