ನವದೆಹಲಿ: ನಟಿ ರಾಖಿ ಸಾವಂತ್ ತಾಯಿ ಜಯಾ ಸಾವಂತ್ ಇತ್ತೀಚೆಗೆ ಕ್ಯಾನ್ಸರ್ ಚಿಕಿತ್ಸೆಗೆ ಒಳಪಟ್ಟಿದ್ದರು. ಜಯಾ ಚಿಕಿತ್ಸೆಗೆ ಸಲ್ಮಾನ್ ಖಾನ್ ಹಾಗೂ ಅವರ ಸಹೋದರ ಸೋಹಿಲ್ ಖಾನ್ ಆರ್ಥಿಕವಾಗಿ ಸಹಾಯ ಹಸ್ತ ಚಾಚಿದ್ದಾರೆ. ಇದಕ್ಕೆ ರಾಖಿ ಸಾವಂತ್ ತುಂಬಾನೇ ಸಂತಸಗೊಂಡಿದ್ದು, ಸಲ್ಮಾನ್ ಖಾನ್ಗೆ ಧನ್ಯವಾದ ಹೇಳಿದ್ದಾರೆ.
ಸಾವಂತ್ ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಖಿ ತಾಯಿ ಜಯಾ ಸಲ್ಮಾನ್ ಖಾನ್ ಹಾಗೂ ಸೋಹಿಲ್ಗೆ ಥ್ಯಾಂಕ್ಸ್ ಎಂದಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಖಿ ಸಾವಂತ್, ತಾಯಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಿರುವ ಬಗ್ಗೆ ಹೇಳಿದ್ದರು. ಅಲ್ಲದೆ, ಈ ಚಿಕಿತ್ಸೆಯ ಖರ್ಚನ್ನು ಸಲ್ಮಾನ್ ಹಾಗೂ ಸೋಹಿಲ್ ಭರಿಸುತ್ತಿರುವ ಬಗ್ಗೆಯೂ ಹೇಳಿಕೊಂಡಿದ್ದರು.
ಬಿಗ್ ಬಾಸ್ 14ನಲ್ಲಿ ರಾಖಿ ಸಾವಂತ್ ವಿಶೇಷ ಅತಿಥಿಯಾಗಿ ತೆರಳಿದ್ದರು. ಫೆಬ್ರವರಿ 21ರಂದು ಬಿಗ್ ಬಾಸ್ ಪೂರ್ಣಗೊಂಡಿತ್ತು.
ಸಿನಿಮಾ ವಿಚಾರಕ್ಕೆ ಬರುವುದಾದರೆ ಸಲ್ಮಾನ್ ಖಾನ್ ನಟನೆಯ ರಾಧೆ ಸಿನಿಮಾ ಮೇ 13ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದ್ದು, ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಮದುವೆ ಆಲೋಚನೆಯಲ್ಲಿ.. ಸಲ್ಮಾನ್ ಖಾನ್ ಹಾದಿ ತುಳಿಯುತ್ತಾರಾ ರಶೀದ್ ಖಾನ್?