ಸೋಂಕಿತನ ಸಾವಿಗೆ ಮಂತ್ರಿಯ ಬೇಜವ್ದಾರಿ ಪ್ರತಿಕ್ರಿಯೆ

ಪಕ್ಷಾಂತರ ಮಾಡುವ ಮೂಲಕ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದವರಲ್ಲಿ ಪ್ರಮುಖರಾದ ಜಲಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೊಳಿ, ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಒಬ್ಬ ಸೋಂಕಿತನ ಸಾವು ಸಂಭವಿಸಿರುವ ಆರೋಪದ ಹಿನ್ನೆಲೆಯಲ್ಲಿ ಮಾಧ್ಯಮದವರಿಗೆ ಅತ್ಯಂತ ಬೇಜವ್ದಾರಿಯಿಂದ ಪ್ರತಿಕ್ರಿಯಿಸಿದ್ದಾರೆ. ಸಾವು ಮತ್ತು ಆಸ್ಪತ್ರೆ ಸಿಬ್ಬಂದಿಯ ಔದ್ಯಾಸೀನದ ಬಗ್ಗೆ ಮಾಧ್ಯಮವದರು ಪ್ರಶ್ನಿಸಿದಾಗ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಮೇಶ್, ಸಾವು ಬದುಕು ನಮ್ಮ ಕೈಯಲ್ಲಿಲ್ಲ, ಎಂದು ಉಡಾಫೆಯಿದ ಉತ್ತರಿಸಿದಲ್ಲದೆ, ಹೋರಾಟ ಮಾಡಿ ಬದುಕಿಸುವ ಪ್ರಯತ್ನ ಮಾಡಬೇಕು, ಸಾವು […]

ಸೋಂಕಿತನ ಸಾವಿಗೆ ಮಂತ್ರಿಯ ಬೇಜವ್ದಾರಿ ಪ್ರತಿಕ್ರಿಯೆ
ರಮೇಶ್ ಜಾರಕಿಹೊಳಿ
Edited By:

Updated on: Jul 28, 2020 | 12:45 AM

ಪಕ್ಷಾಂತರ ಮಾಡುವ ಮೂಲಕ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದವರಲ್ಲಿ ಪ್ರಮುಖರಾದ ಜಲಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೊಳಿ, ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಒಬ್ಬ ಸೋಂಕಿತನ ಸಾವು ಸಂಭವಿಸಿರುವ ಆರೋಪದ ಹಿನ್ನೆಲೆಯಲ್ಲಿ ಮಾಧ್ಯಮದವರಿಗೆ ಅತ್ಯಂತ ಬೇಜವ್ದಾರಿಯಿಂದ ಪ್ರತಿಕ್ರಿಯಿಸಿದ್ದಾರೆ.

ಸಾವು ಮತ್ತು ಆಸ್ಪತ್ರೆ ಸಿಬ್ಬಂದಿಯ ಔದ್ಯಾಸೀನದ ಬಗ್ಗೆ ಮಾಧ್ಯಮವದರು ಪ್ರಶ್ನಿಸಿದಾಗ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಮೇಶ್, ಸಾವು ಬದುಕು ನಮ್ಮ ಕೈಯಲ್ಲಿಲ್ಲ, ಎಂದು ಉಡಾಫೆಯಿದ ಉತ್ತರಿಸಿದಲ್ಲದೆ, ಹೋರಾಟ ಮಾಡಿ ಬದುಕಿಸುವ ಪ್ರಯತ್ನ ಮಾಡಬೇಕು, ಸಾವು ಹೇಗೆ ಸಂಭವಿಸಿತು ಅಂತ ಕೊವಿಡ್ ವಾರ್ಡ್ಗೆ ಹೋಗಿ ನೀವೇ ವಿಚಾರಿಸಿ ಎಂದು ಸಿಡುಕಿದರು.

ವಾರ್ಡ್ಗೆ ಹೋಗಲು ನಾವು ತಯಾರಿದ್ದೇವೆ, ನೀವೂ ನಮ್ಮೊಂದಿಗೆ ಬರುತ್ತೀರಾ ಎಂದು ಮಾಧ್ಯಮದವರು ಮರುಸವಾಲು ಹಾಕಿದಾಗ ತೆಪ್ಪಗಾದ ಸಚಿವರು, ಸೋಂಕಿತನ ಸಾವಿನ ಬಗ್ಗೆ ಸಂಬಂಧಪಟ್ಟ ವೈದ್ಯರೊಂದಿಗೆ ವಿಚಾರಿಸುವುದಾಗಿ ಹೇಳಿದರು.

Published On - 4:34 pm, Mon, 27 July 20