ಅನಾರೋಗ್ಯ ದಿನಗಳ ಭೀಕರತೆ ಬಗ್ಗೆ ಮೌನ ಮುರಿದ ರಾನಾ ದಗ್ಗುಬಾಟಿ

ಹಾಥಿ ಮೆರೆ ಸಾಥಿ ಸಿನಿಮಾದ ಶೂಟಿಂಗ್​ ವೇಳೆ ರಾನಾಗೆ ಹೃದಯ ಸಮಸ್ಯೆ ಹಾಗೂ ಕಿಡ್ನಿ ವೈಫಲ್ಯದ ತೊಂದರೆ ಅನುಭವಿಸುತ್ತಿರುವ ವಿಚಾರ ಪರೀಕ್ಷೆಯಿಂದ ತಿಳಿದು ಬಂದಿತ್ತು. ಇದಾದ ನಂತರ ಅವರು ಒಂದು ಬ್ರೇಕ್​ ತೆಗೆದುಕೊಂಡು ಆಪರೇಷನ್​ಗೆ ಒಳಗಾಗಿದ್ದರು.

ಅನಾರೋಗ್ಯ ದಿನಗಳ ಭೀಕರತೆ ಬಗ್ಗೆ ಮೌನ ಮುರಿದ ರಾನಾ ದಗ್ಗುಬಾಟಿ
ರಾನಾ ದಗ್ಗುಬಾಟಿ
Edited By:

Updated on: Mar 24, 2021 | 6:45 PM

ನಟ ರಾನಾ ದಗ್ಗುಬಾಟಿ ಟಾಲಿವುಡ್​ನ ಬಹುಬೇಡಿಕೆಯ ನಟ. ಅವರ ವಿಲನ್​ ಕ್ಯಾರೆಕ್ಟರ್​ ಬಾಹುಬಲಿ ಸಿನಿಮಾಗೆ ತೂಕ ನೀಡಿತ್ತು. ರಾನಾ ಅವರಿಗೆ ಇತ್ತೀಚೆಗೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಕೆಲ ತಿಂಗಳ ಕಾಲ ಗ್ಯಾಪ್​ ತೆಗೆದುಕೊಂಡು ಮತ್ತೆ ಸಿನಿಮಾ ಕೆಲಸಕ್ಕೆ ಮರಳಿದ್ದರು. ತಮ್ಮ ಅನಾರೋಗ್ಯದ ದಿನಗಳು ಹೇಗಿದ್ದವು ಎನ್ನುವ ಬಗ್ಗೆ ರಾನಾ ಮೌನ ಮುರಿದಿದ್ದಾರೆ.

‘ಹಾಥಿ ಮೆರೆ ಸಾಥಿ’ ಸಿನಿಮಾದ ಶೂಟಿಂಗ್​ ವೇಳೆ ರಾನಾಗೆ ಹೃದಯ ಸಮಸ್ಯೆ ಹಾಗೂ ಕಿಡ್ನಿ ವೈಫಲ್ಯದ ತೊಂದರೆ ಅನುಭವಿಸುತ್ತಿರುವ ವಿಚಾರ ಪರೀಕ್ಷೆಯಿಂದ ತಿಳಿದು ಬಂದಿತ್ತು. ಇದಾದ ನಂತರ ಅವರು ಒಂದು ಬ್ರೇಕ್​ ತೆಗೆದುಕೊಂಡು ಆಪರೇಷನ್​ಗೆ ಒಳಗಾಗಿದ್ದರು.ಈಗ ಅವರು ಸಮಸ್ಥಿತಿಯಲ್ಲಿದ್ದಾರೆ. ತಾವು ಅನುಭವಿಸಿದ ಕಷ್ಟದ ಬಗ್ಗೆ ರಾಣಾ ಹೇಳಿಕೊಂಡಿದ್ದಾರೆ.

ಹಾಥಿ ಮೆರೆ ಸಾತಿ ಸಿನಿಮಾದ ನಿರ್ದೇಶಕ ಪ್ರಭು ಅವರಿಗೆ ಧನ್ಯವಾದ ಹೇಳಿರುವ ರಾಣಾ, ಸಿನಿಮಾ ಕೆಲಸಗಳು ನಡೆಯುತ್ತಿರುವಾಗಲೇ ನನ್ನ ಅನಾರೋಗ್ಯದ ವಿಚಾರ ಹೊರ ಬಿದ್ದಿತ್ತು. ನಾನು ಶಸ್ತ್ರಚಿಕಿತ್ಸೆಗೆ ಒಳಗಾದ ಸಂದರ್ಭದಲ್ಲಿ ಪ್ರಭು ಅವರು ಸಿನಿಮಾ ಶೂಟಿಂಗ್​ ನಿಲ್ಲಿಸಿ ನನಗಾಗಿ ಕಾದಿದ್ದರು. ನನ್ನ ಸಮಸ್ಯೆಗಳು ಕಡಿಮೆ ಆಗಲು ಕಾಡು ಮೊದಲ ಕಾರಣ ಎಂದಿದ್ದಾರೆ.

ಕಾಡಿನಲ್ಲಿ ಒಂದು ವಾರ ಕಳೆದು ಹಿಂತಿರುಗಿ ಬಂದರೆ ನಿಮಗೆ ವಿಭಿನ್ನ ಮನಸ್ಥಿತಿ ಇರುತ್ತದೆ. ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಕಾಡಿನಲ್ಲಿ ಸಮಯ ಕಳೆದಿದ್ದರಿಂದ ಅನಾರೋಗ್ಯದಿಂದ ಎದುರಿಸಿದ ಯಾತನೆ ಪರಿಹಾರ ಆಯಿತು ಎಂದು ರಾಣಾ ಹೇಳಿದ್ದಾರೆ.

ರಾನಾ ದಗ್ಗುಬಾಟಿಗೆ ರಕ್ತೊದತ್ತಡ, ಹೃದಯ ಸಮಸ್ಯೆ ಹಾಗೂ ಕಿಡ್ನಿ ವೈಫಲ್ಯ ಉಂಟಾಗಿತ್ತಂತೆ. ಶೇ.70 ಉಳಿದುಕೊಳ್ಳುವ ಸಾಧ್ಯತೆ ಹಾಗೂ ಶೇ.30 ಮೃತಪಡುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದರಂತೆ.

ಹಾಥಿ ಮೆರೆ ಸಾಥಿ ಸಿನಿಮಾ ಮಾರ್ಚ್​ 26ರಂದು ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್​ ಆಗುತ್ತಿದೆ. ತಮಿಳಿನಲ್ಲಿ ಕಾಡನ್​ ಹಾಗೂ ತೆಲುಗಿನಲ್ಲಿ ಅರಣ್ಯ ಹೆಸರಿನಲ್ಲಿ ಸಿನಿಮಾ ರಿಲೀಸ್​ ಆಗುತ್ತಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಹಿಂದಿ ಭಾಷೆಯಲ್ಲಿ ಚಿತ್ರ ರಿಲೀಸ್​ ಆಗುತ್ತಿಲ್ಲ. ಹಿಂದಿ ವರ್ಷನ್​ನಲ್ಲಿ ಮುಂದಿನ ದಿನಗಳಲ್ಲಿ ಸಿನಿಮಾ ರಿಲೀಸ್​ ಮಾಡುವ ಆಲೋಚನೆ ಚಿತ್ರತಂಡದ್ದು.

ಇದನ್ನೂ ಓದಿ: ಸಲಾರ್​ ನಂತರವೂ ಪ್ರಶಾಂತ್​ ನೀಲ್​ ಕನ್ನಡ ಸಿನಿಮಾ ಮಾಡೋದು ಡೌಟ್​; ಇಲ್ಲಿದೆ ಹೊಸ ನ್ಯೂಸ್​

Published On - 5:30 pm, Wed, 24 March 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us