ಸಿಎಂ BSY ಸಿಟಿ ರೌಂಡ್ಸ್.. ಕಾಲೇಜು ಮುಂದೆ ಸ್ಕೈ ವಾಕ್ ನಿರ್ಮಿಸಿಕೊಡುವಂತೆ RC ಕಾಲೇಜು ವಿದ್ಯಾರ್ಥಿಗಳಿಂದ ಮನವಿ

ರೇಸ್ ಕೋರ್ಸ್ ರಸ್ತೆಯ ಸ್ಮಾರ್ಟ್ ಕಾಮಗಾರಿ ವೀಕ್ಷಣೆ ವೇಳೆ ಸಿಎಂ ಬಿಎಸ್​ವೈ ಸರ್ಕಾರಿ ರಾಮ್ ನಾರಾಯಣ್ ಚೆಲ್ಲಾರಾಂ(RC) ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನ್ನು ಮಾತನಾಡಿಸಿದಾಗ ಸ್ಕೈ ವಾಕ್ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.

ಸಿಎಂ BSY ಸಿಟಿ ರೌಂಡ್ಸ್.. ಕಾಲೇಜು ಮುಂದೆ ಸ್ಕೈ ವಾಕ್ ನಿರ್ಮಿಸಿಕೊಡುವಂತೆ RC ಕಾಲೇಜು ವಿದ್ಯಾರ್ಥಿಗಳಿಂದ ಮನವಿ
ಸ್ಕೈ ವಾಕ್ ನಿರ್ಮಾಣ ಮಾಡಿಸುವಂತೆ ಸಿಎಂಗೆ ಮನವಿ ಮಾಡಿದ RC ಕಾಲೇಜು ವಿದ್ಯಾರ್ಥಿಗಳು
ಆಯೇಷಾ ಬಾನು

Updated on: Jan 30, 2021 | 2:54 PM

ಬೆಂಗಳೂರು: ನಗರದ ಆರ್‌ಸಿ ಕಾಲೇಜು ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಮುಂದೆ ಸ್ಕೈ ವಾಕ್ ನಿರ್ಮಾಣಕ್ಕೆ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ ಮನವಿ ಸಲ್ಲಿಸಿದ್ದಾರೆ. ಗಮನಾರ್ಹವೆಂದರೆ ಈ ಬಗ್ಗೆ ಪರಿಶೀಲಿಸುವಂತೆ ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ರಾಕೇಶ್ ಸಿಂಗ್​ಗೆ ಸಿಎಂ ಯಡಿಯೂರಪ್ಪ ಸ್ಥಳದಲ್ಲಿಯೇ ಸೂಚನೆ ನೀಡಿದರು.

ಸಿಎಂ ಬಿ.ಎಸ್. ಯಡಿಯೂರಪ್ಪನವರು ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಪರಿಶೀಲನೆ ಹಿನ್ನೆಲೆಯಲ್ಲಿ ಇಂದು ಸಿಟಿ ರೌಂಡ್ಸ್ ಕೈಗೊಂಡಿದ್ದಾರೆ. ವಿಧಾನಸೌಧದಿಂದ ಬಸ್‌ನಲ್ಲಿ ತೆರಳಿ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಿಸುತ್ತಿದ್ದಾರೆ. ಈ ವೇಳೆ ರೇಸ್ ಕೋರ್ಸ್ ರಸ್ತೆಯ ಸ್ಮಾರ್ಟ್ ಕಾಮಗಾರಿ ವೀಕ್ಷಣೆ ವೇಳೆ ಸಿಎಂ ಬಿಎಸ್​ವೈ ಸರ್ಕಾರಿ ರಾಮ್ ನಾರಾಯಣ್ ಚೆಲ್ಲಾರಾಂ (RC) ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ ಸ್ಕೈ ವಾಕ್ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ. ತಕ್ಷಣ ಸಿಎಂ ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ರಾಕೇಶ್ ಸಿಂಗ್​ಗೆ ಈ ಬಗ್ಗೆ ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ.

ಸಿಟಿ ರೌಂಡ್ಸ್​ಗೆ ಸಿಎಂ ಬಿಎಸ್‌ವೈ ಜೊತೆ ಸಚಿವರಾದ ಆರ್.ಅಶೋಕ್, ಭೈರತಿ ಬಸವರಾಜ್​, ಸಂಸದ ಪಿ.ಸಿ.ಮೋಹನ್, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಸಾಥ್ ನೀಡಿದ್ದಾರೆ. ಸಿಎಂ ಅವರು ರೇಸ್ ಕೋರ್ಸ್ ರಸ್ತೆ , ಅಂಬೇಡ್ಕರ್ ರಸ್ತೆ, ಐಟಿಸಿ ಜಂಕ್ಷನ್, ರಾಮ್ ಮೋಹನ್ ರಾಯ್ ರಸ್ತೆ , ನೈಯ್ಸ್ ರೋಡ್ ಜಂಕ್ಷನ್, ವುಡ್ ಸ್ಟ್ರೀಟ್, ಟಾಟಾ ಲೈನ್, ಎಸ್.ಬಿ.ಐ ಜಂಕ್ಷನ್, ಎಂ.ಜಿ ರೋಡ್ , ರಾಜಭವನ ಜಂಕ್ಷನ್, ಪ್ಲಾನಿಟೋರಿಯಂ ಜಂಕ್ಷನ್​ಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ.

ಅಧಿಕಾರ ನಡೆಸಲು ಆಗದಿದ್ದರೆ ಪದತ್ಯಾಗ ಮಾಡಿ -ಪ್ರಧಾನಿ ಮೋದಿ, ಶಾ ಅವರಿಗೆ ಸಿಎಂ ಮಮತಾ ಬ್ಯಾನರ್ಜಿ ಆಗ್ರಹ

Published On - 12:48 pm, Sat, 30 January 21

Loading...
Unable to load recommendations.
Follow Us