AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCBಗೆ ಬೆಂಬಲಿಸಿ ನ್ಯಾಷನಲ್ ಕ್ರಷ್ ಆಗಿದ್ದ ದೀಪಿಕಾ ಘೋಷ್, ಈ ಬಾರಿ ತಂಡವನ್ನು ಹೇಗೆ ಸಪೋರ್ಟ್ ಮಾಡ್ತಾರೆ ಗೊತ್ತಾ?

ಈ ಚೆಲುವೆಯನ್ನ ನೋಡಿದ್ರೆ ಯಾರು ಅನ್ನೋದು ನಿಮಗೆ ಗೊತ್ತೆ ಇರುತ್ತೆ.. ಕೆಂಪು ಬಣ್ಣದ ಡ್ರೆಸ್ ಧರಿಸಿ, ಆರ್​ಸಿಬಿ ಬಾವುಟ ಹಿಡಿದು ಮುದ್ದು ಮುದ್ದಾದ ಸ್ಮೈಲ್ ಕೊಡ್ತಿರೋ ಈ ಚೆಂದುಳ್ಳಿ ಚೆಲುವೆ, ಕಳೆದ ವರ್ಷ ರಾತ್ರೋರಾತ್ರಿ ನ್ಯಾಷನಲ್ ಕ್ರಷ್ ಆಗಿದ್ಳು. ಕಳೆದ ವರ್ಷ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಸನ್​ರೈಸರ್ಸ್ ಹಾಗೂ ಆರ್​ಸಿಬಿ ಪಂದ್ಯದ ವೇಳೆ, ದೀಪಿಕಾ ಘೋಷ್ ಅನ್ನೋ ಮೋಹಾನಂಗಿ ಕಾಣಿಸಿಕೊಂಡಿದ್ಳು.. ಆ ಪಂದ್ಯದಲ್ಲಿ ಶಿಮ್ರಾನ್ ಹೆಟ್ಮೆರ್ ಹಾಗೂ ಗುರುಕೀರತ್ ಸಿಂಗ್, ಬೌಂಡರಿ ಸಿಕ್ಸರ್ ಬಾರಿಸ್ತಿದ್ದಂತೆ ದೀಪಿಕಾ ಘೋಷ್, […]

RCBಗೆ ಬೆಂಬಲಿಸಿ ನ್ಯಾಷನಲ್ ಕ್ರಷ್ ಆಗಿದ್ದ ದೀಪಿಕಾ ಘೋಷ್, ಈ ಬಾರಿ ತಂಡವನ್ನು ಹೇಗೆ ಸಪೋರ್ಟ್ ಮಾಡ್ತಾರೆ ಗೊತ್ತಾ?
ಆಯೇಷಾ ಬಾನು
ಆಯೇಷಾ ಬಾನು|

Updated on:Sep 21, 2020 | 9:00 AM

Share

ಈ ಚೆಲುವೆಯನ್ನ ನೋಡಿದ್ರೆ ಯಾರು ಅನ್ನೋದು ನಿಮಗೆ ಗೊತ್ತೆ ಇರುತ್ತೆ.. ಕೆಂಪು ಬಣ್ಣದ ಡ್ರೆಸ್ ಧರಿಸಿ, ಆರ್​ಸಿಬಿ ಬಾವುಟ ಹಿಡಿದು ಮುದ್ದು ಮುದ್ದಾದ ಸ್ಮೈಲ್ ಕೊಡ್ತಿರೋ ಈ ಚೆಂದುಳ್ಳಿ ಚೆಲುವೆ, ಕಳೆದ ವರ್ಷ ರಾತ್ರೋರಾತ್ರಿ ನ್ಯಾಷನಲ್ ಕ್ರಷ್ ಆಗಿದ್ಳು.

ಕಳೆದ ವರ್ಷ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಸನ್​ರೈಸರ್ಸ್ ಹಾಗೂ ಆರ್​ಸಿಬಿ ಪಂದ್ಯದ ವೇಳೆ, ದೀಪಿಕಾ ಘೋಷ್ ಅನ್ನೋ ಮೋಹಾನಂಗಿ ಕಾಣಿಸಿಕೊಂಡಿದ್ಳು.. ಆ ಪಂದ್ಯದಲ್ಲಿ ಶಿಮ್ರಾನ್ ಹೆಟ್ಮೆರ್ ಹಾಗೂ ಗುರುಕೀರತ್ ಸಿಂಗ್, ಬೌಂಡರಿ ಸಿಕ್ಸರ್ ಬಾರಿಸ್ತಿದ್ದಂತೆ ದೀಪಿಕಾ ಘೋಷ್, ಆರ್​ಸಿಬಿ ಬಾವುಟ ಹಿಡಿದು ಗ್ಯಾಲರಿಯಲ್ಲಿ ಕುಣಿಯುತ್ತಾ ಸಂಭ್ರಮಿಸುತ್ತಿದ್ಳು.

ಈ ಪಂದ್ಯದಲ್ಲಿ ಆರ್​ಸಿಬಿ ಗೆಲ್ತು ಅನ್ನೋದಕ್ಕಿಂತ ಹೆಚ್ಚಾಗಿ, ಈ ವೈಯಾರಿಯೇ ಹೆಚ್ಚು ವೈರಲ್ ಆಗಿದ್ಳು.. ಈ ಸುಂದರಿ ಟಿವಿಯಲ್ಲಿ ಕಾಣ್ತಿದ್ದಂತೆ ಕ್ಲೀನ್ ಬೋಲ್ಡ್ ಆಗಿದ್ದ ಅದೆಷ್ಟೋ ಪಡ್ಡೆಹೈಕ್ಳು, ಸೋಶಿಯಲ್ ಮೀಡಿಯಾದಲ್ಲಿ ಈಕೆಯನ್ನ ಹುಡುಕೋದಕ್ಕೆ ಶುರುಮಾಡಿದ್ರು.

ಆರ್​ಸಿಬಿಗೆ ಚಿಯರ್ ಅಪ್ ಮಾಡಿದ ದೀಪಿಕಾ! ಆರ್​ಸಿಬಿಯ ಪಕ್ಕಾ ಅಭಿಮಾನಿಯಾಗಿರೋ ದೀಪಿಕಾ ಘೋಷ್, ಈ ಭಾರಿ ಕೊಹ್ಲಿ ಪಡೆ ಗೆಲ್ಲಲಿ ಅಂತ ಚಿಯರ್​ಅಪ್ ಮಾಡಿದ್ದಾಳೆ. ಕಳೆದ ವರ್ಷ ಸ್ಟೇಡಿಯಂನಲ್ಲಿ ಹಾಕಿದ್ದ ಕೆಂಪು ಬಣ್ಣದ ತುಂಡುಡಿಗೆ ಹಾಕಿಕೊಂಡು ಕೆನ್ನೆಗೆ ಆರ್​ಸಿಬಿ ಬರೆದುಕೊಂಡು, ಭರ್ಜರಿ ಸ್ಟೆಪ್ಸ್ ಹಾಕೋದ್ರೊಂದಿಗೆ ದೀಪಿಕಾ, ಆರ್​ಸಿಬಿ ತಂಡಕ್ಕೆ ಚಿಯರ್ ಅಪ್ ಮಾಡಿದ್ದಾಳೆ.

ಆರ್​ಸಿಬಿ ಮಿಸ್ ಮಾಡಿಕೊಳ್ತಿದ್ದೇನೆ. ‘‘ಆರ್​ಸಿಬಿ ತಂಡಕ್ಕೆ ಚಿಯರ್​ಅಪ್ ಮಾಡೋದನ್ನ ಈ ವರ್ಷ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಐಪಿಎಲ್ ಮತ್ತೆ ಬಂದಿದ್ದು, ತುಂಬಾ ಉತ್ಸುಕಳಾಗಿದ್ದೇನೆ. ಎಲ್ಲಾ ಅಭಿಮಾನಿಗಳು ಚಿಯರ್​ಅಪ್ ಮಾಡಲು ವಿನಂತಿಸುತ್ತೇನೆ. ಮನೆಯಲ್ಲೇ ಇದ್ದು ಆರ್​ಸಿಬಿಗೆ ಬೆಂಬಲಿಸಿ.” -ದೀಪಿಕಾ ಘೋಷ್, ಆರ್​ಸಿಬಿ ಅಭಿಮಾನಿ

ಇನ್ನೂ ಕಳೆದ ವರ್ಷ ನ್ಯಾಷನಲ್ ಕ್ರಷ್ ಆಗಿದ್ದ ದೀಪಿಕಾ, ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದಾಳೆ. ಆದ್ರೆ, ದೀಪಿಕಾ ಸೋಶಿಯಲ್ ಲೈಫ್ ಬಗ್ಗೆ ನಾನು ಯೋಚನೆ ಮಾಡಲ್ಲ ಅಂತಿದ್ದಾರೆ. ಇನ್​ಸ್ಟಾಗ್ರಾಂ ಮತ್ತು ಸೋಶಿಯಲ್ ಮೀಡಿಯಾ ನಿಜವಾದ ಜೀವನ ಅಲ್ಲ. ಉಳಿದಂತೆ ಎಲ್ಲವೂ ಸುಂದರವಾಗಿದ್ದು, ನಾನು ಮೊದಲಿನಂತೆ ಇದ್ದೇನೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಒಟ್ನಲ್ಲಿ ಕಳೆದ ಸೀಸನ್​ನಲ್ಲಿ ಆರ್​ಸಿಬಿಗೆ ಬೆಂಬಲ ನೀಡಿ ನ್ಯಾಷನಲ್ ಕ್ರಷ್ ಆಗಿದ್ದ ದೀಪಿಕಾ, ಈ ಬಾರಿ ಕೊರೊನಾದಿಂದಾಗಿ ಮನೆಯಲ್ಲೇ ಆರ್​ಸಿಬಿ ಮೇಲಿನ ಅಭಿಮಾನವನ್ನ ಮೆರೆದಿದ್ದಾಳೆ.

Published On - 8:59 am, Mon, 21 September 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.