ದಯವಿಟ್ಟು Help ಮಾಡಿ Please ಅಂತಾ ರಾಜಭವನಕ್ಕೆ ಬಂದ ಪೇಷಂಟ್, ಕುಟುಂಬಸ್ಥರು
ಬೆಂಗಳೂರು: ರಾಜಧಾನಿಗೆ ಸೋಂಕಿನ ಸುನಾಮಿಯೇ ಬಂದು ಅಪ್ಪಳಿಸಿದಂತಾಗಿದೆ. ಎಲ್ಲೆಡೆಯೂ ಆಸ್ಪತ್ರೆಗಳಲ್ಲಿ ಕೊವಿಡ್ ಮತ್ತು ಇತರೆ ರೋಗಿಗಳನ್ನ ದಾಖಲಿಸಿಕೊಳ್ಳುತ್ತಿಲ್ಲ. ಹೀಗಾಗಿ, ನಗರದ ಪೇಷಂಟ್ಗಳು ಪರದಾಡುವ ಸ್ಥಿತಿ ಎದುರಾಗಿದೆ. ಅಂತೆಯೇ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧನೊಬ್ಬನಿಗೆ ಆಸ್ಪತ್ರೆಯಲ್ಲಿ ಅಡ್ಮಿಷನ್ ಸಿಗದೆ ಪರದಾಡಿದ ಘಟನೆ ನಗರದಲ್ಲಿ ನಡೆದಿದೆ. 80 ವರ್ಷದ ವೃದ್ದನನ್ನ ಅಡ್ಮಿಟ್ ಮಾಡಲು ಆತನ ಕುಟುಂಬಸ್ಥರ ಬೆಳಗ್ಗೆಯಿಂದ 3-4 ಆಸ್ಪತ್ರೆಗಳನ್ನ ಸುತ್ತಾಡಿದ್ದರು. ಆದರೆ, ಯಾರು ಕೂಡ ವೃದ್ಧನನ್ನು ದಾಖಲಿಸಿಕೊಂಡಿರಲಿಲ್ಲ. ಇದರಿಂದ ಮನನೊಂದ ವೃದ್ಧನ ಕುಟುಂಬಸ್ಥರು ಕೊನೆಗೆ ಆತನನ್ನ ಌಂಬುಲೆನ್ಸ್ನಲ್ಲೇ ರಾಜಭವನಕ್ಕೆ […]

ಬೆಂಗಳೂರು: ರಾಜಧಾನಿಗೆ ಸೋಂಕಿನ ಸುನಾಮಿಯೇ ಬಂದು ಅಪ್ಪಳಿಸಿದಂತಾಗಿದೆ. ಎಲ್ಲೆಡೆಯೂ ಆಸ್ಪತ್ರೆಗಳಲ್ಲಿ ಕೊವಿಡ್ ಮತ್ತು ಇತರೆ ರೋಗಿಗಳನ್ನ ದಾಖಲಿಸಿಕೊಳ್ಳುತ್ತಿಲ್ಲ. ಹೀಗಾಗಿ, ನಗರದ ಪೇಷಂಟ್ಗಳು ಪರದಾಡುವ ಸ್ಥಿತಿ ಎದುರಾಗಿದೆ. ಅಂತೆಯೇ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧನೊಬ್ಬನಿಗೆ ಆಸ್ಪತ್ರೆಯಲ್ಲಿ ಅಡ್ಮಿಷನ್ ಸಿಗದೆ ಪರದಾಡಿದ ಘಟನೆ ನಗರದಲ್ಲಿ ನಡೆದಿದೆ.

80 ವರ್ಷದ ವೃದ್ದನನ್ನ ಅಡ್ಮಿಟ್ ಮಾಡಲು ಆತನ ಕುಟುಂಬಸ್ಥರ ಬೆಳಗ್ಗೆಯಿಂದ 3-4 ಆಸ್ಪತ್ರೆಗಳನ್ನ ಸುತ್ತಾಡಿದ್ದರು. ಆದರೆ, ಯಾರು ಕೂಡ ವೃದ್ಧನನ್ನು ದಾಖಲಿಸಿಕೊಂಡಿರಲಿಲ್ಲ. ಇದರಿಂದ ಮನನೊಂದ ವೃದ್ಧನ ಕುಟುಂಬಸ್ಥರು ಕೊನೆಗೆ ಆತನನ್ನ ಌಂಬುಲೆನ್ಸ್ನಲ್ಲೇ ರಾಜಭವನಕ್ಕೆ ಕರೆತಂದರು.
ದಯಮಾಡಿ ಯಾರಾದ್ರೂ ನಮಗೆ ಸಹಾಯ ಮಾಡಿ ಎಂದು ಗೇಟ್ ಬಳಿಯಿದ್ದ ಭದ್ರತಾ ಸಿಬ್ಬಂದಿಗೆ ಮೊರೆಯಿಟ್ಟರು. ಕೊನೆಗೆ ಇವರ ಮನವಿಗೆ ಸ್ಪಂದಿಸಿದ ರಾಜಭವನದ ಭದ್ರತಾ ಸಿಬ್ಬಂದಿ ವೃದ್ಧನನ್ನ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದರು. ಹೀಗಾಗಿ, ಕುಟುಂಬಸ್ಥರು ಸಂಜಯ್ ಗಾಂಧಿ ಆಸ್ಪತ್ರೆಗೆ ತೆರಳಿ ವೃದ್ಧರನ್ನು ಅಲ್ಲಿ ದಾಖಲಿಸಿದರು.

Published On - 1:08 pm, Sun, 19 July 20



