ಮಳೆ ಮಳೆ: ಮನೆ, ಕಾರು, ಬೈಕ್ ಜಲಾವೃತ.. ಟೆರೇಸ್ ಮೇಲೆ ಕುಳಿತ ನಿವಾಸಿಗಳು!

| Updated By: ಸಾಧು ಶ್ರೀನಾಥ್​

Updated on: Sep 09, 2020 | 9:29 AM

ಬೆಂಗಳೂರು: ರಾಜಧಾನಿಯಲ್ಲಿ ನೆನ್ನೆ ತಡರಾತ್ರಿ ಸುರಿದ ಮಳೆ ಭಾರಿ ಅವಾಂತರವನ್ನು ಸೃಷ್ಟಿಸಿದೆ. ರಾತ್ರಿ ಸುರಿದ ಮಳೆಗೆ ಹೆಣ್ಣೂರು ಬಂಡೆಯ ವಡ್ಡರ ಪಾಳ್ಯ ಜಲಾವೃತಗೊಂಡಿದೆ. ಶಿರಡಿ ಸಾಯಿಬಾಬಾ ಟೆಂಪಲ್ ಸ್ಟ್ರೀಟ್​ನಲ್ಲಿ ಸುಮಾರು ನೂರಕ್ಕೂ ಹೆಚ್ಚು ಮನೆಗಳು ಮಳೆ ನೀರಿನಲ್ಲಿ ಮುಳುಗಿವೆ. ಮನೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ನಿವಾಸಿಗಳು ಮಧ್ಯರಾತ್ರಿಯಿಂದ ಮನೆಯ ಟೆರೇಸ್ ಮೇಲೆಯೇ ಕುಳಿತಿದ್ದಾರೆ. ಚಳಿಯಲಿ, ಮಳೆಯಲ್ಲೇ ಜೀವವನ್ನು ಕೈಯಲ್ಲಿ ಹಿಡಿದು ರಾತ್ರಿ ಕಳೆದಿದ್ದಾರೆ. 20 ಕಾರುಗಳು, ಐವತ್ತಕ್ಕೂ ಹೆಚ್ಚು ಬೈಕ್​ಗಳು ನೀರಿನಲ್ಲಿ ಮುಳುಗಿವೆ. ಕಮ್ಮನಹಳ್ಳಿ, ನಾಗವಾರದಿಂದ ಬರುವ ರಾಜಕಾಲುವೆಯ […]

ಮಳೆ ಮಳೆ: ಮನೆ, ಕಾರು, ಬೈಕ್ ಜಲಾವೃತ.. ಟೆರೇಸ್ ಮೇಲೆ ಕುಳಿತ ನಿವಾಸಿಗಳು!
Follow us on

ಬೆಂಗಳೂರು: ರಾಜಧಾನಿಯಲ್ಲಿ ನೆನ್ನೆ ತಡರಾತ್ರಿ ಸುರಿದ ಮಳೆ ಭಾರಿ ಅವಾಂತರವನ್ನು ಸೃಷ್ಟಿಸಿದೆ. ರಾತ್ರಿ ಸುರಿದ ಮಳೆಗೆ ಹೆಣ್ಣೂರು ಬಂಡೆಯ ವಡ್ಡರ ಪಾಳ್ಯ ಜಲಾವೃತಗೊಂಡಿದೆ. ಶಿರಡಿ ಸಾಯಿಬಾಬಾ ಟೆಂಪಲ್ ಸ್ಟ್ರೀಟ್​ನಲ್ಲಿ ಸುಮಾರು ನೂರಕ್ಕೂ ಹೆಚ್ಚು ಮನೆಗಳು ಮಳೆ ನೀರಿನಲ್ಲಿ ಮುಳುಗಿವೆ.

ಮನೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ನಿವಾಸಿಗಳು ಮಧ್ಯರಾತ್ರಿಯಿಂದ ಮನೆಯ ಟೆರೇಸ್ ಮೇಲೆಯೇ ಕುಳಿತಿದ್ದಾರೆ. ಚಳಿಯಲಿ, ಮಳೆಯಲ್ಲೇ ಜೀವವನ್ನು ಕೈಯಲ್ಲಿ ಹಿಡಿದು ರಾತ್ರಿ ಕಳೆದಿದ್ದಾರೆ. 20 ಕಾರುಗಳು, ಐವತ್ತಕ್ಕೂ ಹೆಚ್ಚು ಬೈಕ್​ಗಳು ನೀರಿನಲ್ಲಿ ಮುಳುಗಿವೆ.

ಕಮ್ಮನಹಳ್ಳಿ, ನಾಗವಾರದಿಂದ ಬರುವ ರಾಜಕಾಲುವೆಯ ನೀರು ಓವರ್ ಫ್ಲೋ ಆಗಿ ಸಾಯಿಬಾಬಾ ಟೆಂಪಲ್ ಲೇಔಟ್​ಗೆ ನುಗ್ಗಿದರಿಂದ ಈ ಘಟನೆ ಸಂಭವಿಸಿದೆ.

Published On - 8:28 am, Wed, 9 September 20