ಕೋಡಿಹಳ್ಳಿಯಲ್ಲಿ ಮಾಜಿ ಯೋಧ ಪುಟ್ಟಸ್ವಾಮಯ್ಯ ಹತ್ಯೆ
ಹಾಸನ: ಆಸ್ತಿ ವಿಚಾರಕ್ಕಾಗಿ ಮಾಜಿ ಯೋಧ ಪುಟ್ಟಸ್ವಾಮಯ್ಯನ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕೋಡಿಹಳ್ಳಿ ಬಳಿ ನಡೆದಿದೆ. ಆಸ್ತಿ ವಿಚಾರಕ್ಕಾಗಿ ಸೋದರರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಕೆಲ ಮಂದಿ ಶಂಕಿಸುತ್ತಿದ್ದಾರೆ. ಮೃತ ಪುಟ್ಟಸ್ವಾಮಯ್ಯನ ಅಣ್ಣನ ಮಗ ಯೋಗನರಸಿಂಹ ವಿರುದ್ಧ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಆಸ್ತಿ ಹಂಚಿಕೆ ಬಗ್ಗೆ ಪಂಚಾಯಿತಿಯಲ್ಲಿ ಜಗಳ ಶುರುವಾಗಿತ್ತು. ಈ ವೇಳೆ ಪುಟ್ಟಸ್ವಾಮಯ್ಯ ಮತ್ತು ಯೋಗನರಸಿಂಹ ನಡುವೆ ಮಾತಿನ ಚಕಮಕಿ ತಾರಕಕ್ಕೇರಿ ಕೈಕೈ ಮಿಲಾಯಿಸುವ ಹಂತಕ್ಕೆ […]
ಹಾಸನ: ಆಸ್ತಿ ವಿಚಾರಕ್ಕಾಗಿ ಮಾಜಿ ಯೋಧ ಪುಟ್ಟಸ್ವಾಮಯ್ಯನ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕೋಡಿಹಳ್ಳಿ ಬಳಿ ನಡೆದಿದೆ.
ಆಸ್ತಿ ವಿಚಾರಕ್ಕಾಗಿ ಸೋದರರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಕೆಲ ಮಂದಿ ಶಂಕಿಸುತ್ತಿದ್ದಾರೆ. ಮೃತ ಪುಟ್ಟಸ್ವಾಮಯ್ಯನ ಅಣ್ಣನ ಮಗ ಯೋಗನರಸಿಂಹ ವಿರುದ್ಧ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಆಸ್ತಿ ಹಂಚಿಕೆ ಬಗ್ಗೆ ಪಂಚಾಯಿತಿಯಲ್ಲಿ ಜಗಳ ಶುರುವಾಗಿತ್ತು.
ಈ ವೇಳೆ ಪುಟ್ಟಸ್ವಾಮಯ್ಯ ಮತ್ತು ಯೋಗನರಸಿಂಹ ನಡುವೆ ಮಾತಿನ ಚಕಮಕಿ ತಾರಕಕ್ಕೇರಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಆ ವೇಳೆ, ಮರ್ಮಾಂಗಕ್ಕೆ ಪೆಟ್ಟುಬಿದ್ದು ಪುಟ್ಟಸ್ವಾಮಯ್ಯ ಅಗ್ರಹಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಹೀಗಾಗಿ ಈ ಸಾವಿಗೆ ಯೋಗನರಸಿಂಹನೇ ಕಾರಣ ಎಂದು ಆರೋಪಿಸಲಾಗಿದೆ. ಹೊಳೆನರಸೀಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.