AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈ-ಕಮಲದ ರಾಜಕೀಯ ‘ಗಲಭೆ’ ಮಧ್ಯೆ ಸಿಕ್ಕಿಹಾಕಿಕೊಂಡ್ರಾ ಶಾಸಕ ಅಖಂಡ?

ಬೆಂಗಳೂರು: ಕಾವಲ್​ ಭೈರಸಂದ್ರದ ಗಲಭೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ತಿಕ್ಕಾಟ ಆರಂಭವಾಗಿದೆ. ಯಾವುದೇ ಸಂದರ್ಭವನ್ನ ತನ್ನ ರಾಜಕೀಯ ಲಾಭಕ್ಕಾಗಿ ಬಳಸಲು ಹವಣಿಸುವ ಎರಡೂ ಪಕ್ಷಗಳ ರಾಜಕೀಯ ‘ಗಲಭೆ’ಯ ಅಡಕತ್ತರಿಯಲ್ಲಿ ಇದೀಗ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಿಕ್ಕಾಕಿಕೊಂಡಿರುವಂತೆ ಭಾಸವಾಗುತ್ತಿದೆ. ಎಂಥಾ ಪ್ರಭಾವಿಗಳಿದ್ದರೂ ಅವರಿಗೆ ಶಿಕ್ಷೆ ಆಗಲೇ ಬೇಕೆಂದು ಶಾಸಕ ಶ್ರೀನಿವಾಸಮೂರ್ತಿ ಪಟ್ಟು ಹಿಡಿದಿದ್ದಾರೆ. ಆದರೆ, ತಮ್ಮ ಸ್ವಪಕ್ಷ ಕಾಂಗ್ರೆಸ್​ಪ್ರಭಾವಿಗಳನ್ನ ರಕ್ಷಿಸಲು ಪರೋಕ್ಷ ಪ್ರಯತ್ನ ನಡೆಸುತ್ತಿದೆ ಎಂಬ ಮಾತು ಕೇಳಿಬಂದಿದೆ. ಕಾಂಗ್ರೆಸ್​ ಸತ್ಯ ಶೋಧನಾ ಸಮಿತಿ […]

ಕೈ-ಕಮಲದ ರಾಜಕೀಯ ‘ಗಲಭೆ’ ಮಧ್ಯೆ ಸಿಕ್ಕಿಹಾಕಿಕೊಂಡ್ರಾ ಶಾಸಕ ಅಖಂಡ?
KUSHAL V
| Edited By: |

Updated on: Aug 17, 2020 | 1:45 PM

Share

ಬೆಂಗಳೂರು: ಕಾವಲ್​ ಭೈರಸಂದ್ರದ ಗಲಭೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ತಿಕ್ಕಾಟ ಆರಂಭವಾಗಿದೆ. ಯಾವುದೇ ಸಂದರ್ಭವನ್ನ ತನ್ನ ರಾಜಕೀಯ ಲಾಭಕ್ಕಾಗಿ ಬಳಸಲು ಹವಣಿಸುವ ಎರಡೂ ಪಕ್ಷಗಳ ರಾಜಕೀಯ ‘ಗಲಭೆ’ಯ ಅಡಕತ್ತರಿಯಲ್ಲಿ ಇದೀಗ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಿಕ್ಕಾಕಿಕೊಂಡಿರುವಂತೆ ಭಾಸವಾಗುತ್ತಿದೆ.

ಎಂಥಾ ಪ್ರಭಾವಿಗಳಿದ್ದರೂ ಅವರಿಗೆ ಶಿಕ್ಷೆ ಆಗಲೇ ಬೇಕೆಂದು ಶಾಸಕ ಶ್ರೀನಿವಾಸಮೂರ್ತಿ ಪಟ್ಟು ಹಿಡಿದಿದ್ದಾರೆ. ಆದರೆ, ತಮ್ಮ ಸ್ವಪಕ್ಷ ಕಾಂಗ್ರೆಸ್​ಪ್ರಭಾವಿಗಳನ್ನ ರಕ್ಷಿಸಲು ಪರೋಕ್ಷ ಪ್ರಯತ್ನ ನಡೆಸುತ್ತಿದೆ ಎಂಬ ಮಾತು ಕೇಳಿಬಂದಿದೆ.

ಕಾಂಗ್ರೆಸ್​ ಸತ್ಯ ಶೋಧನಾ ಸಮಿತಿ ವರದಿಯನ್ನ ಆಧರಿಸಿಯೇ ಹೇಳಿಕೆ ಕೊಡಿ ಎಂಬ ಒತ್ತಡವನ್ನ ಶಾಸಕರ ಮೇಲೆ ಹೇರಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದೆ. ಪಕ್ಷದ ನಿಲುವು, ನಿಮ್ಮ ನಿಲುವು ಬೇರೆ ಬೇರೆ ಬೇಡ. ಪಕ್ಷದ ನಿಲುವಿನ ಬಗ್ಗೆ ಸತ್ಯಶೋಧನಾ ಸಮಿತಿ ನಿರ್ಧರಿಸಲಿದೆ. ಆ ಬಳಿಕವೇ ಮುಂದಿನ ರಾಜಕೀಯ ನಿರ್ಧಾರ ತೆಗೆದುಕೊಳ್ಳಿ ಎಂದು ಅಖಂಡ ಶ್ರೀನಿವಾಸ ಮೂರ್ತಿಗೆ ಕಾಂಗ್ರೆಸ್​ ನಾಯಕರ ಒತ್ತಡ ಹೇರುತ್ತಿದ್ದಾರಂತೆ.

ಕಾಂಗ್ರೆಸ್​ ನಾಯಕರ ಪ್ರಕಾರ ಕಾರ್ಪೊರೇಟರ್​ಗಳ ಪಾತ್ರವಿಲ್ಲವಂತೆ. ಆದರೆ, ಶಾಸಕರ ಆಪ್ತರ ಪ್ರಕಾರ ಗಲಭೆಯಲ್ಲಿ ‘ಕೈ’ ಕಾರ್ಪೊರೇಟರ್​ಗಳ ಕೈವಾಡವಿದೆಯಂತೆ. ಹಾಗಾಗಿ, ಈ ಪ್ರಭಾವಿಗಳ ವಿರುದ್ಧ ಶಿಕ್ಷೆ ಕೈಗೊಳ್ಳಲು ಶಾಸಕ ಅಖಂಡ ಶ್ರೀನಿವಾಸ್ ಪಟ್ಟು ಹಿಡಿದಿದ್ದಾರಂತೆ.

ಬಿಜೆಪಿಯದ್ದು ಬೇರೆಯೇ ದೃಷ್ಟಿಕೋನ.. ಆದರೆ, ಬಿಜೆಪಿ ಇಡೀ ಘಟನೆಯನ್ನು ಸಂಪೂರ್ಣವಾಗಿ ಬೇರೆಯದ್ದೇ ಕೋನದಿಂದ ಅವಲೋಕಿಸುತ್ತಿದೆ. ಶಾಸಕನ ಮೇಲೆ ಪ್ರಭಾವ ಬೀರುತ್ತಿರುವ ಬಿಜೆಪಿ ನಾಯಕರು ಸಿಬಿಐ ತನಿಖೆಗೆ ಆಗ್ರಹಿಸಲು ಅಖಂಡ ಶ್ರೀನಿವಾಸ ಮೂರ್ತಿಗೆ ಒತ್ತಡ ಹೇರುತ್ತಿದ್ದಾರಂತೆ.

ಇದಕ್ಕೆ ಒಪ್ಪಿದ ಶಾಸಕ ಬೇಕಿದ್ದರೆ ಡಿಕೆ ಶಿವಕುಮಾರ್​ ಬಳಿಯೂ ಮಾತನಾಡೋದಕ್ಕೆ ಸಿದ್ಧ ಎಂದಿದ್ದಾರಂತೆ. ಆದರೆ, ಸಿಬಿಐ ತನಿಖೆ ಬಗ್ಗೆ ಡಿಕೆಶಿ ಒಲವು ತೋರುತ್ತಿಲ್ಲವಂತೆ. ಹೀಗಾಗಿ, ಕೈ ಕಮಲದ ರಾಜಕೀಯ ಗಲಭೆಯ ಅಡ್ಡಕತ್ತರಿಯಲ್ಲಿ ಶಾಸಕ ಸಿಕ್ಕಾಕೊಂಡು ಪೀಕಲಾಟ ಅನುಭವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ