ಚಿತ್ರರಂಗಕ್ಕೆ ಮರಳಿದ ರಿಯಾ ಚಕ್ರವರ್ತಿ; ರಿಲೀಸ್ ಆಯ್ತು ಹೊಸ ಸಿನಿಮಾದ ಟ್ರೇಲರ್

ರಿಯಾ ಚಕ್ರವರ್ತಿ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ನಟನೆಯ 'ಚೆಹ್ರೆ' ಸಿನಿಮಾ ಟ್ರೈಲರ್​ ರಿಲೀಸ್​ ಆಗಿದೆ. ಅಮಿತಾಭ್​​ ಬಚ್ಚನ್​ ಮತ್ತು ಇಮ್ರಾನ್ ಹಶ್ಮಿ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದು, ಸಾಕಷ್ಟು ಕುತೂಹಲಕಾರಿಯಾಗಿದೆ.

ಚಿತ್ರರಂಗಕ್ಕೆ ಮರಳಿದ ರಿಯಾ ಚಕ್ರವರ್ತಿ; ರಿಲೀಸ್ ಆಯ್ತು ಹೊಸ ಸಿನಿಮಾದ ಟ್ರೇಲರ್
ಚೆಹ್ರೆ ಟ್ರೈಲರ್​ನಲ್ಲಿ ರಿಯಾ
Edited By:

Updated on: Mar 19, 2021 | 4:11 PM

ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಜೈಲು ಪಾಲಾಗಿದ್ದ ಬಾಲಿವುಡ್ ನಟಿ ಹಾಗೂ ಸುಶಾಂತ್​ ಸಿಂಗ್​ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್‌ ಅಕ್ಟೋಬರ್​ 7ರಂದು ಜಾಮೀನು ನೀಡಿತ್ತು. ಇದಾದ ನಂತರ ಅವರು ಮನೆಯಿಂದ ಹೊರಗೆ ಕಾಣಿಸಿಕೊಂಡಿದ್ದು ತೀರಾನೇ ಅಪರೂಪ. ವಿಶೇಷ ಎಂದರೆ, ಈಗ ಅವರು ಚಿತ್ರರಂಗಕ್ಕೆ ಮರಳಿದ್ದಾರೆ. ಸಿನಿಮಾದ ಟ್ರೈಲರ್​ ಕೂಡ ರಿಲೀಸ್​ ಆಗಿದೆ.

ಹೌದು, ರಿಯಾ ಚಕ್ರವರ್ತಿ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ನಟನೆಯ ‘ಚೆಹ್ರೆ’ ಸಿನಿಮಾ ಟ್ರೈಲರ್​ ರಿಲೀಸ್​ ಆಗಿದೆ. ಅಮಿತಾಭ್​​ ಬಚ್ಚನ್​ ಮತ್ತು ಇಮ್ರಾನ್ ಹಶ್ಮಿ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದು, ಸಾಕಷ್ಟು ಕುತೂಹಲಕಾರಿಯಾಗಿದೆ. ರಿಯಾ ಚಕ್ರವರ್ತಿ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಬಗ್ಗೆ ಕೆಲವು ದಿನಗಳಿಂದ ಊಹಾಪೋಹಗಳು ಹರಿದಾಡಿದ್ದವು. ಈಗ ಸಿನಿಮಾದ ಟ್ರೈಲರ್​ ರಿಲೀಸ್​ ಆಗಿದ್ದು, ರಿಯಾ ಇರುವ ವಿಚಾರ ಸ್ಪಷ್ಟವಾಗಿದೆ.

ಈ ಸಿನಿಮಾದ ಟ್ರೈಲರ್ ಕುತೂಹಲದ ಗೂಡಾಗಿದೆ. ಅಮಿತಾಭ್​ ಬಚ್ಚನ್​ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ಇಮ್ರಾನ್​ ಜಾಹೀರಾತು ಸಂಸ್ಥೆಯ ಮಾಲೀಕರಾಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್​ನಲ್ಲಿ ಸಾಕಷ್ಟು ತಿರುವುಗಳನ್ನು ನೀಡುವ ಕೆಲಸ ಮಾಡಿದ್ದಾರೆ ನಿರ್ದೇಶಕ ರೂಮಿ ಜಾಫ್ರಿ.

ಸುಶಾಂತ್​ ಸಿಂಗ್ ಆತ್ಮಹತ್ಯೆ ನಂತರದಲ್ಲಿ ಸಾಕಷ್ಟು ವಿಚಾರಗಳು ಮುನ್ನೆಲೆಗೆ ಬಂದಿದ್ದವು. ಅವರ ಖಾತೆಯಿಂದ ರಿಯಾ ಹಣ ವರ್ಗಾವಣೆ ಮಾಡಿದ್ದರು ಅನ್ನುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದ ವಿಚಾರಣೆಗೆ ಮುಂದಾದ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಡ್ರಗ್​ ಜಾಲದ ವಾಸನೆ ಸಿಕ್ಕಿತ್ತು. ರಿಯಾ ಡ್ರಗ್​ ಡೀಲರ್​ಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾದಕ ದ್ರವ್ಯ ನಿಯಂತ್ರಣ ಮಂಡಳಿಗೆ (ಎನ್​ಸಿಬಿ) ತಿಳಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಎನ್​ಸಿಬಿ ಅಧಿಕಾರಿಗಳು ರಿಯಾ ಅವರನ್ನು ಸೆಪ್ಟೆಂಬರ್​ 8ರಂದು ಬಂಧಿಸಿದ್ದರು. ಒಂದು ತಿಂಗಳ ನಂತರ ಅಂದರೆ ಅಕ್ಟೋಬರ್​ 7ರಂದು ಅವರಿಗೆ ಜಾಮೀನು ಸಿಕ್ಕಿತ್ತು.

ಇದನ್ನೂ ಓದಿ: ರಿಯಾ ಚಕ್ರವರ್ತಿ ಜಾಮೀನು ಪ್ರಕರಣ: ಎನ್​ಸಿಬಿ ಅರ್ಜಿಗೆ ಸುಪ್ರೀಂಕೋರ್ಟ್ ಅಸಮಾಧಾನ

 

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us