ರೌಡಿ ಬೇಬಿ ಸಾಂಗ್​ಗೆ ಸಖತ್ ರೆಸ್ಪಾನ್ಸ್, ಸಕ್ಸಸ್ ಪೋಸ್ಟರ್ ನೋಡಿ ಸಾಯಿಪಲ್ಲವಿ ಫ್ಯಾನ್ಸ್ ಗರಂ!

|

Updated on: Nov 23, 2020 | 7:02 AM

ಒಂದು ಸಾಂಗ್ ಒಂದು ಬಿಲಿಯನ್ ವೀವ್ಸ್ ಆಗೋದಂದ್ರೆ ಸುಮ್ನೇನಾ.. ಒಂದು ಕಡೆ ಒಂದು ಬಿಲಿಯನ್ ವೀವ್ಸ್ ಆಗಿರೋ ಸಂಭ್ರಮದಲ್ಲಿ ರೌಡಿ ಬೇಬಿ ಚಿತ್ರತಂಡ ಇದ್ರೆ.. ಜೊತೆಗೆ ಧನುಶ್ ಅಭಿಮಾನಿಗಳು ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸ್ತಿದ್ದಾರೆ. ಆದ್ರೀಗ ಸಾಯಿ ಪಲ್ಲವಿ ಅಭಿಮಾನಿಗಳು ಮಾತ್ರ ಸೋಶಿಯಲ್ ಮಿಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಅದ್ಯಾಕೆ ಅನ್ನೋದರ ಡಿಟೇಲ್ಸ ಇಲ್ಲಿದೆ ನೋಡಿ. ಕಾಲಿವುಡ್​ನ ಮಾರಿ-2 ಸಿನಿಮಾದ ರೌಡಿ ಬೇಬಿ ಸಾಂಗ್ ಮಾಡಿದ್ದ ಮೋಡಿಗೆ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ರು. ಅಂದ ಹಾಗೆ ಧನುಷ್, […]

ರೌಡಿ ಬೇಬಿ ಸಾಂಗ್​ಗೆ ಸಖತ್ ರೆಸ್ಪಾನ್ಸ್, ಸಕ್ಸಸ್ ಪೋಸ್ಟರ್ ನೋಡಿ ಸಾಯಿಪಲ್ಲವಿ ಫ್ಯಾನ್ಸ್ ಗರಂ!
Follow us on

ಒಂದು ಸಾಂಗ್ ಒಂದು ಬಿಲಿಯನ್ ವೀವ್ಸ್ ಆಗೋದಂದ್ರೆ ಸುಮ್ನೇನಾ.. ಒಂದು ಕಡೆ ಒಂದು ಬಿಲಿಯನ್ ವೀವ್ಸ್ ಆಗಿರೋ ಸಂಭ್ರಮದಲ್ಲಿ ರೌಡಿ ಬೇಬಿ ಚಿತ್ರತಂಡ ಇದ್ರೆ.. ಜೊತೆಗೆ ಧನುಶ್ ಅಭಿಮಾನಿಗಳು ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸ್ತಿದ್ದಾರೆ. ಆದ್ರೀಗ ಸಾಯಿ ಪಲ್ಲವಿ ಅಭಿಮಾನಿಗಳು ಮಾತ್ರ ಸೋಶಿಯಲ್ ಮಿಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಅದ್ಯಾಕೆ ಅನ್ನೋದರ ಡಿಟೇಲ್ಸ ಇಲ್ಲಿದೆ ನೋಡಿ.

ಕಾಲಿವುಡ್​ನ ಮಾರಿ-2 ಸಿನಿಮಾದ ರೌಡಿ ಬೇಬಿ ಸಾಂಗ್ ಮಾಡಿದ್ದ ಮೋಡಿಗೆ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ರು. ಅಂದ ಹಾಗೆ ಧನುಷ್, ಸಾಯಿ ಪಲ್ಲಿವಿ ಜೋಡಿಯಾಗಿ ನಟಿಸಿ ರೌಡಿ ಬೇಬಿ ಹಾಡಿಗೆ ಹೆಜ್ಜೆ ಹಾಕಿದ್ದ ರೀತಿ ಸೋಶಿಯಲ್ ಮೀಡಿಯಾದಲ್ಲಿ ಹಾಡನ್ನ ಮತ್ತೆ ಮತ್ತೆ ನೋಡುವಂತೆ ಮಾಡಿತ್ತು. ಹೀಗೆಯೇ ಮುಂದುವರೆದ ರೌಡಿ ಬೇಬಿ ಸಾಂಗ್ ಸಕ್ಸಸ್‌ನ ಜರ್ನಿ ಬರೋಬ್ಬರಿ 1 ಬಿಲಿಯನ್ ವೀವ್ಸ್ ಪಡೆದು ಮುನ್ನುಗ್ತಿದೆ.

ಆದ್ರೆ ಸದ್ಯ ಇತ್ತೀಚೆಗೆಷ್ಟೇ ಚಿತ್ರತಂಡ ಹಾಗು ನಟನಟಿಯರು ಸಾಂಗ್ ಸಕ್ಸಸ್ ಆಗಿರೋ ಸಂಭ್ರಮವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ಧನುಷ್ ಹಾಡಿದ್ದ ಕೊಲವೆರಿ ಡಿ ಹಾಡು ರಿಲೀಸ್ ಆಗಿ ಒಂಬತ್ತು ವರ್ಷ ಆದ ದಿನವೇ ರೌಡಿಬೇಬಿಗೆ 1 ಬಿಲಿಯನ್ ವೀವ್ಸ್ ಸಿಕ್ಕಿದೆ. ಇದೆಲ್ಲವನ್ನ ಸಂಭ್ರಮಿಸ್ತಿರೋ ವೇಳೆಯೇ ಈಗ ಚಿತ್ರತಂಡ ವಂಡರ್ ಬಾರ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರೋ ಪೋಸ್ಟರ್ ವಿವಾದ ಸೃಷ್ಟಿಸ್ತಿದೆ. ಪೋಸ್ಟರ್​ನಲ್ಲಿ ಕೇವಲ ಧನುಷ್ ಮಾತ್ರ ಇದ್ದಾರೆ. ಸಾಯಿ ಪಲ್ಲವಿ ಪೋಸ್ಟರ್​ನಲ್ಲಿ ಕಾಣಿಸಿಕೊಂಡಿಲ್ಲ.

ಹೀಗಾಗಿ ಸದ್ಯ ಸಾಯಿ ಪಲ್ಲವಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ರೌಡಿ ಬೇಬಿ ಹಿಟ್ ಆಗೋಕೆ ಧನುಷ್ ಎಷ್ಟು ಕಾರಣವೋ ಸಾಯಿ ಪಲ್ಲವಿ ಕೂಡ ಅಷ್ಟೇ ಕಾರಣ ಅನ್ನೋ ಅಭಿಪ್ರಾಯ ಹೊರ ಹಾಕ್ತಿದ್ದಾರೆ. ಸದ್ಯ ಚಿತ್ರತಂಡದ ಪೋಸ್ಟರ್ ನೋಡಿ ಸಾಯಿ ಪಲ್ಲವಿ ಅಭಿಮಾನಿಗಳು ಆಕ್ರೋಶ ಹೊರ ಹಾಕ್ತಿದ್ದಾರೆ.

ಹೀಗಾಗಿ ಇದನ್ನೆಲ್ಲಾ ಗಮನಿಸಿ ಮುಂದಿನ ದಿನಗಳಲ್ಲಿ ಚಿತ್ರತಂಡ ಸಾಯಿ ಪಲ್ಲವಿ ಕೂಡ ಸಕ್ಸಸ್​ಗೇ ಕಾರಣ ಅನ್ನೋ ರೀತಿಯ ಪೋಸ್ಟರ್ ರಿಲೀಸ್ ಮಾಡುತ್ತಾ. ಸಾಯಿ ಪಲ್ಲವಿ ಅಭಿಮಾನಿಗಳ ಅಭಿಪ್ರಾಯಕ್ಕೆ ಮನ್ನಣೆ ಸಿಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.