ವಾಸ್ತು ದೋಷ ಅಷ್ಟೇ ಅಲ್ಲ; ಅಶುಭ ಶಕುನಗಳನ್ನೂ ದೂರ ಮಾಡುತ್ತದೆ ಈ ವಸ್ತು!
Salt and Vastu: ಉಪ್ಪನ್ನು ರಾಹು ಜೊತೆಗೆ ಗುರುತಿಸಲಾಗುತ್ತದೆ. ಇದು ಅತ್ಯಂತ ಶಕ್ತಿಶಾಲಿ. ಜ್ಯೋತಿಷ್ಯದ ಪ್ರಕಾರ ಉಪ್ಪು ಮನೆಯಲ್ಲಿನ ನಕಾರಾತ್ಮಕತೆ ದೂರ ಮಾಡುವ ಸಾಧನ. ಇದು ಸುಖ ಸಮೃದ್ಧಿಯನ್ನೂ ತರಬಲ್ಲದು. ಇದರ ಪ್ರಯೋಗ ಹೀಗೆ ಮಾಡಿ.

ವಾಸ್ತವವಾಗಿ ಈ ಒಂದು ವಸ್ತು ವಾಸ್ತು ದೋಷವನ್ನಷ್ಟೇ ಅಲ್ಲ; ಅಶುಭ ಶಕುನಗಳನ್ನೂ ದೂರ ಮಾಡಿಬಿಡುತ್ತದೆ, ಆ ವಸ್ತು ಉಪ್ಪು! ಆದರೆ ಅದನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಅದನ್ನು ಇಲ್ಲಿ ವಿವರಿಸಲಾಗಿದೆ. ಉಪ್ಪನ್ನು ರಾಹು ಜೊತೆಗೆ ಗುರುತಿಸಲಾಗುತ್ತದೆ. ಇದು ಅತ್ಯಂತ ಶಕ್ತಿಶಾಲಿ. ಜ್ಯೋತಿಷ್ಯದ ಪ್ರಕಾರ ಉಪ್ಪು ಮನೆಯಲ್ಲಿನ ನಕಾರಾತ್ಮಕತೆ ದೂರ ಮಾಡುವ ಸಾಧನ. ಇದು ಸುಖ ಸಮೃದ್ಧಿಯನ್ನೂ ತರಬಲ್ಲದು. ಇದರ ಪ್ರಯೋಗ ಹೀಗೆ ಮಾಡಿ.
ಅಡುಗೆ ಮನೆಯಲ್ಲಿ ಬಳಸಲ್ಪಡುವ ಉಪ್ಪು ಬರೀ ರುಚಿಗಷ್ಟೇ ಸೀಮಿತವಲ್ಲ; ನಿಮ್ಮ ಮನೆಯಲ್ಲಿನ ವಾಸ್ತು ದೋಷವನ್ನೂ ಮತ್ತು ರಾಹು ಕೇತು ಗ್ರಹಗಳ ಅಶುಭ ಪ್ರಭಾವಗಳನ್ನೂ ದೂರ ಮಾಡಲು ಸಹಾಯಕವಾಗಿದೆ.
1. ಒಂದು ವೇಳೆ ನಿಮ್ಮ ಮನೆಯಲ್ಲಿ ವಾಸ್ತು ದೋಷ ತಲೆದೋರಿದೆ ಎಂದರೆ ಒಂದು ಗಾಜಿನ ಪಾತ್ರೆಯಲ್ಲಿ ಉಪ್ಪನ್ನು ತುಂಬಿ ವಾಷ್ ರೂಮ್ನಲ್ಲಿ ಇಡಬೇಕು. ಇದು ನಿಮ್ಮ ಮನೆಯಲ್ಲಿ ಕಾಣಿಸಿಕೊಂಡಿರುವ ವಾಸ್ತು ದೋಷವನ್ನು ದೂರ ಮಾಡಬಲ್ಲದು. ಕಾಲ ಕಾಲಕ್ಕೆ ಆ ಪಾತ್ರೆಯಲ್ಲಿನ ಉಪ್ಪನ್ನು ಬದಲಿಸುತ್ತಿರಬೇಕು. ಇದರ ಜೊತೆಗೆ ಪ್ರತಿ ಗುರುವಾರವನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲೂ ಸ್ವಲ್ಪ ಉಪ್ಪನ್ನು ಹಾಕಿಕೊಂಡು ಮನೆ ನೆಲ ಒರೆಸಿ.
2. ನಿಮ್ಮ ಮನೆಯಲ್ಲಿ ನಕಾರಾತ್ಮಕತೆಯ ಶಕ್ತಿ ಪ್ರಭಾವ ಕಾಣಿಸಿಕೊಳ್ಳುತ್ತಿದೆ ಎಂದಾದರೆ ಉಪ್ಪನ್ನು ಗಾಜಿನ ತಟ್ಟೆಯಲ್ಲಿಟ್ಟು ಯಾವುದಾದರೂ ಒಂದು ಮೂಲೆಯಲ್ಲಿಡಿ. ಜ್ಯೋತಿಷ್ಯದ ಪ್ರಕಾರ ಉಪ್ಪು ಮತ್ತು ಗಾಜು ಎರಡೂ ರಾಹುವಿನ ಜೊತೆ ಸೇರಿಸಲಾಗುತ್ತದೆ. ಹಾಗಾಗಿ ಕಂಚಿನ ತಟ್ಟೆಯಲ್ಲಿ ಉಪ್ಪನ್ನು ಹಾಕಿ, ಒಂದು ಮೂಲೆಯಲ್ಲಿಟ್ಟರೆ ನಕಾರಾತ್ಮಕತೆ ದೂರವಾಗಿ ರಾಹು ಜೊತೆಗಿನ ಅಶುಭ ಪ್ರಭಾವ ನಿವಾರಣೆಯಾಗುತ್ತದೆ.
3. ನಿಮ್ಮ ಮನೆ ಸಮೃದ್ಧಿಯಿಂದರಬೇಕು ಅಂದರೆ ಗಾಜಿನ ಲೋಟದಲ್ಲಿ ಉಪ್ಪು ಮತ್ತು ನೀರನ್ನು ಸೇರಿಸಿ ನೈಋತ್ಯ ದಿಕ್ಕಿನಲ್ಲಿ ಇಡಬೇಕು. ಜೊತೆಗೆ, ಅದರ ಹಿಂದೆ ಕೆಂಪು ದೀಪ ಉರಿಯುವಂತೆ ಇಡಬೇಕು. ಲೋಟದಲ್ಲಿ ನೀರು ಖಾಲಿಯಾದರೆ ಮತ್ತೆ ಮತ್ತೆ ಉಪ್ಪು ಮತ್ತು ನೀರನ್ನು ತುಂಬಿಡಿ. ಇದರಿಂದ ನಿಮ್ಮ ಮನೆಯಲ್ಲಿ ಸುಖ ಸಂತೋಷ ಸಮೃದ್ಧಿಯಾಗುತ್ತದೆ.
4. ಇನ್ನು, ನಿಮ್ಮ ವ್ಯಾಪಾರದಲ್ಲಿ ಪ್ರಗತಿ ಕಾಣಬೇಕು ಅಂದರೆ ಚಿಕ್ಕ ಪೆಟ್ಟಿಗೆಯಲ್ಲಿ ಉಪ್ಪನ್ನು ಇಟ್ಟು ಕೆಂಪುಬಟ್ಟೆಯಿಂದ ಅದನ್ನು ಸುತ್ತಿಟ್ಟು, ನಿಮ್ಮ ಕಚೇರಿಯ ಮುಖ್ಯ ದ್ವಾರದಲ್ಲಿ ಅಥವಾ ತಿಜೋರಿಯ ಮೇಲೆ ಇಡಬೇಕು. ಇದರ ಪ್ರಭಾವ, ಪರಿಣಾಮ ಕೆಲವೇ ದಿನಗಳಲ್ಲಿ ನಿಮ್ಮ ವ್ಯಾಪಾರದಲ್ಲಿ ಕಂಡುಬರುತ್ತದೆ.
5. ಕುಟುಂಬಸ್ಥರಲ್ಲಿ ಯಾರಿಗಾದರೂ ಯಾವುದೇ ಕಾಯಿಲೆ ಬಂದಿದ್ದರೆ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಕಾಯಿಲೆ ಬಂದಿರುವ ವ್ಯಕ್ತಿಯ ಮುಂದೆ ಏಳು ಬಾರಿ ನಿವಾಳಿಸಬೇಕು. ಮತ್ತು ಉಪ್ಪನ್ನು ಯಾರೂ ತುಳಿಯದ ಕಡೆ ಬಿಸಾಡಬೇಕು.
6. ಒಂದೊಮ್ಮೆ ನಿಮ್ಮ ಮೇಲೆ ರಾಹು ಪ್ರಭಾವ ಬೀರಿದ್ದರೆ ನಿಮ್ಮ ಮನಸಿನ ಮೇಲೆ ಭಾರೀ ಪ್ರಭಾವ ಬೀರಿರುತ್ತದೆ. ಸಂಕಟ ಚಿಂತೆಗಳು ನಿಮ್ಮ ಮನದಲ್ಲಿ ತುಂಬಿಕೊಂಡಿರುತ್ತದೆ. ಬಿಸಿ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿಕೊಂಡು ಕಾಲು ಮತ್ತು ಕೈಗಳ ಮೇಲೆ ಹಾಕಿಕೊಳ್ಳಬೇಕು. ಇನ್ನು ಸ್ನಾನ ಮಾಡುವ ವೇಳೆಯೂ ನೀರಿನಲ್ಲಿ ಒಂದು ಚಿಟಿಕೆ ಉಪ್ಪು ಹಾಕಿಕೊಂಡು ಸ್ನಾನ ಮಾಡಬೇಕು. ಇದರಿಂದ ನಿಮ್ಮ ತಾಪತ್ರಯಗಳೆಲ್ಲವೂ ದೂರವಾಗುತ್ತದೆ.
(salt can remove vastu defects and inauspicious effects of rahu ketu astro remedies of salt)




