AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CM ಊರಲ್ಲಿ ಸೋಂಕಿತನ ಹೆಜ್ಜೆ ಗುರುತು: ಊರೆಲ್ಲಾ ಸುತ್ತಾಡಿ, ಮದುವೇಲಿ ಊಟ ಬಡಿಸಿದ್ದಾನೆ!

ಶಿವಮೊಗ್ಗ: ಕೊರೊನಾ ಹೆಮ್ಮಾರಿ ಎಷ್ಟೇ ಪ್ರಯತ್ನ ಪಟ್ಟರೂ ಹಿಮ್ಮೆಟ್ಟುವ ಲಕ್ಷಣಗಳು ಇನ್ನೂ ಕಾಣ್ತಿಲ್ಲ. ಹತ್ತಿಕ್ಕಿದಷ್ಟೂ ಮಾರಿ ಹೆಮ್ಮಾರಿಯಾಗ್ತಾನೇ ಇದೆ. ಇದು ಈಗ ಮಲೆನಾಡಿನ ಗ್ರಾಮೀಣ ಭಾಗಗಳಿಗೂ ತನ್ನ ಕಬಂಧ ಬಾಹುಗಳನ್ನ ಚಾಚ್ತಾ ಇದೆ. ಈಗ ಅದು ಸಿಹಿ ಕಬ್ಬಿನ ವ್ಯಾಪಾರಿಯ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಕಹಿ ಕಂಪನಗಳನ್ನ ಎಬ್ಬಿಸಿದೆ. ಹೌದು, ಹಸಿರನ್ನೇ ಹೊದ್ದು ಮಲಗಿರೋ ಮಲೆನಾಡಲ್ಲಿ ಈಗ ಕೊರೊನಾ ಮರ್ಮಾಘಾತ ನೀಡ್ತಿದೆ. ಮನೆ ಮನೆಗೂ ನುಗ್ತಿರೋ ರಕ್ಕಸ ವೈರಸ್ ನರಕ ದರ್ಶನ ತೋರಿಸ್ತಿದೆ. ಶತಕ ಬಾರಿಸಿರೋ ಕೇಸ್​ಗಳಿಂದಲೇ […]

CM ಊರಲ್ಲಿ ಸೋಂಕಿತನ ಹೆಜ್ಜೆ ಗುರುತು: ಊರೆಲ್ಲಾ ಸುತ್ತಾಡಿ, ಮದುವೇಲಿ ಊಟ ಬಡಿಸಿದ್ದಾನೆ!
Guru
|

Updated on: Jun 23, 2020 | 7:43 PM

Share

ಶಿವಮೊಗ್ಗ: ಕೊರೊನಾ ಹೆಮ್ಮಾರಿ ಎಷ್ಟೇ ಪ್ರಯತ್ನ ಪಟ್ಟರೂ ಹಿಮ್ಮೆಟ್ಟುವ ಲಕ್ಷಣಗಳು ಇನ್ನೂ ಕಾಣ್ತಿಲ್ಲ. ಹತ್ತಿಕ್ಕಿದಷ್ಟೂ ಮಾರಿ ಹೆಮ್ಮಾರಿಯಾಗ್ತಾನೇ ಇದೆ. ಇದು ಈಗ ಮಲೆನಾಡಿನ ಗ್ರಾಮೀಣ ಭಾಗಗಳಿಗೂ ತನ್ನ ಕಬಂಧ ಬಾಹುಗಳನ್ನ ಚಾಚ್ತಾ ಇದೆ. ಈಗ ಅದು ಸಿಹಿ ಕಬ್ಬಿನ ವ್ಯಾಪಾರಿಯ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಕಹಿ ಕಂಪನಗಳನ್ನ ಎಬ್ಬಿಸಿದೆ.

ಹೌದು, ಹಸಿರನ್ನೇ ಹೊದ್ದು ಮಲಗಿರೋ ಮಲೆನಾಡಲ್ಲಿ ಈಗ ಕೊರೊನಾ ಮರ್ಮಾಘಾತ ನೀಡ್ತಿದೆ. ಮನೆ ಮನೆಗೂ ನುಗ್ತಿರೋ ರಕ್ಕಸ ವೈರಸ್ ನರಕ ದರ್ಶನ ತೋರಿಸ್ತಿದೆ. ಶತಕ ಬಾರಿಸಿರೋ ಕೇಸ್​ಗಳಿಂದಲೇ ಮಲೆನಾಡಿಗರು ಶೇಕ್ ಆಗಿದ್ರೆ, ಒಬ್ಬ ಕಬ್ಬಿನ ವ್ಯಾಪಾರಿಯ ಹೆಜ್ಜೆ ಗುರುತು ಜನರ ನಿದ್ದೆಯನ್ನೇ ಕಿತ್ತುಕೊಂಡಿದೆ.

ಊರೆಲ್ಲಾ ಸಂಚಾರ. ಮಲೆನಾಡಿಗೆ ಕಂಟಕವಾದ ಕಬ್ಬಿನ ವ್ಯಾಪಾರಿ ಯೆಸ್. ಜೂನ್ 18 ರಂದು ಶಿವಮೊಗ್ಗ ಜಿಲ್ಲೆ ಪಾಶೆಟ್ಟಿಕೊಪ್ಪ ಗ್ರಾಮದ ಕಬ್ಬು ವ್ಯಾಪಾರಿಗೆ ಕೊರೊನಾ ವಕ್ಕರಿಸಿಕೊಂಡಿತ್ತು.  ಆತನ ಟ್ರಾವೆಲ್‌ ಹಿಸ್ಟರಿ ನೋಡಿದ ಅಧಿಕಾರಿಗಳೇ ಈಗ ಬೆವೆತು ಹೋಗಿದ್ದಾರೆ. ಯಾಕಂದ್ರೆ ಕೊರೊನಾ ಸೋಂಕಿತ ವ್ಯಕ್ತಿ ರಿಪ್ಪನ್​ ಪೇಟೆ ಸುತ್ತಮುತ್ತಲ 10 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ತಿರುಗಾಡಿದ್ದಾನೆ. ಕೊರೊನಾ ಪಾಸಿಟಿವ್ ಎಂದು ಪತ್ತೆಯಾಗೋ ದಿನವೇ ಆತ ರಿಪ್ಪನ್​​​​​ಪೇಟೆ ತುಂಬೆಲ್ಲಾ ಓಡಾಡಿದ್ದಾನೆ. ಸಂಜೆ ರಿಪ್ಪನ್​​​​ಪೇಟೆಯಲ್ಲಿ ಕೃಷಿ ಉಪಕರಣಗಳ ರಿಪೇರಿಗೆಂದು ವಿವಿಧ ಅಂಗಡಿಗಳಿಗೆ ವಿಸಿಟ್‌ ಮಾಡಿದ್ದಾನೆ. ಹೊಟೇಲ್​​ಗೆ ಹೋಗಿ ಪರಿಚಯಸ್ಥರನ್ನೆಲ್ಲಾ ಭೇಟಿಯಾಗಿದ್ದಾನೆ. ಕೊಬ್ಬರಿ ಎಣ್ಣೆ ಉತ್ಪಾದನಾ ಘಟಕಕ್ಕೂ ಹೋಗಿದ್ದಾನೆ.

ಮದುವೆಯಲ್ಲಿ ಊಟ ಬಡಿಸಿರುವ ಸೋಂಕಿತ, ನೂರಾರು ಜನರಲ್ಲಿ ಆತಂಕ ಮತ್ತೊಂದು ಶಾಕಿಂಗ್ ವಿಷ್ಯ ಅಂದ್ರೆ ಜೂನ್ 15 ರಂದು ಈ ಸೋಂಕಿತ ವ್ಯಾಪಾರಿ ತನ್ನ ಗ್ರಾಮದಲ್ಲಿ ನಡೆದ ಮದುವೆಯ ಉಸ್ತುವಾರಿ ವಹಿಸಿದ್ದು. ಮದುವೆಗೆ ಬಂದ ಬಹುತೇಕರಿಗೆ ಈತನೇ ಊಟ ಬಡಿಸಿದ್ನಂತೆ. ಜತೆಗೆ ಆ ಮದುವೆಗೆ ಬಂದ ಸುತ್ತಮುತ್ತಲಿನ ಹಳ್ಳಿಯ 400 ರಿಂದ 500 ಜನರು ಕಬ್ಬು ವ್ಯಾಪಾರಿಯನ್ನ ಭೇಟಿಯಾಗಿದ್ದಾರೆ.

ಚಿಕಿತ್ಸೆ ನೀಡಿದ ವೈದ್ಯರಿಗೆ ಕ್ವಾರಂಟೈನ್‌ ಈ ನಡುವೆ ಜೂನ್‌ 14 ರಂದು ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ರಿಂದ ತೀರ್ಥಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಪರಿಣಾಮ ಈಗ ಈ ತೀರ್ಥಹಳ್ಳಿಯ ಖಾಸಗಿ ವೈದ್ಯರು ಮತ್ತು ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ.

ಸಿಎಂ ಕ್ಷೇತ್ರ ಶಿಕಾರಿಪುರದಲ್ಲೂ ಸೋಂಕಿತ ವ್ಯಾಪಾರಿಯ ನಂಜು ಇದೆಲ್ಲವುಗಳ ನಡುವೆ ಶಿಕಾರಿಪುರ ಪಟ್ಟಣದಲ್ಲಿ ತನ್ನ ಮೃತ ಸಂಬಂಧಿಯ ತಿಥಿ ಕಾರ್ಯಕ್ಕೂ ಸೋಂಕಿತ ವ್ಯಾಪಾರಿ ಹೋಗಿ ಬಂದಿರೋದು ಶಿಕಾರಿಪರಿದಲ್ಲಿ ಬರ ಸಿಡಿಲೇ ಬಂದಪ್ಪಳಿಸಿದಂತಾಗಿದೆ. ಮಲೆನಾಡಲ್ಲಿ ಕೊರೊನಾ ರಣಕೇಕೆ ಹಾಕ್ತಿರೋ ಹೊತ್ತಲ್ಲೇ ಕಬ್ಬಿನ ವ್ಯಾಪಾರಿ ಅಂತರ್​ ಜಿಲ್ಲೆ, ಹಳ್ಳಿ ಹಳ್ಳಿಗೂ ಹೆಜ್ಜೆ ಊರಿರೋದು, ಸೋಂಕಿನ ನಂಜನ್ನ ಊರಿಗೆಲ್ಲಾ ಹರಡಿದ್ದಾನಾ  ಅನ್ನೋ ಆತಂಕ ಎದುರಾಗಿದೆ.

ಒಬ್ಬ ಸೋಂಕಿತನ ಈ ಟ್ರಾವೆಲ್ ಹಿಸ್ಟರಿಯೇ ಇಷ್ಟಿರೋವಾಗ ಇಂಥ ಇನ್ನೊಂದಿಷ್ಟು ಜನ ಸೋಂಕಿತರಾದ್ರೆ ಏನಪ್ಪಾ? ಅಂತಾ ಮಲೆನಾಡಿನ ಜನ ತಲೆ ಮೇಲೆ ಕೈಹೊತ್ತುಕೊಂಡು ಕುಳಿತಿದ್ದಾರೆ. -ಬಸವರಾಜ್