25 ಅಂತಸ್ತುಗಳ ಈ ಹೊಟೇಲ್ ಕಂಪ್ಲೀಟ್ ಸ್ವರ್ಣಮಯ!
ಈ ಜಗತ್ತು ಎಷ್ಟು ವಿಸ್ಮಯ ಅಲ್ವಾ..? ತೀರಾ ವಿಚಿತ್ರವಾದುದನ್ನು ವಿಸ್ಮಯವಾದುದನ್ನು ನಮ್ಮಲ್ಲಿ ಕೆಲವರು ತುಂಬಾ ಇಷ್ಟಪಡ್ತಾರೆ. ಇದುವೇ ಜೀವನ..! ಅಂತ ಒಂದು ವಿಸ್ಮಯ ಈ ಗೋಲ್ಡ್ ಪ್ಲೇಟೆಡ್ ಹೊಟೇಲ್. ಅದಿರೋದು ವಿಯೆಟ್ನಾಂನಲ್ಲಿ..! ಗೋಲ್ಡನ್ ಲೇಕ್ ಅಪಾರ್ಟ್ಮೆಂಟ್.. ಇದು ವಿಶ್ವದ ಮೊತ್ತ ಮೊದಲ ಗೋಲ್ಡ್ ಪ್ಲೇಟೆಡ್ ಹೊಟೇಲ್. ಇದಿರೋದು ವಿಯೆಟ್ನಾಂನ ಹಾನೋಯ್ ಪ್ರಾಂತ್ಯದಲ್ಲಿ..! ಈ ಹೊಟೇಲಿನ ಹೊರಾಂಗಣ ಗೋಡೆಯನ್ನೆಲ್ಲಾ 24 ಕ್ಯಾರೆಟ್ ಚಿನ್ನದಿಂದ ಗೋಲ್ಡ್ ಪ್ಲೇಟ್ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಅಂದ್ರೆ ಸರಿಸುಮಾರು 5000 ಚದರ ಮೀಟರ್ ಗಳ […]
ಈ ಜಗತ್ತು ಎಷ್ಟು ವಿಸ್ಮಯ ಅಲ್ವಾ..? ತೀರಾ ವಿಚಿತ್ರವಾದುದನ್ನು ವಿಸ್ಮಯವಾದುದನ್ನು ನಮ್ಮಲ್ಲಿ ಕೆಲವರು ತುಂಬಾ ಇಷ್ಟಪಡ್ತಾರೆ. ಇದುವೇ ಜೀವನ..! ಅಂತ ಒಂದು ವಿಸ್ಮಯ ಈ ಗೋಲ್ಡ್ ಪ್ಲೇಟೆಡ್ ಹೊಟೇಲ್. ಅದಿರೋದು ವಿಯೆಟ್ನಾಂನಲ್ಲಿ..!
ಗೋಲ್ಡನ್ ಲೇಕ್ ಅಪಾರ್ಟ್ಮೆಂಟ್.. ಇದು ವಿಶ್ವದ ಮೊತ್ತ ಮೊದಲ ಗೋಲ್ಡ್ ಪ್ಲೇಟೆಡ್ ಹೊಟೇಲ್. ಇದಿರೋದು ವಿಯೆಟ್ನಾಂನ ಹಾನೋಯ್ ಪ್ರಾಂತ್ಯದಲ್ಲಿ..! ಈ ಹೊಟೇಲಿನ ಹೊರಾಂಗಣ ಗೋಡೆಯನ್ನೆಲ್ಲಾ 24 ಕ್ಯಾರೆಟ್ ಚಿನ್ನದಿಂದ ಗೋಲ್ಡ್ ಪ್ಲೇಟ್ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಅಂದ್ರೆ ಸರಿಸುಮಾರು 5000 ಚದರ ಮೀಟರ್ ಗಳ ಒಟ್ಟು ವಿಸ್ತೀರ್ಣದ ಗೋಲ್ಡ್ ಪ್ಲೇಟ್ ಗಳನ್ನು ಇದಕ್ಕಾಗಿ ಬಳಸಲಾಗಿದೆ.
ಹಾಗೆ ಇದರ ಒಳಗೆ ಸೇರಿಹೋದರೆ ಆ ಹೊಟೇಲಿನ 25 ಅಂತಸ್ತುಗಳನ್ನು ಗೋಲ್ಡ್ ಪ್ಲೇಟ್ ಮಾಡಲಾಗಿದೆ. ಅಲ್ಲಿರುವ ಪ್ರತಿಯೊಂದು ವಸ್ತುಗಳು ಗೋಲ್ಡ್ ಪ್ಲೇಟೆಡ್ ಆಗಿವೆ. ನೀವು ನಂಬಲೇ ಬೇಕು ಯಾಕೆಂದರೆ ಇದರ ಟಾಯ್ನೆಟ್ ಮಾತ್ರವಲ್ಲಾ ಬಾತ್ ಟಬ್, ಕಾಮೋಡ್ ಗಳಿಗೆ ಕೂಡಾ ಚಿನ್ನದ ಕವರಿಂಗ್ ಇರುತ್ತೆ. ಕಾಫಿ ಕಪ್, ಕನ್ನಡಿ ಫ್ರೇಮ್ ಎಲ್ಲವೂ ಚಿನ್ನದಿಂದ ಕವರಿಂಗ್ ಮಾಡಿರೋದು..!
ಅಷ್ಟೇ ಯಾಕೆ ಇಲ್ಲಿರುವ ಈಜುಕೊಳ ಕೂಡಾ ಕಂಪ್ಲೀಟಾಗಿ ಚಿನ್ನದ ಪ್ಲೇಟಿಂಗ್ನಿಂದ್ಲೇ ಮಾಡಿ ಇಡಲಾಗಿದೆ. ಹೀಗೆ ಇಡೀ ಹೊಟೇಲೇ ಚಿನ್ನದ ಬಣ್ಣದಿಂದ ಅಲಂಕಾರಗೊಂಡಿದೆ -ರಾಜೇಶ್ ಶೆಟ್ಟಿ
Published On - 7:05 pm, Tue, 23 June 20