Shweta Your Mic is On ಟ್ರೆಂಡ್​ ಆಗ್ತಿರೋದೆಕೆ? ಅಷ್ಟಕ್ಕೂ ಯಾರು ಈ ಶ್ವೇತಾ?

Shweta Your Mic is On ಟ್ರೆಂಡ್​ ಆಗ್ತಿರೋದೆಕೆ? ಅಷ್ಟಕ್ಕೂ ಯಾರು ಈ ಶ್ವೇತಾ?
ಸಾಂದರ್ಭಿಕ ಚಿತ್ರ

Shweta Your Mic is On ಟ್ವಿಟ್ಟರ್​​ನಲ್ಲಿ ಟ್ರೆಂಡ್​ ಆಗುತ್ತಿದೆ. ಅಷ್ಟಕ್ಕೂ ಇದು ಟ್ರೆಂಡ್​ ಆಗ್ತಿರೋದೆಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

Rajesh Duggumane

|

Feb 20, 2021 | 6:39 PM

ShwetaYourMicisOn ಇದು ಟ್ವಿಟ್ಟರ್​ನಲ್ಲಿ ಇಂದು  ಟ್ರೆಂಡ್​ ಆಗುತ್ತಿದೆ. ಅಷ್ಟೇ ಅಲ್ಲ, ಶ್ವೇತಾ ಬಗ್ಗೆ ಸಾಕಷ್ಟು ಮೀಮ್​ಗಳು ಕೂಡ ಹರಿದಾಡುತ್ತಿವೆ. ಅನೇಕರು ಶ್ವೇತಾ ಮೀಟಿಂಗ್​ ಅಟೆಂಡ್​ ಆದಾಗ, ಮೈಕ್​ ಆಫ್​ ಮಾಡೋದು ಹೇಗೆ ಎನ್ನುವ ಪಾಠವನ್ನು ಕೂಡ ಮಾಡಿದ್ದಾರೆ. ಅಷ್ಟಕ್ಕೂ ಯಾರು ಈ ಶ್ವೇತಾ? ಅವರು ಮಾಡಿದ ತಪ್ಪೇನು? ಅಷ್ಟಕ್ಕೂ ShwetaYourMicisOn ಎಂದು ಹೇಳ್ತಿರೋದೇಕೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ಅನೇಕರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ಹೀಗಾಗಿ, ಆನ್​ಲೈನ್​ನಲ್ಲೇ ಮೀಟಿಂಗ್​ ಅಟೆಂಡ್​ ಮಾಡೋದು ಅನಿವಾರ್ಯವಾಗಿದೆ. ಅಲ್ಲದೆ, ತರಗತಿಗಳು ಕೂಡ ಆನ್​ಲೈನ್​ ಮೂಲಕವೇ ನಡೆಯುತ್ತಿದೆ. ಹೀಗಾಗಿ, ಮೀಟಿಂಗ್​ಗೆ ಗೂಗಲ್​ ಮೀಟ್​, ಜೂಮ್​ ಕಾಲ್​ ಮೂಲಕ ಹಾಜರಿ ಹಾಕುತ್ತಿದ್ದಾರೆ. ಆನ್​ಲೈನ್​ ಮೂಲಕ ಮೀಟಿಂಗ್​ ಅಟೆಂಡ್​ ಆಗುವಾಗ ನಡೆದ ಅಧ್ವಾನಗಳು ಒಂದೆರಡಲ್ಲ. ಶ್ವೇತಾಗೆ ಆಗಿದ್ದೂ ಇದೆ!

ಶ್ವೇತಾ ಎಂಬ ವಿದ್ಯಾರ್ಥಿನಿ ಜೂಮ್​ ಮೂಲಕ ಆನ್​ಲೈನ್​ ತರಗತಿಗೆ ಅಟೆಂಡ್​ ಆಗಿದ್ದರು. ಈ ವೇಳೆ, ಅವರ ಮೈಕ್​ ಆನ್​ ಆಗಿಯೇ ಇತ್ತು. ಆದರೆ, ಹೆಡ್​ಫೋನ್​ ಹಾಕಿರದ ಕಾರಣ ಇದು ಅವರ ಗಮನಕ್ಕೆ ಬಂದಿರಲಿಲ್ಲ. ಇಷ್ಟೇ ಆಗಿದ್ದರೆ ಈ ವಿಚಾರ ಟ್ರೋಲ್​ ಆಗುತ್ತಲೇ ಇರಲಿಲ್ಲ. ಗೆಳತಿ ಒಬ್ಬಳಿಗೆ ಶ್ವೇತಾ ಕರೆ ಮಾಡಿ ಮಾತನಾಡುತ್ತಿದ್ದರು. ಈ ವೇಳೆ ಶ್ವೇತಾ ತನ್ನ ಖಾಸಗಿ ಮಾಹಿತಿಯನ್ನು ಇಂಚಿಂಚು ಬಿಚ್ಚಿಟ್ಟಿದ್ದರು. ಮೀಟಿಂಗ್​ನಲ್ಲಿದ್ದವರು, ಶ್ವೇತಾ ನಿನ್ನ ಮೈಕ್​ ಆನ್​ ಆಗಿದೆ (Shweta Your Mic is On ) ಎಂದು ಕೂಗುತ್ತಲೇ ಇದ್ದರು. ಆದರೆ, ಶ್ವೇತಾ ಮಾತ್ರ ಒಂದೇ ಸಮನೆ ಮಾತನಾಡುತ್ತಲೇ ಇದ್ದರು.

ಮೀಟಿಂಗ್​ನಲ್ಲಿದ್ದವರು ಯಾರೋ ಇದನ್ನು ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್​ ಆಗಿದೆ. ShwetaYourMicisOn ಟ್ರೆಂಡ್​ ಆಗಲು ಕೂಡ ಇದುವೇ ಕಾರಣ. ಇನ್ನು, ಅನೇಕ ಬ್ರ್ಯಾಂಡ್​ಗಳು ಕೂಡ ಇದನ್ನು ಮೀಮ್​ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿವೆ.

ಇದನ್ನೂ ಓದಿ: ಟ್ರೆಂಡ್ ಆಯ್ತು Bharat Ratna For Ratan Tata ಹ್ಯಾಶ್ ಟ್ಯಾಗ್… ಈ ಅಭಿಯಾನ ನಿಲ್ಲಿಸಿ; ಅಭಿಮಾನ ಇರಲಿ ಎಂದ ರತನ್ ಟಾಟಾ

Follow us on

Related Stories

Most Read Stories

Click on your DTH Provider to Add TV9 Kannada