AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಟ್ಟಿಯಾಗಿ ಹೋಗಿ ಕೇಳ್ರೀ.. ನೀವು ಕೊಟ್ಟ 525 ಕೋಟಿ ಪರಿಹಾರ ಸಾಕಾಗಲ್ಲ ಅಂತಾ -ಸಿದ್ದು ಗುಟುರು

ಹಿಂದೆ ನಾನು ಸಿಎಂ ಆಗಿದ್ದಾಗ ರಾಜ್ಯದಲ್ಲಿ ಬರಗಾಲ ಇತ್ತು. ಆಗ ನಾನು ಕೇಂದ್ರದವರನ್ನು ಭೇಟಿ ಮಾಡಿದಾಗ ಸರಿಯಾದ ಪರಿಹಾರ ಕೊಟ್ಟಿಲ್ಲ. ಈಗ ನೀವು ಕೇಳಿದ್ರೂ ಅವರು ಪರಿಹಾರ ಕೊಡೋದಿಲ್ಲ. ಗಟ್ಟಿಯಾಗಿ ಹೋಗಿ ಕೇಳ್ರೀ, ನೀವು ಕೊಟ್ಟ 525 ಕೋಟಿ ಪರಿಹಾದ ಸಾಕಾಗಲ್ಲ ಅಂತಾ ಸಿದ್ದರಾಮಯ್ಯ ಅಧಿವೇಶನದಲ್ಲಿ ಗುಡುಗಿದರು.

ಗಟ್ಟಿಯಾಗಿ ಹೋಗಿ ಕೇಳ್ರೀ.. ನೀವು ಕೊಟ್ಟ 525 ಕೋಟಿ ಪರಿಹಾರ ಸಾಕಾಗಲ್ಲ ಅಂತಾ -ಸಿದ್ದು ಗುಟುರು
R.ಅಶೋಕ್​(ಎಡ); ಸಿದ್ದರಾಮಯ್ಯ (ಬಲ) ಪ್ರಾತಿನಿಧಿಕ ಚಿತ್ರ
KUSHAL V
|

Updated on: Dec 07, 2020 | 5:50 PM

Share

ಬೆಂಗಳೂರು: ಚಳಿಗಾಲದ ಅಧಿವೇಶನದ ವೇಳೆ ಅತಿವೃಷ್ಟಿ ಕುರಿತು ಚರ್ಚೆ ನಡೆಸಿದ ವೇಳೆ ಸಿದ್ದರಾಮಯ್ಯ ನಿಮ್ಮ ಪ್ರಧಾನಿ ಒಂದು ಬಾರಿಯಾದ್ರು ಭೇಟಿ ನೀಡಿದ್ದಾರಾ? ಪ್ರವಾಹ ಪೀಡಿತ ಪ್ರದೇಶಗಳಿಗೆ ನೀವು ಭೇಟಿ ನೀಡಿದ್ರಾ? ಜನರು 25 ಸಂಸದರನ್ನ ಆಯ್ಕೆ ಮಾಡಿ ಕಳುಹಿಸಿದ್ಯಾಕೆ? ಸಂಸದರು ಏನು ಮಾಡುತ್ತಿದ್ದಾರೆಂದು ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಗೈದರು.

ಎರಡು ಬಾರಿ ಪರಿಹಾರಕ್ಕೆ ನೀವು ಕೇಳಿದ್ದೆಷ್ಟು, ಕೇಂದ್ರ ಸರ್ಕಾರ ಕೊಟ್ಟಿದ್ದೆಷ್ಟು? 35 ಸಾವಿರ ಕೋಟಿ ನಷ್ಟ ಅಂದ್ರೆ 1,500 ಕೋಟಿ ಕೊಟ್ಟರು. ಕರ್ನಾಟಕದಿಂದ ಆಯ್ಕೆ ಆಗಿರುವವರು ದೇಶದ ಹಣಕಾಸು ಸಚಿವರು ಆಗಿದ್ದಾರೆ. ಆ ಋಣವನ್ನಾದ್ರೂ ತೀರಿಸಬೇಕಲ್ವಾ? ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು. ಜೊತೆಗೆ, ನೀವು ಯಾಕೆ ಕೇಳುತ್ತಿಲ್ಲ ಎಂದು ಸಹ ಸಿದ್ದರಾಮಯ್ಯ ಪ್ರಶ್ನಿಸಿದರು.

‘ಪಶ್ಚಿಮ ಬಂಗಾಳದಲ್ಲಿ ಪ್ರವಾಹ ಬಂದ್ರೆ ಹೆಚ್ಚು ಹಣ ಕೊಟ್ರಿ’ ಪಶ್ಚಿಮ ಬಂಗಾಳದಲ್ಲಿ ಪ್ರವಾಹ ಬಂದ್ರೆ ಹೆಚ್ಚು ಹಣ ಕೊಟ್ರಿ. ಚುನಾವಣೆ ಬರುತ್ತಿದೆ ಎಂದು ಹೆಚ್ಚು ಅನುದಾನ ಕೊಟ್ಟಿದ್ದೀರಾ? ನಿಮಗೆ ಯಾರೂ ಹೇಳುವವರು ಇಲ್ಲ, ಕೇಳುವವರು ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದರು.

ರಾಜ್ಯದಲ್ಲಿ ಹಣಕಾಸು ಪರಿಸ್ಥಿತಿ ಹಾಳಾಗಿದೆ. ಈಗಾಗಲೇ 82 ಸಾವಿರ ಕೋಟಿ ರೂಪಾಯಿ ಸಾಲ ಇದೆ. ಆದರೆ, ದುಂದು ವೆಚ್ಚ ಹೆಚ್ಚು ಮಾಡುತ್ತಿದ್ದೀರಿ ಎಂದು ಸಿದ್ದರಾಮಯ್ಯ ಹೇಳಿದರು. ನಿಗಮ ಮಂಡಳಿಗಳಿಗೆ ನೇಮಕ ಮಾಡಿದ್ರಿ, ಕಾರು ಕೊಟ್ಟಿದ್ದೀರಿ. ಅವರಿಗೆ ಸಿಬ್ಬಂದಿ, ಕಾರು ಕೊಟ್ಟಿದ್ದೀರಿ. ಆದರೆ, ಮಳೆಯಿಂದ ಮನೆ ಹಾಳಾಗಿರುವುದಕ್ಕೆ ಪರಿಹಾರ ಕೊಟ್ಟಿಲ್ಲ. ಕಳೆದ ವರ್ಷ ಹಾಳಾದ ಮನೆಗಳನ್ನೇ ಇನ್ನೂ ಕಟ್ಟಿಕೊಟ್ಟಿಲ್ಲ. 1 ಲಕ್ಷ 79 ಸಾವಿರ ಮನೆ ಹಾಳಾಗಿದೆ ಎಂದು ಜಾಹೀರಾತು ಕೊಡ್ತೀರಾ. ಆದರೆ, ಲೆಕ್ಕದಲ್ಲಿ 1 ಲಕ್ಷದ 24 ಸಾವಿರ ಮನೆ ಅಂತಾ ಹೇಳಿದ್ದೀರಿ. ಯಾಕೆ ಈ ತಪ್ಪು ಲೆಕ್ಕಾಚಾರ ಕೊಟ್ಟಿದ್ದೀರಿ ಎಂದು ಅತಿವೃಷ್ಟಿ ಕುರಿತ ಚರ್ಚೆ ವೇಳೆ ಸಿದ್ದರಾಮಯ್ಯ ಪ್ರಶ್ನಿಸಿದರು.

‘ನಾನು ಕೇಳಿದ್ರೂ ಪರಿಹಾರ ಕೊಟ್ಟಿಲ್ಲ.. ನೀವು ಕೇಳಿದ್ರೂ ಕೊಡೋದಿಲ್ಲ’ ಹಿಂದೆ ನಾನು ಸಿಎಂ ಆಗಿದ್ದಾಗ ರಾಜ್ಯದಲ್ಲಿ ಬರಗಾಲ ಇತ್ತು. ಆಗ ನಾನು ಕೇಂದ್ರದವರನ್ನು ಭೇಟಿ ಮಾಡಿದಾಗ ಸರಿಯಾದ ಪರಿಹಾರ ಕೊಟ್ಟಿಲ್ಲ. ಈಗ ನೀವು ಕೇಳಿದ್ರೂ ಅವರು ಪರಿಹಾರ ಕೊಡೋದಿಲ್ಲ. ಗಟ್ಟಿಯಾಗಿ ಹೋಗಿ ಕೇಳ್ರೀ, ನೀವು ಕೊಟ್ಟ 525 ಕೋಟಿ ಪರಿಹಾದ ಸಾಕಾಗಲ್ಲ ಅಂತಾ ಸಿದ್ದರಾಮಯ್ಯ ಅಧಿವೇಶನದಲ್ಲಿ ಗುಡುಗಿದರು. ಕೇಂದ್ರ ಸರ್ಕಾರದ ನಿರ್ಧಾರ ಸಮರ್ಥನೆ ಮಾಡಿಕೊಳ್ಳುವ ಸಂದರ್ಭದಲ್ಲಿ ಮಾಡಿಕೊಳ್ಳಿ. ಆದರೆ ಎಲ್ಲ ಸಂದರ್ಭದಲ್ಲೂ ಸಮರ್ಥನೆ ಮಾಡಿಕೊಳ್ಳೋಕೆ ಹೋಗಬೇಡಿ ಎಂದು ಸಿಟ್ಟಾದರು.

ಈ ವೇಳೆ ಸಿದ್ದರಾಮಯ್ಯಗೆ ಸಚಿವ ಅಶೋಕ್ ಉತ್ತರ ಕೊಟ್ಟು 2019-20ರಲ್ಲಿ 3,291 ಕೋಟಿ ನೆರೆ ಪರಿಹಾರ ಕೇಳಿದ್ದೆವು. ಕೇಂದ್ರ ಸರ್ಕಾರ 1,652 ಕೋಟಿ ರೂ. ಪರಿಹಾರ ನೀಡಿತ್ತು. ನಂತರ 3,500 ಕೋಟಿ ರೂ. ಪರಿಹಾರ ನೀಡುವಂತೆ ಮನವಿ ಮಾಡಿದ್ವಿ. ಕೇಂದ್ರ ಸರ್ಕಾರ 500 ಕೋಟಿ ರೂ. ಪರಿಹಾರ ನೀಡಿದ್ದಾರೆ ಎಂದು ಹೇಳಿದರು.

‘ರೈತರ ಕಣ್ಣಲ್ಲಿ ನೀರು ಬರ್ತಿದೆ, ಅವರ ಗೋಳು ಕೇಳೋಱರು?’ ಇತ್ತ, ರೈತರ ಸಮಸ್ಯೆ ಬಗ್ಗೆ ಕೃಷಿ ಇಲಾಖೆ ನೇಮಕಾತಿ ಕುರಿತ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪ ವೇಳೆ ಜೆಡಿಎಸ್​ ಶಾಸಕ ಶಿವಲಿಂಗೇಗೌಡ ಪ್ರಸ್ತಾಪಿಸಿದರು.

ರೈತರ ಕಣ್ಣಲ್ಲಿ ನೀರು ಬರ್ತಿದೆ, ಅವರ ಗೋಳು ಕೇಳೋಱರು? ಅವರು ಪ್ರಶ್ನೆ ಉತ್ತರ ಪ್ರಶ್ನೆ ಉತ್ತರ ಕೊಡ್ತಾ ಹೋಗ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ‌.ಪಾಟೀಲ್ ಉತ್ತರಕ್ಕೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಕೃಷಿ ಇಲಾಖೆಯಲ್ಲಿ ನೇಮಕಾತಿಗಳು ಸರಿಯಾಗಿ ಆಗುತ್ತಿಲ್ಲ ಎಂದು ಹೇಳಿದರು. ಇದಕ್ಕೆ, ಆದಷ್ಟು ಬೇಗ ಸರಿ ಮಾಡುತ್ತೇವೆ ಎಂದು ಬಿ.ಸಿ.ಪಾಟೀಲ್ ಹೇಳಿದರು.