ದೇವಾಲಯಕ್ಕೆ ಹೊರಗಿನಿಂದಲೇ ಕೈ ಮುಗಿದು ನಡೆದ ಮಾಜಿ ಸಿಎಂ ಸಿದ್ದರಾಮಯ್ಯ

ಕೋಲಾರ: ಮಾಲೂರು ತಾಲೂಕಿನ ಕೊಮ್ಮನಹಳ್ಳಿಯಲ್ಲಿ ಕೊರೊನಾ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ವಾರಿಯರ್ಸ್​ಗೆ ಅಭಿನಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಚನ್ನಬೈರವೇಶ್ವರ ದೇವಾಲಯದ ಹೊರಗಿನಿಂದಲೇ ಕೈಮುಗಿದು ಮುಂದೆ ಸಾಗಿದ ಘಟನೆ ನಡೆಯಿತು. ಕೊಮ್ಮನಹಳ್ಳಿಯಲ್ಲಿರುವ ಚನ್ನಬೈರವೇಶ್ವರ ದೇವಸ್ಥಾನದಲ್ಲಿ ಪೂಜೆಗೆಂದು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸಿದ್ದರಾಮಯ್ಯಗಾಗಿ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಸಹ ದೇವಾಲಯದ ಒಳಗೆ ಕಾಯುತ್ತಿದ್ದರು. ಆದ್ರೆ ದೇವಸ್ಥಾನದ ಹೊರಗಿನಿಂದಲೇ ಕೈ ಮುಗಿದು ಸಿದ್ದರಾಮಯ್ಯ ಮುಂದೆ ನಡೆದರು. ಮಾಲೂರು ತಾಲೂಕಿನ 5 ಸಾವಿರ ಕೊರೊನಾ ವಾರಿಯರ್ಸ್​ಗೆ ಸಿದ್ದರಾಮಯ್ಯ ಅಭಿನಂದನೆ […]

ದೇವಾಲಯಕ್ಕೆ ಹೊರಗಿನಿಂದಲೇ ಕೈ ಮುಗಿದು ನಡೆದ ಮಾಜಿ ಸಿಎಂ ಸಿದ್ದರಾಮಯ್ಯ
ಸಾಧು ಶ್ರೀನಾಥ್​

Updated on: May 06, 2020 | 4:53 PM

ಕೋಲಾರ: ಮಾಲೂರು ತಾಲೂಕಿನ ಕೊಮ್ಮನಹಳ್ಳಿಯಲ್ಲಿ ಕೊರೊನಾ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ವಾರಿಯರ್ಸ್​ಗೆ ಅಭಿನಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಚನ್ನಬೈರವೇಶ್ವರ ದೇವಾಲಯದ ಹೊರಗಿನಿಂದಲೇ ಕೈಮುಗಿದು ಮುಂದೆ ಸಾಗಿದ ಘಟನೆ ನಡೆಯಿತು.

ಕೊಮ್ಮನಹಳ್ಳಿಯಲ್ಲಿರುವ ಚನ್ನಬೈರವೇಶ್ವರ ದೇವಸ್ಥಾನದಲ್ಲಿ ಪೂಜೆಗೆಂದು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸಿದ್ದರಾಮಯ್ಯಗಾಗಿ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಸಹ ದೇವಾಲಯದ ಒಳಗೆ ಕಾಯುತ್ತಿದ್ದರು. ಆದ್ರೆ ದೇವಸ್ಥಾನದ ಹೊರಗಿನಿಂದಲೇ ಕೈ ಮುಗಿದು ಸಿದ್ದರಾಮಯ್ಯ ಮುಂದೆ ನಡೆದರು.

ಮಾಲೂರು ತಾಲೂಕಿನ 5 ಸಾವಿರ ಕೊರೊನಾ ವಾರಿಯರ್ಸ್​ಗೆ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿ, ಆಹಾರ ಪದಾರ್ಥಗಳ ಕಿಟ್​ ವಿತರಣೆ ಮಾಡಿದರು. ಕಾರ್ಯಕ್ರಮವನ್ನು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರು ಆಯೋಜಿಸಿದ್ದರು.

Published On - 4:48 pm, Wed, 6 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us