
ಮಂಗಳೂರು: ರಾಜ್ಯದ ಹಲವು ಕಡೆ ವರುಣನ ಅಬ್ಬರ ಜೋರಾಗಿದೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮವಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಮಂಗಳಪದವು ಎಂಬಲ್ಲಿ ನಡೆದಿದೆ.
ನಿನ್ನೆ ರಾತ್ರಿ ಸುರಿದ ಮಳೆಗೆ ಅಬ್ದುಲ್ಲಾ ಎಂಬವರಿಗೆ ಸೇರಿದ್ದ ಮನೆ ನೆಲಸಮವಾಗಿದೆ. ಮನೆಯ ಪಕ್ಕದ ಧರೆ ಕುಸಿದು ಮನೆ ಮೇಲೆ ಮಣ್ಣು ಬಿದ್ದಿದೆ. ಮನೆಯೊಳಗಿದ್ದ ಆರು ಮಂದಿಗೆ ಗಾಯಗಳಾಗಿವೆ. ಮನೆಯೊಳಗಿದ್ದವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.
Published On - 9:14 am, Sun, 20 September 20