AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಟ್ರೇಲಿಯಾ ಸರ್ಕಾರ-ಫೇಸ್​ಬುಕ್​ ಮುನಿಸು ಅಂತ್ಯ; ಮತ್ತೆ ಸುದ್ದಿ ನೀಡಲು ನಿರ್ಧರಿಸಿದ ದೈತ್ಯ ಸೋಷಿಯಲ್ ಮೀಡಿಯಾ

Facebook Australia: ಆಸ್ಟ್ರೇಲಿಯನ್ನರಿಗೆ ಸುದ್ದಿ ಶೇರ್ ಮಾಡಲು ನಿರ್ಬಂಧಿಸಿದ ನಂತರ ಫೇಸ್​ಬುಕ್ ವಿಶ್ವದ ಗಮನಸೆಳೆದಿತ್ತು. ಇದೀಗ ಮಾಧ್ಯಮ ಸಂಸ್ಥೆಗಳು, ಆಸ್ಟ್ರೇಲಿಯಾ ಸರ್ಕಾರ ಮತ್ತು ಫೇಸ್​ಬುಕ್ ನಡುವಣ ಸಂಬಂಧ ಮತ್ತೆ ಸುಸ್ಥಿತಿಗೆ ಬಂದಿದೆ.

ಆಸ್ಟ್ರೇಲಿಯಾ ಸರ್ಕಾರ-ಫೇಸ್​ಬುಕ್​ ಮುನಿಸು ಅಂತ್ಯ; ಮತ್ತೆ ಸುದ್ದಿ ನೀಡಲು ನಿರ್ಧರಿಸಿದ ದೈತ್ಯ ಸೋಷಿಯಲ್ ಮೀಡಿಯಾ
ಫೇಸ್​ಬುಕ್ ಸಂಸ್ಥಾಪಕ ಜುಕರ್​ಬರ್ಗ್​​​
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 23, 2021 | 10:36 PM

Share

ಮೆಲ್ಬರ್ನ್:  ಅತಿದೊಡ್ಡ ಸಾಮಾಜಿಕ ಜಾಲತಾಣವೆನಿಸಿಕೊಂಡಿರುವ ಫೇಸ್​ಬುಕ್​ ಮಂಗಳವಾರ (ಫೆ.23) ಹೇಳಿಕೆ ಬಿಡುಗಡೆ ಮಾಡಿದೆ. ತಾಂತ್ರಿಕ ಸಂಸ್ಥೆಗಳು ಸುದ್ದಿ ಬಿತ್ತರಿಸಲು ಹಣ ತೆರುವ ಕುರಿತು ಆಸ್ಟ್ರೇಲಿಯಾದ ಸರ್ಕಾರದೊಂದಿಗೆ ತಾನೊಂದು ಪರಿಷ್ಕೃತ ಕರಾರು ಮಾಡಿಕೊಂಡಿದ್ದು ಆ ದೇಶದಲ್ಲಿ ತನ್ನ ಸೇವೆಯನ್ನು ಪುನರ್​ಸ್ಥಾಪಿಸಲು ನಿರ್ಧರಿಸಿರುವುದಾಗಿ ಹೇಳಿದೆ. ಪತ್ರಿಕೋದ್ಯಮ ಕಂಟೆಂಟ್​ ನೀಡಲು ಸುದ್ದಿಸಂಸ್ಥೆಗಳಿಗೆ ಸಾಮಾಜಿಕ ಜಾಲತಾಣ ಕಂಪನಿಗಳು ಹಣ ಪಾವತಿಸಬೇಕೆಂಬ ವಿಷಯವು ಕಳೆದ ವಾರ ಚರ್ಚೆಗೆ ಬಂದಿತ್ತು. ಪ್ರಮಾದವಶಾತ್, ಕೊವಿಡ್-19ಕ್ಕೆ ಸಂಬಂಧಿಸಿದ ಎಚ್ಚರಿಕೆಗಳೂ ಸೇರಿದಂತೆ ಸರ್ಕಾರದ ಕೆಲವು ಸುದ್ದಿ ಮತ್ತು ಪ್ರಕಟಣೆಗಳು ನಿರ್ಬಂಧಕ್ಕೊಳಗಾಗಿ ಕೋಲಾಹಲ ಉಂಟಾಗಿತ್ತು.

ಆಸ್ಟ್ರೇಲಿಯಾ ಸರ್ಕಾರದ ಮೈಲಿಗಲ್ಲು ಎನಿಸಿರುವ, ‘ದಿ ಕೋಡ್’ ಅಂತಲೂ ಕರೆಸಿಕೊಳ್ಳುವ ಮಾಧ್ಯಮ ಚೌಕಾಶಿ ಕಾನೂನುಗಳು, ಆ ದೇಶದ ಸಂಸತ್ತಿನಲ್ಲಿ ಇನ್ನೂ ಪಾಸಾಗಬೇಕಿದೆ.

ಆಸ್ಟ್ರೇಲಿಯಾ ಸರ್ಕಾರದ ಕೋಶಾಧಿಕಾರಿಯಾಗಿರುವ ಜೊಷ್ ಫ್ರೈಡೆನ್​ಬರ್ಗ್ ಫೇಸ್​ಬುಕ್ ಸಂಸ್ಥಾಪಕ ಮಾರ್ಕ್ ಜುಕರ್​ಬರ್ಗ್ ಅವರೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿದ ನಂತರ ಮಂಗಳವಾರದಂದು ಸುದ್ದಿಗಾರರೊಂದಿಗೆ ಮಾತಾಡುತ್ತಾ, ‘ಫೇಸ್​ಬುಕ್ ಸಂಸ್ಥೆಯು ಆಸ್ಟ್ರೇಲಿಯಾದೊಂದಿಗೆ ಪುನಃ ಬಾಂಧವ್ಯ ಬೆಳೆಸಿದೆ. ಫೇಸ್​ಬುಕ್​ ಪ್ಲಾಟ್​ಫಾರ್ಮ್​ನಲ್ಲಿ ಆಸ್ಟ್ರೇಲಿಯಾದ ಸುದ್ದಿಗಳನ್ನು ಪುನರ್​ಸ್ಥಾಪಿಸಲಾಗುವುದು. ಹಾಗೆಯೇ, ಫೇಸ್​ಬುಕ್​ ಅಸ್ಟ್ರೇಲಿಯಾದ ಸುದ್ದಿಸಂಸ್ಥೆಗಳೊಂದಿಗೆ ಸೌಹಾರ್ದಯುತ ವಿಚಾರ-ವಿಮರ್ಶೆಗಳನ್ನು ನಡೆಸಲು ಮತ್ತು ಸುದ್ದಿ ವಿಷಯಗಳಿಗೆ ಹಣ ಪಾವತಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕರಾರುಗಳನ್ನು ಮಾಡಿಕೊಳ್ಳಲು ಬದ್ಧವಾಗಿದೆ’ ಎಂದು ಹೇಳಿದರು.

ಜುಕರ್​ಬರ್ಗ್ ಈ ಕುರಿತು ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿ ಫ್ರೈಡೆನಬರ್ಗ್, ‘ಫೇಸ್​ಬುಕ್ ಸುದ್ದಿ ಸಂಸ್ಥೆಗಳೊಂದಿಗೆ ಪ್ರತ್ಯೇಕವಾಗಿ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳಲಿದೆ’ ಎಂದು ಹೇಳಿದರು.

Josh Frydenberg

ಜೊಷ್ ಫ್ರೈಡೆನ್​ಬರ್ಗ್

ಫೇಸ್​ಬುಕ್​ನಂತೆ, ಇಂಟರ್​ನೆಟ್​ ದೈತ್ಯ ಗೂಗಲ್ ಸಹ ಮಾಧ್ಯಮ ಚೌಕಾಶಿ ಕಾನೂನಿಗೆ ಬದ್ಧತೆಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಫೇಸ್​ಬುಕ್ ಮತ್ತು ಗೂಗಲ್ ಸರ್ಕಾರದ ಸುಪರ್ದಿಯಿಂದಾಚೆ ಸುದ್ದಿಸಂಸ್ಥೆಗಳೊಂದಿಗೆ ವಹಿವಾಟಿಗೆ ಸಂಬಂಧಿಸಿದ ಒಪ್ಪಂದಗಳನ್ನು ಮಾಡಿಕೊಂಡು ಸರ್ಕಾರವನ್ನು ಸಂತೃಪ್ತಿಗೊಳಿಸಬಹುದಾಗಿದೆ.

‘ಇದು ಬಹಳ ಕಷ್ಟಕರವಾದ ಪ್ರಕ್ರಿಯೆ ಅಗಲಿದೆ, ಆದರೆ ಅವು ಬಹಳ ಮುಖ್ಯವಾದ ವಿಷಯಗಳಾಗಿರುವುದರಿಂದ ಕಡೆಗಣಿಸವಂತೆಯೂ ಇಲ್ಲ. ಫೇಸ್​ಬುಕ್ ವಾಣಿಜ್ಯ ಸಂಸ್ಥೆಗಳೊಂದಿಗೆ ವಿಶ್ವಾಸಾರ್ಹ ಮಾತುಕತೆಗಳನ್ನು ಆರಂಭಿಸಿದೆ’ ಎಂದು ಫ್ರೈಡೆನ್​ಬರ್ಗ್ ಹೇಳಿದರು. ಫೇಸ್​ಬುಕ್​ ಸಂಸ್ಥೆಯು ತಾನು ಹೊರಡಿಸಿರುವ ಹೇಳಿಕೆಯಲ್ಲಿ ಆಸ್ಟ್ರೇಲಿಯಾ ಸರ್ಕಾರದೊಂದಿಗೆ ಒಪ್ಪೊಂದವೊಂದಕ್ಕೆ ಸಹಿ ಹಾಕಿರರುವುದು ‘ತುಂಬಾ ಸಂತೋಷದಾಯಕ’ ಎಂದು ಹೇಳಿದೆ.

‘ಆಸ್ಟ್ರೇಲಿಯಾ ಸರ್ಕಾರದೊಂದಿಗೆ ನಾವು ನಡೆಸಿದ ಮಾತುಕತೆ ತುಂಬಾ ಖುಷಿ ನೀಡಿದೆ. ಸುದ್ದಿಸಂಸ್ಥೆಗಳಿಗೆ ನಮ್ಮ ಪ್ಲಾಟ್​ಪಾರ್ಮ್​ ನೀಡುವ ಮತ್ತು ನಾವು ಅವರಿಂದ ಪಡೆಯುವ ಕಂಟೆಂಟ್​ಗೆ ಸಂಬಂಧಿಸಿದಂತೆ ನಮಗಿದ್ದ ಆತಂಕಗಳು ದೂರವಾಗಿವೆ. ನಮ್ಮ ಹಿತಾಸಕ್ತಿ ಕಾಪಾಡುವ ಭರವಸೆಯನ್ನು ಸರ್ಕಾರ ನೀಡಿದೆ’ ಎಂದು ಫೇಸ್​ಬುಕ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ಈ ಬದಲಾವಣೆಗಳ ಫಲಶ್ರುತಿಯಾಗಿ, ಸಾರ್ವಜನಿಕ ಹಿತಾಸಕ್ತಿಯ ಪತ್ರಿಕೋದ್ಯಮದಲ್ಲಿ ನಮ್ಮ ಬಂಡವಾಳವನ್ನು ಹೆಚ್ಚಿಸಿ ಮುಂಬರುವ ದಿನಗಳಲ್ಲಿ ಆಸ್ಟ್ರೇಲಿಯನ್ನರಿಗೆ ನಮ್ಮ ಪ್ಲಾಟ್​​ಫಾರ್ಮ್​ನಲ್ಲಿ ಸುದ್ದಿಯನ್ನು ಪುನರ್​​ಸ್ಥಾಪಿಸುತ್ತೇವೆ’ ಎಂದು ಫೇಸ್​ಬುಕ್​ ಹೇಳಿದೆ.

ಇದನ್ನೂ ಓದಿ: ಭಾರತಕ್ಕೂ ಕಾಲಿಡಲಿದೆಯಾ ಆಸ್ಟ್ರೇಲಿಯಾದಲ್ಲಿ ಶುರುವಾದ ಸರ್ಕಾರ-ಫೇಸ್​ಬುಕ್​ ಆದಾಯ ಹಂಚಿಕೆ ವಿವಾದ?

Published On - 9:45 pm, Tue, 23 February 21

ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
Video:ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಫೈಟರ್ ಜೆಟ್ ಯುಕೆಗೆ ವಾಪಸ್
Video:ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಫೈಟರ್ ಜೆಟ್ ಯುಕೆಗೆ ವಾಪಸ್
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?
ಉತ್ತಮ ಮಳೆಯಿಂದಾಗಿ ತುಂಬಿ ತುಳುಕುತ್ತಿರುವ ಕರ್ನಾಟಕದ ಜಲಾಶಯಗಳು
ಉತ್ತಮ ಮಳೆಯಿಂದಾಗಿ ತುಂಬಿ ತುಳುಕುತ್ತಿರುವ ಕರ್ನಾಟಕದ ಜಲಾಶಯಗಳು
ರಸ್ತೆಯಲ್ಲಿ ಬರುತ್ತಿದ್ದ ಕಾರಿಗೆ ಏಕಾಏಕಿ ಅಡ್ಡಬಂದ ಕಾಡಾನೆ: ವಿಡಿಯೋ ವೈರಲ್
ರಸ್ತೆಯಲ್ಲಿ ಬರುತ್ತಿದ್ದ ಕಾರಿಗೆ ಏಕಾಏಕಿ ಅಡ್ಡಬಂದ ಕಾಡಾನೆ: ವಿಡಿಯೋ ವೈರಲ್