ಏಷ್ಯಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸೋನು ಸೂದ್ಗೆ ಅಗ್ರಸ್ಥಾನ
ಮಹಾಮಾರಿ ಕೊರೊನಾ ಸೊಂಕಿನ ಅಟ್ಟಹಾಸದ ಅವಧಿಯಲ್ಲಿ ಅಕ್ಷರಶಃ ನಲುಗಿ ಹೋಗಿದ್ದ ಜನರ ಕಷ್ಟಕ್ಕೆ ನೆರವಾದ ನಟ ಸೋನು ಸೂದ್ ಅವರ ಕಾರ್ಯಗಳ ಬಗ್ಗೆ ವಿಶ್ವಸಂಸ್ಥೆಯೂ ಈ ಹಿಂದೆ ಶ್ಲಾಘಿಸಿತ್ತು.
ಬ್ರಿಟನ್ನ ಈಸ್ಟರ್ನ್ ಐ ವಾರಪತ್ರಿಕೆ ಪ್ರಕಟಿಸಿರುವ ಏಷ್ಯನ್ 50 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಟ ಸೂನು ಸೂದ್ ಅವರಿಗೆ ಮೊದಲ ಸ್ಥಾನ ಸಿಕ್ಕಿದೆ. ಮಹಾಮಾರಿ ಕೊರೊನಾ ಸೊಂಕಿನ ಅಟ್ಟಹಾಸದ ಅವಧಿಯಲ್ಲಿ ಅಕ್ಷರಶಃ ನಲುಗಿ ಹೋಗಿದ್ದ ಜನರ ಕಷ್ಟಕ್ಕೆ ನೆರವಾದ ನಟ ಸೋನು ಸೂದ್ ಅವರ ಕಾರ್ಯಗಳ ಬಗ್ಗೆ ವಿಶ್ವಸಂಸ್ಥೆಯೂ ಈ ಹಿಂದೆ ಶ್ಲಾಘಿಸಿತ್ತು.
ತಮಿಳು, ಹಿಂದಿ, ತೆಲುಗು ಚಿತ್ರಗಳ ಜನಪ್ರಿಯ ನಟ ಸೋನು ಸೂದ್ ವಲಸೆ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ತಲುಪಲು ಮತ್ತು ಇತರ ರೀತಿಯಲ್ಲಿ ಸಂಕಷ್ಟ ಎದುರಿಸುತ್ತಿರುವವರಿಗೆ ನೆರವಾಗಲು ಶ್ರಮಿಸಿದ್ದರು. ಲಾಕ್ಡೌನ್ ಸಂದರ್ಭದಲ್ಲಿ ಜನರ ಬವಣೆ ಹೆಚ್ಚಾಯಿತು. ಅವರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ ಎಂದುಕೊಂಡು ನೆರವಿನ ಹಸ್ತ ಚಾಚಿದೆ. ಸಹಾಯ ಸ್ವೀಕರಿಸಿದವರ ಪ್ರೀತಿ ನನಗೆ ಆಶೀರ್ವಾದ ಇದ್ದಂತೆ. ನನ್ನ ಕೊನೆಯುಸಿರು ಇರುವವರೆಗೂ ಇಂಥ ಕೆಲಸಗಳನ್ನು ಮುಂದುವರಿಸುತ್ತೇನೆ ಎಂದು ಸೋನು ಸೂದ್ ಪ್ರತಿಕ್ರಿಯಿಸಿದ್ದಾರೆ.
ದಿ ಪರ್ಸನಲ್ ಹಿಸ್ಟರಿ ಆಫ್ ಡೇವಿಡ್ ಕಾಪರ್ಫೀಲ್ಡ್ ಮತ್ತು ದಿ ಗ್ರೀನ್ ನೈಟ್ನಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಭಾರತೀಯ ನಟ ದೇವ್ ಪಟೇಲ್ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಗಾಯಕ ಅರ್ಮಾನ್ ಮಲಿಕ್ (5), ಜನಪ್ರಿಯ ತಾರೆ ಪ್ರಿಯಾಂಕಾ ಚೋಪ್ರಾ (6), ಟಾಲಿವುಡ್ ಸ್ಟಾರ್ ಪ್ರಭಾಸ್ (7), ಹಾಲಿವುಡ್ನ ಮಿಂಡಿ ಕಾಲಿಂಗ್ (8), ಭಾರತೀಯ ಟಿವಿ ತಾರೆ ಸುರ್ಬಿ ಚಾಂದನಾ (9) ಮತ್ತು ಅಮಿತಾಬ್ ಬಚ್ಚನ್ (20) ಈ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.