ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರಿಗೆ ಸಿಹಿಸುದ್ದಿ; ವಿಶೇಷ ಬಸ್ ವ್ಯವಸ್ಥೆ

| Updated By: ಆಯೇಷಾ ಬಾನು

Updated on: Mar 31, 2024 | 2:03 PM

ಚಂದ್ರಮಾನ ಯುಗಾದಿ ಹಬ್ಬದ ನಿಮಿತ್ತ ಏಪ್ರಿಲ್ 3 ರಿಂದ ಏಪ್ರಿಲ್ 10 ರವರೆಗೆ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ನಡೆಯಲಿದೆ. ಶ್ರೀಶೈಲಕ್ಕೆ ಅನೇಕ ಕಡೆಗಳಿಂದ ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಾಗಲಕೋಟೆ ಘಟಕ ಹಾಗೂ ಚಿಕ್ಕೋಡಿ ವಿಭಾಗದಿಂದ ಶ್ರೀಶೈಲಕ್ಕೆ ವಿಶೇಷ ಬಸ್ ಬಿಡಲಾಗಿದೆ. ಭಕ್ತರು ಇದರ ಉಪಯೋಗ ಪಡೆದುಕೊಳ್ಳಬೇಕಿದೆ.

ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರಿಗೆ ಸಿಹಿಸುದ್ದಿ; ವಿಶೇಷ ಬಸ್ ವ್ಯವಸ್ಥೆ
ವಿಶೇಷ ಬಸ್
Follow us on

ಬಾಗಲಕೋಟೆ, ಮಾರ್ಚ್.31: ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಗೆ (Sri Shaila Mallikarjuna Jatre) ಪ್ರತಿವರ್ಷ ಲಕ್ಷಾಂತರ ಭಕ್ತರು ನಾನಾ ಪ್ರದೇಶಗಳಿಂದ ಪಾದಯಾತ್ರೆ ಮೂಲಕ ಅಲ್ಲಿಗೆ ತೆರಳ್ತಾರೆ. ಸದ್ಯ ಭಕ್ತರ ಅನುಕೂಲಕ್ಕೆ ಸಾರಿಗೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಬಾಗಲಕೋಟೆ ಘಟಕದಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ (Bus Service). ಭಕ್ತರ ಅನುಕೂಲಕ್ಕೆ ನಿತ್ಯವೂ ಎರಡು ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಜಮಖಂಡಿ, ಮುಧೋಳ, ಗುಳೇದಗುಡ್ಡ, ಇಳಕಲ್ ಸೇರಿದಂತೆ ವಿವಿಧ ಭಾಗದಿಂದ ಭಕ್ತರು ಶ್ರೀಶೈಲಕ್ಕೆ ಹೋಗುತ್ತಾರೆ. ಸದ್ಯ ಬಾಗಲಕೋಟೆಯಿಂದ ಶ್ರೀಶೈಲಕ್ಕೆ 870 ರೂಪಾಯಿ ನಿಗದಿ ಮಾಡಲಾಗಿದೆ.

ಇನ್ನು ಚಂದ್ರಮಾನ ಯುಗಾದಿ ಹಬ್ಬದ ನಿಮಿತ್ತ ಏಪ್ರಿಲ್ 3 ರಿಂದ ಏಪ್ರಿಲ್ 10 ರವರೆಗೆ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ನಡೆಯಲಿದೆ. ಶ್ರೀಶೈಲಕ್ಕೆ ಅನೇಕ ಕಡೆಗಳಿಂದ ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ – NWKRTC)ಗೆ ಸೇರಿರುವ ಚಿಕ್ಕೋಡಿ ವಿಭಾಗದಿಂದಲೂ ಬಸ್ ಸೇವೆ ಸಿಗಲಿದೆ. ಚಿಕ್ಕೋಡಿ, ಅಥಣಿ, ರಾಯಬಾಗ, ನಿಪ್ಪಾಣಿ, ಸಂಕೇಶ್ವರ, ಹುಕ್ಕೇರಿ, ಮತ್ತು ಗೋಕಾಕ್ ಬಸ್ ನಿಲ್ದಾಣಗಳಿಂದ ಶ್ರೀಶೈಲಕ್ಕೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ವಿಶೇಷವಾಗಿ ಒಂದು ಊರಿನಿಂದ 50 ಜನ ಪ್ರಯಾಣಿಕರು ಒಟ್ಟಾಗಿ ಬಂದರೆ, ಸಾಂದರ್ಭಿಕ ಒಪ್ಪಂದದ ಮೇರೆಗೆ ಶ್ರೀಶೈಲ ಸೇರಿದಂತೆ ಹಲವು ಪುಣ್ಯಕ್ಷೇತ್ರಗಳ ದರ್ಶನವನ್ನು ಪಡೆಯಬಹುದು ಎಂದು ಎನ್‌ಡಬ್ಲ್ಯುಕೆಆರ್‌ಟಿಸಿ ತಿಳಿಸಿದೆ. ಪ್ರಮುಖವಾಗಿ ಕೊಡಲಸಂಗಮ, ಬಾದಾಮಿ, ಶಿವಯೋಗಿ ಮಂದಿರ, ಐಹೊಳೆ, ಪಟ್ಟದಕಲ್ಲು, ಮಂತ್ರಾಲಯ ಹಾಗೂ ಮಹಾನಂದಿಗೂ ಭೇಟಿ ನೀಡಬಹುದು.

ಇದನ್ನೂ ಓದಿ: RTPS: ರಾಯಚೂರು ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ; 4 ಘಟಕಗಳು ಬಂದ್

ಬಿಸಿಲಿನ ತಾಪಕ್ಕೆ ಓರ್ವ ಯುವಕ ಹೃದಯಾಘಾತಕ್ಕೊಳಗಾಗಿರುವ ಘಟನೆ ನಡೆದಿದೆ. ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಶ್ರೀಶೈಲ ಅನ್ನೋ ಯುವಕ ಮೃತಪಟ್ಟಿದ್ದಾನೆ. ಈತ ತನ್ನ ಸ್ನೇಹಿತರ ಜೊತೆ ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ಹೊರಟಿದ್ದ. ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೂಲಕ ಪಾದಯಾತ್ರೆ ನಡೀತಿತ್ತು. ಈ ವೇಳೆ ನಿನ್ನೆ ಬಿರು ಬಿಸಿಲಿನಲ್ಲಿ ಶ್ರೀಶೈಲ ಹಾಗೂ ಉಳಿದ ಭಕ್ತರು ಪಾದಯಾತ್ರೆ ನಡೆಸಿದ್ರು. ಬಳಿಕ ದಣಿವಾದ ಹಿನ್ನೆಲೆ ಮಾನ್ವಿ ತಾಲ್ಲೂಕಿಕ ಚಿಕ್ಕ ಕೊಟ್ನೇಕಲ್ ಬಳಿ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ರು. ಈ ವೇಳೆ ಯುವಕ ಶ್ರೀಶೈಲ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ