ಬಾಮ್ಮ, ಪರೀಕ್ಷೆ ಬರೆಯಮ್ಮ.. ಆಮೇಲೆ ಅವನ ಜೊತೆಯೇ ಮದ್ವೆ ಮಾಡಿಸ್ತೀನಿ: ಅಪ್ಪನ ಕಣ್ಣೀರಧಾರೆ
ಚಿಕ್ಕಮಗಳೂರು: ಅವ್ಳು ನನ್ ಮಗ್ಳೆ ಅಲ್ಲ. ಆಕೆ ನಮ್ ಪಾಲಿಗೆ ಸತ್ತೋದ್ಲು. ನನ್ನೆದ್ರು ಆಕೆ ಹೆಸರೆತ್ಬೇಡಿ. ನಾನ್ ಸತ್ರೆ ಆಕೆ ನನ್ ಮುಖ ನೋಡೋಕು ಬರ್ರ್ಬಾದು. ನಂಗೇ ಒಬ್ನೆ ಮಗ. ಮಗ್ಳಿಲ್ಲ. ಇದ್ಲು ಸತ್ತೋದ್ಲು.. ಮಗಳು ಪ್ರಿಯಕರನೊಂದಿಗೆ ಹೋಗಿ ಮದುವೆಯಾದಾಗ ಬಹುತೇಕ ತಂದೆಯರಾಡೋ ಮಾತುಗಳು ಇವು. ಆದ್ರೆ, SSLC ಪರೀಕ್ಷೆ ಬರೆಯೋದ್ ಬಿಟ್ಟು 16ನೇ ವಯಸ್ಸಿಗೆ ಪ್ರಿಯಕರನೊಂದಿಗೆ ಹೋದ ಮಗಳನ್ನ ಅಪ್ಪ, ಅವ್ನ್ ಜೊತೆಯೇ ಮದ್ವೆ ಮಾಡ್ತೀನಿ, ಮೊದ್ಲು SSLC ಪರೀಕ್ಷೆ ಬರಿಯಮ್ಮಾ ಅಂತ ಬೇಡಿಕೊಳ್ತಿದ್ದಾರೆ. ಇದು ಶಿಕ್ಷಣದ […]
ಚಿಕ್ಕಮಗಳೂರು: ಅವ್ಳು ನನ್ ಮಗ್ಳೆ ಅಲ್ಲ. ಆಕೆ ನಮ್ ಪಾಲಿಗೆ ಸತ್ತೋದ್ಲು. ನನ್ನೆದ್ರು ಆಕೆ ಹೆಸರೆತ್ಬೇಡಿ. ನಾನ್ ಸತ್ರೆ ಆಕೆ ನನ್ ಮುಖ ನೋಡೋಕು ಬರ್ರ್ಬಾದು. ನಂಗೇ ಒಬ್ನೆ ಮಗ. ಮಗ್ಳಿಲ್ಲ. ಇದ್ಲು ಸತ್ತೋದ್ಲು.. ಮಗಳು ಪ್ರಿಯಕರನೊಂದಿಗೆ ಹೋಗಿ ಮದುವೆಯಾದಾಗ ಬಹುತೇಕ ತಂದೆಯರಾಡೋ ಮಾತುಗಳು ಇವು. ಆದ್ರೆ, SSLC ಪರೀಕ್ಷೆ ಬರೆಯೋದ್ ಬಿಟ್ಟು 16ನೇ ವಯಸ್ಸಿಗೆ ಪ್ರಿಯಕರನೊಂದಿಗೆ ಹೋದ ಮಗಳನ್ನ ಅಪ್ಪ, ಅವ್ನ್ ಜೊತೆಯೇ ಮದ್ವೆ ಮಾಡ್ತೀನಿ, ಮೊದ್ಲು SSLC ಪರೀಕ್ಷೆ ಬರಿಯಮ್ಮಾ ಅಂತ ಬೇಡಿಕೊಳ್ತಿದ್ದಾರೆ. ಇದು ಶಿಕ್ಷಣದ ಮಹತ್ವ ಅರಿತಿರೋ ಮಲೆನಾಡು ಭಾಗದ ಅಪ್ಪನ ಕಥೆ.. ಕಣ್ಣೀರ ವ್ಯಥೆ..
ಅಮ್ಮಾ.. ಮಗಳೇ.. ಎಲ್ಲಿದ್ದೀಯಮ್ಮ.. ಎಲ್ಲೇ ಇದ್ರು ಬಾರಮ್ಮ.. ಮೊದ್ಲು SSLC ಪರೀಕ್ಷೆ ಮುಗಿಸಿ, ಓದು ಮುಂದುವರೆಸು. ನಿನಗೆ 18 ತುಂಬುತ್ತಿದ್ದಂತೆ ನೀನಿಷ್ಟಪಟ್ಟ ಹುಡುಗನೊಂದಿಗೆ ನಿನ್ನ ಮದ್ವೆ ಮಾಡ್ತೀನಿ ಬಾರಮ್ಮ ಅಂತ ಮಲೆನಾಡಿನ ಅಪ್ಪನೋರ್ವ ತನ್ನ ಮಗಳ ಬಳಿ ಬೇಡಿಕೊಳ್ತಿದ್ದಾರೆ.
ಮಗಳು ಏಪ್ರಿಲ್ 6ರಂದು ಕಾಣೆಯಾಗಿದ್ದಾಳೆ ಅಂದಹಾಗೆ, ಇವರ ಹೆಸ್ರು ಸೆಲ್ವ. ಮೂಲತಃ ತಮಿಳುನಾಡಿನವ್ರು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸದ ಟೀ ಎಸ್ಟೇಟ್‍ನಲ್ಲಿ ಬದುಕು ಕೊಟ್ಟಿಕೊಂಡಿದ್ರು. ಸಂಸೆಯಲ್ಲಿ 10ನೇ ತರಗತಿ ಓದುತ್ತಿದ್ದ ಇವ್ರ 16 ವರ್ಷದ ಮಗಳು ಏಪ್ರಿಲ್ 6ರಂದು ಕಾಣೆಯಾಗಿದ್ದಾಳೆ. ಕಾಣೆ ಅಂದ್ರೆ ಆಕೆ ಎಲ್ಲಿಗೆ-ಯಾರ ಜೊತೆ ಹೋಗಿದ್ದಾಳೆಂದು ಅಪ್ಪನಿಗೂ ಗೊತ್ತಿದೆ. ಅಂದೇ ಕಾಣೆಯಾಗಿರೋ ಬಗ್ಗೆ ದೂರನ್ನೂ ನೀಡಿದ್ದಾರೆ.
ಆದ್ರೆ, ಯಾವುದೇ ಪ್ರಯೋಜನವಾಗಿಲ್ಲ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಮತ್ತೆಲ್ಲೋ ಬದುಕು ಕಟ್ಟಿಕೊಂಡಿರೋ ಈತನಿಗೆ ಶಿಕ್ಷಣದ ಶಕ್ತಿಯ ಅರಿವಿದೆ. ಆದ್ದರಿಂದ ಇಂದು ತನ್ನ ಮಗಳಿಗೆ, ಎಲ್ಲೇ ಇದ್ರು ಮನೆಗೆ ಬಾ. SSLC ಬರೀಕ್ಷೆ ಬರೆದು, ಓದು ಮುಂದುವರೆಸು. ನಿಂಗೆ 18 ತುಂಬುತ್ತಿದ್ದಂತೆ ನಾನೇ ನೀನಿಷ್ಟಪಟ್ಟವನೊಂದಿಗೆ ಮದ್ವೆ ಮಾಡ್ತೀನಿ ಅಂತ ಬೇಡಿಕೊಳ್ತಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ಬಂದು ಲಾಕ್ ಆಗಿದ್ದ ಹಾವೇರಿ ಮೂಲದ ಯುವಕ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸಕ್ಕೆ ಲಾಕ್ ಡೌನ್ ಸಮಯದಲ್ಲಿ ಬಂದು ಲಾಕ್ ಆಗಿದ್ದ. ಈ ವೇಳೆ ಯುವತಿಯ ಜೊತೆ ಸ್ನೇಹ ಬೆಳೆಸಿ, ಆ ಸ್ನೇಹ ಪ್ರೀತಿಗೆ ತಿರುಗಿ ವಯಸ್ಸಲ್ಲದ ವಯಸ್ಸಲ್ಲಿ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ. ಆದ್ರೆ ಮಗಳಲ್ಲಿ ಭವಿಷ್ಯವನ್ನು ಕಂಡಿದ್ದ ಆಕೆಯ ತಂದೆ ತಾಯಿ ಕಂಗಾಲಾಗಿ ಹೋಗಿದ್ದಾರೆ.
ನಿನಗೆ ಎಲ್ಲಿವರೆಗೂ ಆಗುತ್ತೆ ಅಲ್ಲಿವರೆಗೂ ಓದಮ್ಮ. ಇಲ್ಲವಾದ್ರೆ ನಮ್ಮಂತೆ ಕಾಫಿ-ಟೀ ಎಸ್ಟೇಟ್‍ನಲ್ಲಿ ಕಾಫಿ ಹಣ್ಣು ಅಥವಾ ಟೀ ಸೊಪ್ಪನ್ನ ಕೊಯ್ಯಬೇಕೆಂದು ಅಪ್ಪ ಮಗಳ ಬಳಿ ಮನವಿ ಮಾಡಿಕೊಳ್ತಿದ್ದಾರೆ. ಯಾಕಂದ್ರೆ, ಇವ್ರು ತಮಿಳುನಾಡಿನವರಾದ್ರು ಅಪ್ಪ ಬೆಂಗಳೂರಿನ ಗಾರ್ಮೇಂಟ್ ಒಂದರಲ್ಲಿ ಟೈಲರ್ ಕೆಲಸ ಮಾಡುತ್ತಿದ್ದಾರೆ.
ಅಮ್ಮ 400 ಕಿ.ಮೀ. ದೂರದ ಕಳಸದಲ್ಲಿ ಚಹಾ ಸೊಪ್ಪನ್ನ ಕೊಯ್ದು ಬದುಕುತ್ತಿದ್ದಾರೆ. ನಮ್ಮ ಮಕ್ಕಳು ಹೀಗಾಗೋದು ಬೇಡವೆಂದು ಅಪ್ಪನೇ ಮಗಳಿಗೆ ಕೈಮುಗಿದು ಬೇಡಿಕೊಳ್ತಿದ್ದಾರೆ. ಮಗಳು ಹಾವೇರಿ ಮೂಲದ ಆಟೋ ಡ್ರೈವರ್ ಪ್ರೀತಿಯ ಬಲೆಯಲ್ಲಿ ಬಿದ್ದಾಗ ಬುದ್ಧಿ ಹೇಳಿದ್ದ ಅಪ್ಪ, ಆಟೋ ಡ್ರೈವರ್ ಕೊಡಿಸಿದ್ದ ಮೊಬೈಲನ್ನ ಕಿತ್ತಿಟ್ಟಿದ್ರು. ಆದ್ರು ಮಗಳನ್ನ ತಡೆಯಲಾಗಲಿಲ್ಲ.
ಆಕೆ ಏಪ್ರಿಲ್ 6ರಂದೇ ನಾಪತ್ತೆಯಾಗಿದ್ದಾಳೆಂದು ಕಳಸ ಠಾಣೆಯಲ್ಲಿ ದೂರು ನೀಡಿದರು. ನೋ ಯೂಸ್. ಆದ್ರೀಗ, ಅಪ್ಪನೇ ಬಾರಮ್ಮ. SSLC ಪರೀಕ್ಷೆ ಬರೆದು, ಓದು ಮುಂದುವರೆಸು. ನಿಂಗೆ 18 ಆದ ಮೇಲೆ ನಾನೇ ಅವನೊಂದಿಗೆ ಮದ್ವೆ ಮಾಡ್ತೀನಿ ಅಂತ ಗೋಗರೆಯುತ್ತಿದ್ದಾರೆ.
ಟೈಲರಿಂಗ್ ಮಷಿನ್ ತುಳಿಯೋ ಅಪ್ಪನ ನೋವು ಮಗಳ ಓದಿನಲ್ಲಿ ಕಾಣ್ತಿದೆ ಒಟ್ಟಾರೆ, ಮಗಳು ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆಂಬ ವಿಷಯ ಕೇಳಿ ಸಂಬಂಧವನ್ನ ಕಳೆದುಕೊಳ್ಳೋ ಅಪ್ಪಂದಿರ ಮಧ್ಯೆ, ಆ ನೋವಿನಲ್ಲೂ ನನ್ನ ಮಗಳು ನನ್ನಂತೆ ಆಗೋದು ಬೇಡವೆಂದು SSLC ಪರೀಕ್ಷೆ ಬರಿ, ಓದು ಮುಂದುವರೆಸು ಅವನೊಂದಿಗೆ ನಾನೇ ಮದ್ವೆ ಮಾಡ್ತೀನಿ ಅನ್ನೋ ಅಪ್ಪನ ನಡೆಗೆ ಹ್ಯಾಟ್ಸಾಫ್ ಹೇಳಲೇ ಬೇಕು. ಗಾರ್ಮೆಂಟ್ಸ್ನಲ್ಲಿ ಬೆಳಗ್ಗಿಂದ ಸಂಜೆವರೆಗೂ ಟೈಲರಿಂಗ್ ಮಷಿನ್ ತುಳಿಯೋ ಅಪ್ಪನ ನೋವು ಮಗಳ ಓದಿನಲ್ಲಿ ಕಾಣ್ತಿದೆ. ಆಕೆ ಎಲ್ಲಿದ್ದರೂ ಬಂದು ಪರೀಕ್ಷೆ ಮುಗಿಸಿ, ಅಪ್ಪನ ಆಸೆ ಈಡೇರಿಸಲಿ ಅನ್ನೋದು ಸ್ಥಳೀಯರ ಒತ್ತಾಸೆ.. -ಪ್ರಶಾಂತ್
Published On - 11:34 am, Fri, 12 June 20