ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವಿನ ಮಾತಿನ ಚಕಮಕಿಗೆ ಸಾಕ್ಷಿಯಾಯಿತು ಮಂಗಳವಾರದ ಸದನ ಕಲಾಪ!

ಅದಕ್ಕೆ ಸಿದ್ದರಾಮಯ್ಯನವರು ಅವರ ಕಾಲದಲ್ಲಿ ಭಾರತ ಶೈನ್ ಆಗುತ್ತಿದ್ದರೆ ರೈತರು ಯಾಕೆ ಬಡತನದಲ್ಲಿದ್ದರು, ಅವರನ್ನು ಕಷ್ಟದ ಸಂಕೋಲೆಗಳಿಗೆ ಸಿಲುಕಿಸುವಂತಿದ್ದ ಮೂರು ಕೃಷಿ ವಿಧೇಯಕಗಳನ್ನು ಜಾರಿ ಮಾಡಿ ಅವರ ಬದುಕು ನರಕಮಯ ಮಾಡಬೇಕು ಎಂಬ ಹುನ್ನಾರದಲ್ಲಿದ್ದಿರಿ, ಎಂದು ಹೇಳುತ್ತಾರೆ.

ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವಿನ ಮಾತಿನ ಚಕಮಕಿಗೆ ಸಾಕ್ಷಿಯಾಯಿತು ಮಂಗಳವಾರದ ಸದನ ಕಲಾಪ!
ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವೆ ಮಾತಿನ ಸಮರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 08, 2022 | 8:11 PM

ಹಾಲಿ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವೆ ಮಾತಿನ ಜುಗಲ್ ಬಂದಿ ನಡೆದರೆ ಹೇಗಿರುತ್ತದೆ ಅನ್ನುವುದಕ್ಕೆ ಮಂಗಳವಾರ ವಿಧಾನಸಭೆಯ (Assembly) ಕಾರ್ಯಕಲಾಪ ಸಾಕ್ಷಿಯಾಯಿತು. ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಸಿದ್ದರಾಮಯ್ಯ (Siddaramaiah) ನಡುವೆ ನಡುವೆ ನಡೆದ ವಾಕ್ಸಮರದಲ್ಲಿ ಅರ್ಧಕ್ಕಿಂತ ಹೆಚ್ಚು ಮಾತುಗಳು ನಮಗೆ ಸ್ಪಷ್ಟವಾಗಿ ಕೇಳಿಸುವುದಿಲ್ಲ. ಆದರೆ ಯಾರ ಆಡಳಿತಾವಧಿಯಲ್ಲಿ ದೇಶ ಹೆಚ್ಚು ಹಾಳಾಯಿತು ಎಂಬ ವಿಷಯದ ಮೇಲೆ ಇಬ್ಬರು ಗಣ್ಯರ ನಡುವೆ ಬಿರುಸಿನ ವಾಗ್ವಾದ ನಡೆಯಿತು. ಅಟಲ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಮಂತ್ರಿಯಾಗಿದ್ದಾಗ ಇಂಡಿಯಾ ಶೈನಿಂಗ್ ಘೋಷವಾಕ್ಯದೊಂದಿಗೆ ದೇಶದೆಲ್ಲೆಡೆ ರಸ್ತೆಗಳ ನಿರ್ಮಾಣಗೊಂಡ ಕಾರಣ ನೀವು ಕಾರಲ್ಲಿ ತಿರುಗುವುದು ಸಾಧ್ಯವಾಗುತ್ತಿದೆ ಎಂದು ಬೊಮ್ಮಾಯಿ ಅವರು ಹೇಳುತ್ತಾರೆ.

ಅದಕ್ಕೆ ಸಿದ್ದರಾಮಯ್ಯನವರು ಅವರ ಕಾಲದಲ್ಲಿ ಭಾರತ ಶೈನ್ ಆಗುತ್ತಿದ್ದರೆ ರೈತರು ಯಾಕೆ ಬಡತನದಲ್ಲಿದ್ದರು, ಅವರನ್ನು ಕಷ್ಟದ ಸಂಕೋಲೆಗಳಿಗೆ ಸಿಲುಕಿಸುವಂತಿದ್ದ ಮೂರು ಕೃಷಿ ವಿಧೇಯಕಗಳನ್ನು ಜಾರಿ ಮಾಡಿ ಅವರ ಬದುಕು ನರಕಮಯ ಮಾಡಬೇಕು ಎಂಬ ಹುನ್ನಾರದಲ್ಲಿದ್ದಿರಿ, ಎಂದು ಹೇಳುತ್ತಾರೆ.

ಸಿದ್ದರಾಮಯ್ಯ ಮುಂದುವರಿದು, ನಮ್ಮ ಕಾಲದಲ್ಲೇ ಆಣೆಕಟ್ಟುಗಳನ್ನು ಕಟ್ಟಲಾಯಿತು, ನಾವು ಸ್ಥಾಪಿಸದ್ದನ್ನು ನೀವು ಒಂದೊಂದಾಗಿ ಮಾರಿಕೊಳ್ಳುತ್ತಾ ಇರುವಿರಿ ಎಂದು ಹೇಳುತ್ತಾರೆ. ಅದಕ್ಕೆ ಬೊಮ್ಮಾಯಿ ಅವರು ಆಣೆಕಟ್ಟುಗಳನ್ನು ನೀವು ಕಟ್ಟಿದ್ದು ಯಾವಾಗ? ಒಂದು ಆಣೆಕಟ್ಟು ನಿರ್ಮಿಸಲು 40-50 ವರ್ಷಗಳು ಬೇಕಾಗುತ್ತವೆ, ಅವುಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ನಮ್ಮ ಆಡಳಿತದ ಸಮಯದಲ್ಲಿ ಎನ್ನುತ್ತಾರೆ.

ಮುಂದುವರಿದು ಮಾತಾಡಿದ ಬೊಮ್ಮಾಯಿ ಅವರು, ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಜಾಗತೀಕರಣ, ಉದಾರೀಕರಣ, ಲೂಟೀಕರಣ ಅಂತ ದೇಶವನ್ನೇ ಬರ್ಬಾದ್ ಮಾಡಿದಿರಿ, ನಮ್ಮ ಬಡ ರೈತರು ಅಂತರರಾಷ್ಟ್ರೀಯ ಮಾರುಕಟ್ಟೆಯೊಂದಿಗೆ ಪೈಪೋಟಿ ನಡೆಸುವಂಥ ಪರಿಸ್ಥಿತಿ ನಿರ್ಮಾಣ ಮಾಡಿದಿರಿ, ಅಮೇರಿಕಾದ ಕೆಲಸಕ್ಕೆ ಬಾರದ ಗೋಧಿಯನ್ನು ನಮ್ಮ ದೇಶದ ಜನ ತಿನ್ನುವಂತೆ ಮಾಡಿದಿರಿ ಎಂದಾಗ ಸಿದ್ದರಾಮಯ್ಯನವರು, ದೇಶವನ್ನು ಹಾಳು ಮಾಡಿದ್ದು ನಾವಲ್ಲ ನೀವು, ಸಬ್ ಸಾಥ್ ಸಬ್ ಕಾ ವಿಕಾಸ್ ಅಂತ ಹೇಳುತ್ತಾ ಸರ್ವನಾಶ್ ಮಾಡುತ್ತಿರುವಿರಿ. ಖಾಸಗೀಕರಣದ ಹೆಸರಲ್ಲಿ ಎಲ್ಲ ಸಂಸ್ಥೆಗಳನ್ನು ಮಾರಿಕೊಳ್ಳುತ್ತಾ ಇದ್ದೀರಿ, ನಿಮ್ಮ ಕೆಟ್ಟ ನೀತಿಗಳಿಂದಾಗಿ 4.5 ಕೋಟಿ ಜನ ನೌಕರಿ ಕಳೆದುಕೊಂಡಿದ್ದಾರೆ ಎಂದು ಹೇಳುತ್ತಾರೆ.

ನಿಮ್ಮ ಆಡಳಿತದಿಂದಾಗಿ ಪರಿಸ್ಥಿತಿ ಕೈಜಾರಿ ಹೋಗಿತ್ತು ಅದನ್ನು ನಾವು ಹತೋಟಿಗೆ ತರುತ್ತಿದ್ದೇವೆ, ನವರತ್ನಗಳು ಮಾರಾಟವಾಗಿದ್ದು ನಿಮ್ಮ ಕಾಲದಲ್ಲಿ ಅಂತ ಬೊಮ್ಮಾಯಿ ಅವರು ಹೇಳುತ್ತಿರುವಂತೆಯೇ ಎರಡೂ ಪಕ್ಷದ ಸದಸ್ಯರು ಕೂಗಾಡುವುದು ಹೆಚ್ಚಾಗುತ್ತದೆ.

ಇದನ್ನೂ ಓದಿ: ಕೀವ್​​ ಗಡಿಯಲ್ಲಿ ಮಗಳ ಎದುರೇ ಮದುವೆಯಾದ ಉಕ್ರೇನಿಯನ್ ದಂಪತಿ; ಹಾಡಿ, ಸಂಭ್ರಮಿಸಿದ ಸೈನಿಕರ ವಿಡಿಯೋ ವೈರಲ್

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್