ಗೋವಾದಲ್ಲೇ SSLC ಪರೀಕ್ಷೆ ಬರೆಯಲು ಅವಕಾಶ, ನಿಟ್ಟುಸಿರುಬಿಟ್ಟ 54 ಕನ್ನಡ ವಿದ್ಯಾರ್ಥಿಗಳು
ಕಾರವಾರ: ಗೋವಾದಲ್ಲಿರುವ ರಾಜ್ಯದ ಕನ್ನಡ ವಿದ್ಯಾರ್ಥಿಗಳಿಗೆ ಗೋವಾದಲ್ಲೇ ಪರೀಕ್ಷೆ ಬರೆಯಲು ರಾಜ್ಯ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ 54 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ವಿದ್ಯಾರ್ಥಿಗಳು ಗೋವಾದ ಕೊರೊನಾ ಪಾಸಿಟಿವ್ ಇರುವ ಪ್ರದೇಶದಲ್ಲಿದ್ದಾರೆ. ಆದ್ರೆ ಇವರು ಕಾರವಾರ ತಾಲೂಕಿನ ಉಳಗಾದ ಶಿವಾಜಿ ಕಾಲೇಜಿನಲ್ಲಿ 54 ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿತ್ತು. ಇದಕ್ಕೆ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಈ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿತ್ತು. ಈ ಬಗ್ಗೆ ರಾಜ್ಯ ಪರೀಕ್ಷಾ ಮಂಡಳಿಗೆ ಸ್ಥಳೀಯ ಅಧಿಕಾರಿಗಳು […]
ಕಾರವಾರ: ಗೋವಾದಲ್ಲಿರುವ ರಾಜ್ಯದ ಕನ್ನಡ ವಿದ್ಯಾರ್ಥಿಗಳಿಗೆ ಗೋವಾದಲ್ಲೇ ಪರೀಕ್ಷೆ ಬರೆಯಲು ರಾಜ್ಯ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ 54 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಈ ವಿದ್ಯಾರ್ಥಿಗಳು ಗೋವಾದ ಕೊರೊನಾ ಪಾಸಿಟಿವ್ ಇರುವ ಪ್ರದೇಶದಲ್ಲಿದ್ದಾರೆ. ಆದ್ರೆ ಇವರು ಕಾರವಾರ ತಾಲೂಕಿನ ಉಳಗಾದ ಶಿವಾಜಿ ಕಾಲೇಜಿನಲ್ಲಿ 54 ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿತ್ತು. ಇದಕ್ಕೆ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಈ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿತ್ತು. ಈ ಬಗ್ಗೆ ರಾಜ್ಯ ಪರೀಕ್ಷಾ ಮಂಡಳಿಗೆ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಈ ಸಂಬಂಧ ರಾಜ್ಯ ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಿದ ರಾಜ್ಯ ಪರೀಕ್ಷಾ ಮಂಡಳಿ, ಈ ವಿದ್ಯಾರ್ಥಿಗಳಿಗೆ ಗೋವಾದ ವಾಸ್ಕೋದಲ್ಲಿರುವ ಸೆಂಟ್ ಥೆರೇಸಾ ಮತ್ತು ಯಲ್ಲಲಿಂಗೇಶ್ವರ ಶಾರದ ಮಂದಿರ ಶಾಲೆಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿದೆ. ಕಂಟೈನ್‌ಮೆಂಟ್ ಜೋನ್‌ನಲ್ಲಿರುವ ಆರು ವಿದ್ಯಾರ್ಥಿಗಳಿಗೆ ಒಂದು ಕೇಂದ್ರ ಮತ್ತು ಇನ್ನುಳಿದ 48 ವಿದ್ಯಾರ್ಥಿಗಳಿಗೆ ಮತ್ತೊಂದು ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಕರ್ನಾಟಕದ ಇಬ್ಬರು ಅಧಿಕಾರಿಗಳನ್ನ ವೀಕ್ಷಕರನ್ನಾಗಿ ಕಳಿಸಲಾಗುತ್ತಿದೆ.