ಕರ್ತವ್ಯಕ್ಕೆ ಮರಳಿದ CCB ತನಿಖಾಧಿಕಾರಿ ಶಿವಪ್ರಕಾಶ್, ಅನುಶ್ರೀಗೆ ಮತ್ತೆ ಬುಲಾವ್ ಸಾಧ್ಯತೆ
ದಕ್ಷಿಣ ಕನ್ನಡ: ಌಂಕರ್ ಅನುಶ್ರೀ ಪ್ರಕರಣಕ್ಕೆ ಸಂಬಂಧಿಸಿ ಟಿವಿ 9 ವರದಿಯಿಂದ ಎಚ್ಚೆತ್ತ ರಾಜ್ಯ ಸರ್ಕಾರ ತನಿಖಾಧಿಕಾರಿಗಳಿಗೆ ಯಾವುದೇ ಒತ್ತಡಕ್ಕೆ ಮಣಿಯದಂತೆ ಸೂಚಿಸಿದೆ. ಈ ನಿಟ್ಟಿನಲ್ಲಿ ಪ್ರಕರಣದ ತನಿಖೆ ಮತ್ತೆ ಚುರುಕುಗೊಂಡಿದೆ. ಪೊಲೀಸ್ ಇಲಾಖೆಗೆ ತನಿಖೆ ನಡೆಸಲು ಸರ್ಕಾರ ಫ್ರೀಹ್ಯಾಂಡ್ ಕೊಟ್ಟಿದೆ. ಯಾರೇ ಪ್ರಭಾವಿ ಹೇಳಿದ್ರೂ ತನಿಖೆಯ ಹಾದಿ ತಪ್ಪದಂತೆ ನೋಡಿಕೊಳ್ಳಿ ಅಂತಾ ಮಂಗಳೂರು ಪೊಲೀಸ್ ಇಲಾಖೆಗೆ ಸರ್ಕಾರ ಸೂಚಿಸಿದೆ. ಇದರಿಂದ ಪ್ರಕರಣದ ತನಿಖಾಧಿಕಾರಿ ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್ ನಾಯಕ್ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಶಿವಪ್ರಕಾಶ್ ಈ […]
ದಕ್ಷಿಣ ಕನ್ನಡ: ಌಂಕರ್ ಅನುಶ್ರೀ ಪ್ರಕರಣಕ್ಕೆ ಸಂಬಂಧಿಸಿ ಟಿವಿ 9 ವರದಿಯಿಂದ ಎಚ್ಚೆತ್ತ ರಾಜ್ಯ ಸರ್ಕಾರ ತನಿಖಾಧಿಕಾರಿಗಳಿಗೆ ಯಾವುದೇ ಒತ್ತಡಕ್ಕೆ ಮಣಿಯದಂತೆ ಸೂಚಿಸಿದೆ. ಈ ನಿಟ್ಟಿನಲ್ಲಿ ಪ್ರಕರಣದ ತನಿಖೆ ಮತ್ತೆ ಚುರುಕುಗೊಂಡಿದೆ.
ಪೊಲೀಸ್ ಇಲಾಖೆಗೆ ತನಿಖೆ ನಡೆಸಲು ಸರ್ಕಾರ ಫ್ರೀಹ್ಯಾಂಡ್ ಕೊಟ್ಟಿದೆ. ಯಾರೇ ಪ್ರಭಾವಿ ಹೇಳಿದ್ರೂ ತನಿಖೆಯ ಹಾದಿ ತಪ್ಪದಂತೆ ನೋಡಿಕೊಳ್ಳಿ ಅಂತಾ ಮಂಗಳೂರು ಪೊಲೀಸ್ ಇಲಾಖೆಗೆ ಸರ್ಕಾರ ಸೂಚಿಸಿದೆ.
ಇದರಿಂದ ಪ್ರಕರಣದ ತನಿಖಾಧಿಕಾರಿ ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್ ನಾಯಕ್ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಶಿವಪ್ರಕಾಶ್ ಈ ಪ್ರಕರಣದ ತನಿಖಾಧಿಕಾರಿ. ಈ ಹಿಂದೆ, ಕೆಲ ಪ್ರಭಾವಿಗಳು ಅವರನ್ನೇ ಎತ್ತಂಗಡಿ ಮಾಡಿಸಲು ಮುಂದಾಗಿದ್ದರು. ಆದರೆ, ಇಂದು ಮತ್ತೆ ತನಿಖೆಗೆ ಇಳಿದ ತನಿಖಾಧಿಕಾರಿ ಌಂಕರ್ ಅನುಶ್ರೀ ಫೈಲ್ ಕೈಗೆತ್ತಿಕೊಂಡು ತನಿಖೆ ಆರಂಭಿಸಿದ್ದಾರೆ.
ಌಂಕರ್ ಅನುಶ್ರೀಗೆ ಮತ್ತೆ ನೋಟಿಸ್ ಕೊಡೋ ಸಾಧ್ಯತೆ ಸಹ ಇದೆ ಎಂದು ತಿಳಿದುಬಂದಿದೆ. ಹಾಗಾಗಿ, ಮಾಜಿ ಸಿಎಂ ಒಬ್ಬರಿಗೆ ಇದರಿಂದ ಭಾರಿ ಆತಂಕ ಶುರುವಾಗಿದೆಯಂತೆ.