ದೆಹಲಿ-ಮುಂಬೈನಲ್ಲೂ DK ಸುರೇಶ್​ ನಿವಾಸಗಳ ಮೇಲೆ CBI ರೇಡ್​, ಅಭಿಮಾನಿಗಳು ಫುಲ್​ ಶಾಕ್​

ದೆಹಲಿ-ಮುಂಬೈನಲ್ಲೂ DK ಸುರೇಶ್​ ನಿವಾಸಗಳ ಮೇಲೆ CBI ರೇಡ್​, ಅಭಿಮಾನಿಗಳು ಫುಲ್​ ಶಾಕ್​

ದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ನಿವಾಸ ಸೇರಿ ಹಲವೆಡೆ ದಾಳಿ ನಡೆಸಿರುವ CBI ಅಧಿಕಾರಿಗಳು ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ದೆಹಲಿ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ. ದೆಹಲಿಯ ಕಾವೇರಿ ಅಪಾರ್ಟ್‌ಮೆಂಟ್‌ನಲ್ಲಿರುವ ಡಿ.ಕೆ.ಸುರೇಶ್ ಫ್ಲ್ಯಾಟ್‌ನಲ್ಲಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೆ, ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್​ರ ಕೆಲ ಆಪ್ತರು ಸೇರಿದಂತೆ ಮುಂಬೈ ಸೇರಿದಂತೆ 14ಕ್ಕೂ ಹೆಚ್ಚು ಕಡೆ CBI ದಾಳಿ ನಡೆಸಿದೆ. ಇತ್ತ ಎಂದಿನಂತೆ ಇಂದೂ ಸಹ ಕೆಲ ಕಾರ್ಯಕರ್ತರು ಮತ್ತು ಅಭಿಮಾನಿಗಳು ಡಿ.ಕೆ ಶಿವಕುಮಾರ್ […]

KUSHAL V

| Edited By: sadhu srinath

Oct 05, 2020 | 10:58 AM

ದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ನಿವಾಸ ಸೇರಿ ಹಲವೆಡೆ ದಾಳಿ ನಡೆಸಿರುವ CBI ಅಧಿಕಾರಿಗಳು ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ದೆಹಲಿ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ. ದೆಹಲಿಯ ಕಾವೇರಿ ಅಪಾರ್ಟ್‌ಮೆಂಟ್‌ನಲ್ಲಿರುವ ಡಿ.ಕೆ.ಸುರೇಶ್ ಫ್ಲ್ಯಾಟ್‌ನಲ್ಲಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೆ, ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್​ರ ಕೆಲ ಆಪ್ತರು ಸೇರಿದಂತೆ ಮುಂಬೈ ಸೇರಿದಂತೆ 14ಕ್ಕೂ ಹೆಚ್ಚು ಕಡೆ CBI ದಾಳಿ ನಡೆಸಿದೆ.

ಇತ್ತ ಎಂದಿನಂತೆ ಇಂದೂ ಸಹ ಕೆಲ ಕಾರ್ಯಕರ್ತರು ಮತ್ತು ಅಭಿಮಾನಿಗಳು ಡಿ.ಕೆ ಶಿವಕುಮಾರ್ ಮನೆ ಬಳಿ ಬಂದಿದ್ದರು. ಈ ವೇಳೆ ಅಧ್ಯಕ್ಷರ ಮನೆ ಮೇಲೆ ದಾಳಿ ನಡೆದಿರುವ ವಿಚಾರ ಕೇಳಿ ಶಾಕ್ ಆಗಿದೆ. ಕಚೇರಿ ಬಳಿ ಬಂದ ಕಾರ್ಯಕರ್ತರಿಗೆ ಸಾಹೇಬರು ಇಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಹಾಗಾಗಿ, ಡಿ.ಕೆ ಶಿವಕುಮಾರ್​ ಬೆಂಬಲಿಗರು ಅವರ ಮನೆ ಕಡೆ ನೊಡುತ್ತಾ ಹಾಗೇ ನಿಂತಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada