ಪದವಿ ಪ್ರವೇಶಾತಿಗೆ ನೂಕುನುಗ್ಗಲು, ಒಬ್ಬರ ಮೇಲೊಬ್ಬರು ಬಿದ್ದು ವಿದ್ಯಾರ್ಥಿಗಳಿಗೆ ಗಾಯ

ಹಾಸನ: ಪದವಿ‌ ಕಾಲೇಜು ಪ್ರವೇಶಾತಿಗೆ ವಿದ್ಯಾರ್ಥಿಗಳಲ್ಲಿ ನೂಕು ನುಗ್ಗಲು ಉಂಟಾಗಿ ಒಬ್ಬರ ಮೇಲೊಬ್ಬರು ಬಿದ್ದು ಗಾಯಗೊಂಡ ಘಟನೆ ಹಾಸನದಲ್ಲಿ ಸಂಭವಿಸಿದೆ. ಹಾಸನದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಈ ಘಟನೆ ಸಂಭವಿಸಿದ್ದು, ನೂರಾರು ವಿದ್ಯಾರ್ಥಿಗಳ ಜಮಾವಣೆಯಿಂದ ರೈಲಿಂಗ್ಸ್ ಮುರಿದುಬಿದ್ದಿದ್ದು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೊರೊನ ಆತಂಕವಿದ್ದರೂ ಅಂತರ ಮರೆತು ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ವಿದ್ಯಾರ್ಥಿಗಳಲ್ಲಿ ನೂಕು ನುಗ್ಗಲುಂಟಾಗಿದೆ. ಈ ಸಂದರ್ಭದಲ್ಲಿ ಕಾಲೇಜಿನ ಗೇಟ್ ಸಮೀಪ ತಡಗೆಂದು ಹಾಕಿದ್ದ ಕಬ್ಬಿಣದ ಸರಳು ಮುರಿದುಬಿದ್ದಿದೆ. ಪರಿಣಾಮ […]

ಪದವಿ ಪ್ರವೇಶಾತಿಗೆ ನೂಕುನುಗ್ಗಲು, ಒಬ್ಬರ ಮೇಲೊಬ್ಬರು ಬಿದ್ದು ವಿದ್ಯಾರ್ಥಿಗಳಿಗೆ ಗಾಯ
Guru

Updated on: Aug 27, 2020 | 7:18 PM

ಹಾಸನ: ಪದವಿ‌ ಕಾಲೇಜು ಪ್ರವೇಶಾತಿಗೆ ವಿದ್ಯಾರ್ಥಿಗಳಲ್ಲಿ ನೂಕು ನುಗ್ಗಲು ಉಂಟಾಗಿ ಒಬ್ಬರ ಮೇಲೊಬ್ಬರು ಬಿದ್ದು ಗಾಯಗೊಂಡ ಘಟನೆ ಹಾಸನದಲ್ಲಿ ಸಂಭವಿಸಿದೆ.

ಹಾಸನದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಈ ಘಟನೆ ಸಂಭವಿಸಿದ್ದು, ನೂರಾರು ವಿದ್ಯಾರ್ಥಿಗಳ ಜಮಾವಣೆಯಿಂದ ರೈಲಿಂಗ್ಸ್ ಮುರಿದುಬಿದ್ದಿದ್ದು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೊರೊನ ಆತಂಕವಿದ್ದರೂ ಅಂತರ ಮರೆತು ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತಿದ್ದರು.

ಈ ವೇಳೆ ವಿದ್ಯಾರ್ಥಿಗಳಲ್ಲಿ ನೂಕು ನುಗ್ಗಲುಂಟಾಗಿದೆ. ಈ ಸಂದರ್ಭದಲ್ಲಿ ಕಾಲೇಜಿನ ಗೇಟ್ ಸಮೀಪ ತಡಗೆಂದು ಹಾಕಿದ್ದ ಕಬ್ಬಿಣದ ಸರಳು ಮುರಿದುಬಿದ್ದಿದೆ. ಪರಿಣಾಮ ಒಬ್ಬರ ಮೇಲೆ‌ ಒಬ್ಬರಂತೆ ವಿದ್ಯಾರ್ಥಿಗಳು ಕೆಳಗೆ ಉರುಳಿಬಿದ್ದಿದ್ದಾರೆ. ಆಗ ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೆ ಎಲ್ಲರನ್ನು ಮೇಲೆತ್ತಿ ರಕ್ಷಿಸಿದ್ದಾರೆ.

Guru
Loading...
Unable to load recommendations.
Follow Us