
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಾಗಿಣಿ ಚುನಾವಣೆ ಸಮಯದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಪ್ರಚಾರ ಮಾಡಿದ್ದರು. ರಾಗಿಣಿ ಜತೆ ಪಕ್ಷದ ನಾಯಕರ ಫೋಟೋ, ಪ್ರಚಾರ ವಿಚಾರ ಕುರಿತು ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ಸರ್ಕಾರ ಅಂತರ ಕಾಯ್ದುಕೊಂಡಿದೆ. ಪ್ರಕರಣದ ಬಗ್ಗೆ ಗಂಭೀರ ತನಿಖೆ ಮಾಡ್ತಿದೆ. ಹೀಗಾಗಿ ಹೊಸ ಹೊಸ ಆಯಾಮ ತೆರೆದುಕೊಳ್ತಿದೆ. ಒಂದು ವೇಳೆ ನಾವು ರಾಜೀ ಮಾಡಿಕೊಂಡಿದ್ರೆ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ. ನಮ್ಮ ಸರ್ಕಾರದ ನಿಲುವು ಸ್ಪಷ್ಟ. ಡ್ರಗ್ಸ್ ಮಾಫಿಯಾ ಬೇರು ಸಮೇತ ಕಿತ್ತು ಹಾಕಬೇಕು, ಎಷ್ಟೇ ಬಲಾಢ್ಯರು ಇದ್ದರೂ ನಾವು ಯಾರನ್ನೂ ಬಿಡುವುದಿಲ್ಲ ಎಂದಿದ್ದಾರೆ.
Published On - 4:07 pm, Wed, 9 September 20