AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನರ ಬಳಿ ಬೇಷರತ್ ಕ್ಷಮೆ ಯಾಚಿಸಿದ ತಾಂಡವ್​ ಸಿನಿಮಾ ತಂಡ

ಒಟಿಟಿಯಲ್ಲಿ ಬಿಡುಗಡೆ ಆಗಿರುವ ತಾಂಡವ್ ವೆಬ್ ಸಿರೀಸ್​ನಲ್ಲಿ ಸೆಕ್ಸ್, ಹಿಂಸೆ, ಮಾದಕ ವಸ್ತು, ದ್ವೇಷ ಮತ್ತು ಕೀಳುತನವನ್ನು ಬಿಂಬಿಸಲಾಗಿದೆ. ಹಿಂದೂ ಧರ್ಮ ಮತ್ತು ಹಿಂದೂ ದೇವತೆಗಳ ಕುರಿತು ಬೇಕೆಂದೇ ಕೀಳಾಗಿ ಚಿತ್ರಿಸಲಾಗಿದೆ ಎನ್ನುವ ಆರೋಪ ಸಿನಿಮಾ ವಿರುದ್ಧ ಕೇಳಿ ಬಂದಿತ್ತು.

ಜನರ ಬಳಿ ಬೇಷರತ್ ಕ್ಷಮೆ ಯಾಚಿಸಿದ ತಾಂಡವ್​ ಸಿನಿಮಾ ತಂಡ
ತಾಂಡವ್ ವೆಬ್ ಸಿರೀಸ್​ನ ಒಂದು ದೃಶ್ಯ
ರಾಜೇಶ್ ದುಗ್ಗುಮನೆ
| Edited By: |

Updated on: Jan 18, 2021 | 8:32 PM

Share

ಇತ್ತೀಚೆಗಷ್ಟೇ ಅಮೇಜಾನ್​ ಪ್ರೈಮ್​ ವಿಡಿಯೊದಲ್ಲಿ ಬಿಡುಗಡೆಯಾಗಿರುವ, ನಟ ಸೈಫ್​ ಅಲಿಖಾನ್​ ಅಭಿನಯದ ‘ತಾಂಡವ್’​ ವೆಬ್​ ಸೀರಿಸ್​ ವಿರುದ್ಧ ಹಿಂದೂ ದೇವತೆಗಳಿಗೆ ಅಪಮಾನ ಮಾಡಿದ ಆರೋಪ ಕೇಳಿ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿ​ ಸಿನಿಮಾ ತಂಡ ಬೇಷರತ್ ಕ್ಷಮೆ ಯಾಚಿಸಿದೆ.

ಒಟಿಟಿಯಲ್ಲಿ ಬಿಡುಗಡೆ ಆಗಿರುವ ತಾಂಡವ್ ವೆಬ್ ಸಿರೀಸ್​ನಲ್ಲಿ ಸೆಕ್ಸ್, ಹಿಂಸೆ, ಮಾದಕ ವಸ್ತು, ದ್ವೇಷ ಮತ್ತು ಕೀಳುತನವನ್ನು ಬಿಂಬಿಸಲಾಗಿದೆ. ಹಿಂದೂ ಧರ್ಮ ಮತ್ತು ಹಿಂದೂ ದೇವತೆಗಳ ಕುರಿತು ಬೇಕೆಂದೇ ಕೀಳಾಗಿ ಚಿತ್ರಿಸಲಾಗಿದೆ ಎನ್ನುವ ಆರೋಪ ಸಿನಿಮಾ ವಿರುದ್ಧ ಕೇಳಿ ಬಂದಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಪ್ರಕರಣ ಕೂಡ ದಾಖಲಾಗಿತ್ತು.

ಈ ಬಗ್ಗೆ ಕ್ಷಮೆಯಾಚಿಸಿ ಹೇಳಿಕೆ ಬಿಡುಗಡೆ ಮಾಡಿರುವ ತಾಂಡವ್ ಚಿತ್ರತಂಡ, ತಾಂಡವ್​ ಸಿನಿಮಾ ಕೇವಲ ಕಾಲ್ಪನಿಕ ಕತೆಯನ್ನು ಆಧರಿಸಿದೆ. ಇದು ಯಾವುದೇ ವ್ಯಕ್ತಿ ಹಾಗೂ ಸಮಾಜಕ್ಕೆ ಸಂಬಂಧಿಸಿದ್ದಲ್ಲ. ಒಂದೊಮ್ಮೆ ಹೀಗೆ ಸಂಬಂಧಿಸಿದ್ದರೆ ಅದು ಕೇವಲ ಕಾಲ್ಪನಿಕ. ವ್ಯಕ್ತಿಗಳ ಭಾವನೆಗೆ ದಕ್ಕೆ ತರುವುದು ನಮ್ಮ ಉದ್ದೇಶವಲ್ಲ ಎಂದು ತಾಂಡವ್ ತಂಡ ಹೇಳಿದೆ.

‘ತಾಂಡವ್’ ಚಿತ್ರದ ಬಗ್ಗೆ ಜನರು ವ್ಯಕ್ತಪಡಿಸಿದ ಕಳವಳಗಳದ ಬಗ್ಗೆ ನಮಗೆ ಅರಿವಿದೆ. ಯಾರೊಬ್ಬರ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ನೋಯಿಸುವುದು ನಮ್ಮ ಉದ್ದೇಶವಲ್ಲ. ಹಾಗೆ ನೋಯಿಸಿದ್ದರೆ ನಾವು ಬೇಷರತ್ತಾಗಿ ಕ್ಷಮೆಯಾಚಿಸುತ್ತೇವೆ ಎಂದು ಚಿತ್ರತಂಡ ಹೇಳಿದೆ.

ಸೈಫ್​ ಅಲಿಖಾನ್​ ಅಭಿನಯದ ತಾಂಡವ್​ ವಿರುದ್ಧ ಸಿಡಿದೆದ್ದ ಬಿಜೆಪಿ ನಾಯಕರು; ಕ್ಷಮೆಗೆ ಒತ್ತಾಯ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More