ರಕ್ಷಾ ಬಂಧನದ ದಿನ ವೃಕ್ಷಾ ಬಂಧನ.. ಸಸಿಗಳೊಂದಿಗೆ ಸೆಲ್ಫಿ!

ಧಾರವಾಡ: ಇಂದು ಎಲ್ಲೆಡೆ ರಕ್ಷಾ ಬಂಧನ ಸಂಭ್ರಮ. ಹೆಂಗಸರು ತಮ್ಮ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಹಾಗೂ ಅವರಿಗೆ ಸಹೋದರರು ಗಿಫ್ಟ್ ಕೊಡುವ ಮೂಲಕ ಈ ಹಬ್ಬವನ್ನು ಸಂಭ್ರಮಿಸುತ್ತಾರೆ. ಆದರೆ ಇದೇ ದಿನದಂದು ಧಾರವಾಡದ ಅರಣ್ಯ ಇಲಾಖೆ ಹೊಸ ಕಾರ್ಯಕ್ರಮವನ್ನು ಆಯೋಜಿಸಿದೆ. ಸಸ್ಯ ಸಂರಕ್ಷಣೆಯ ಮಹತ್ವವನ್ನು ಮನಗಾಣಿಸಲು ಧಾರವಾಡ ಅರಣ್ಯ ವಿಭಾಗದ ವತಿಯಿಂದ ವೃಕ್ಷಾ ಬಂಧನ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಲಾಗಿದೆ. ಪ್ರತಿ ವರ್ಷ ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಸಾವಿರಾರು ಸಸಿಗಳನ್ನು ನೆಡಲಾಗುತ್ತದೆ. ನಂತರದ ದಿನಗಳಲ್ಲಿ […]

ರಕ್ಷಾ ಬಂಧನದ ದಿನ ವೃಕ್ಷಾ ಬಂಧನ.. ಸಸಿಗಳೊಂದಿಗೆ ಸೆಲ್ಫಿ!
Follow us
ಸಾಧು ಶ್ರೀನಾಥ್​
|

Updated on: Aug 03, 2020 | 6:06 PM

ಧಾರವಾಡ: ಇಂದು ಎಲ್ಲೆಡೆ ರಕ್ಷಾ ಬಂಧನ ಸಂಭ್ರಮ. ಹೆಂಗಸರು ತಮ್ಮ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಹಾಗೂ ಅವರಿಗೆ ಸಹೋದರರು ಗಿಫ್ಟ್ ಕೊಡುವ ಮೂಲಕ ಈ ಹಬ್ಬವನ್ನು ಸಂಭ್ರಮಿಸುತ್ತಾರೆ.

ಆದರೆ ಇದೇ ದಿನದಂದು ಧಾರವಾಡದ ಅರಣ್ಯ ಇಲಾಖೆ ಹೊಸ ಕಾರ್ಯಕ್ರಮವನ್ನು ಆಯೋಜಿಸಿದೆ. ಸಸ್ಯ ಸಂರಕ್ಷಣೆಯ ಮಹತ್ವವನ್ನು ಮನಗಾಣಿಸಲು ಧಾರವಾಡ ಅರಣ್ಯ ವಿಭಾಗದ ವತಿಯಿಂದ ವೃಕ್ಷಾ ಬಂಧನ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಲಾಗಿದೆ. ಪ್ರತಿ ವರ್ಷ ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಸಾವಿರಾರು ಸಸಿಗಳನ್ನು ನೆಡಲಾಗುತ್ತದೆ. ನಂತರದ ದಿನಗಳಲ್ಲಿ ಅವುಗಳ ರಕ್ಷಣೆಯ ವಿಚಾರ ಬಂದಾಗ ಯಾರೂ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ.

ಸಸಿಗಳೊಂದಿಗೆ ಸೆಲ್ಫಿ! ಆದರೆ ಇದೀಗ ಅದರ ಮುಂದಿನ ಭಾಗವಾಗಿ ಈ ವೃಕ್ಷಾ ಬಂಧನ ಅನ್ನೋ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಪರಿಸರ ದಿನದಂದು ನೆಟ್ಟ ಗಿಡಗಳ ಪೋಷಣೆಗೆ ಜನರ ಪಾಲ್ಗೊಳ್ಳುವಿಕೆ ಉತ್ತೇಜಿಸಲು ಇಂಥದ್ದೊಂದು ಕಾರ್ಯಕ್ರಮವನ್ನು ಆರಂಭಿಸಲಾಗಿದೆ.

ಇಲಾಖೆಯ ಹಿರಿಯ ಅಧಿಕಾರಿಗಳು ಟ್ವಿಟರ್, ಫೇಸ್ ಬುಕ್, ಇನ್ಸ್ಟಾ ಗ್ರಾಂ , ರೇಡಿಯೋ ಮತ್ತಿತರ ಮಾಧ್ಯಮಗಳ ಮೂಲಕ ರಕ್ಷಾ ಬಂಧನದ ದಿನದಂದು ವೃಕ್ಷಾ ಬಂಧನ ಆಚರಿಸಲು ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿದ ಅನೇಕರು ಇಂದು ಜಿಲ್ಲೆಯ ಹಲವೆಡೆ ವೃಕ್ಷಾ ಬಂಧನ ಆಚರಿಸಿ ಈ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಳೆದ ಜೂನ್ 5 ರಂದು ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಸಸಿಗಳೊಂದಿಗೆ ಸೆಲ್ಫಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಸಿ ನೆಡುವದಷ್ಟೇ ಅಲ್ಲ ಅದರ ರಕ್ಷಣೆ, ಪೋಷಣೆ ಅದಕ್ಕಿಂತಲೂ ಮುಖ್ಯ ಎನ್ನುವ ಜಾಗೃತಿ ಮೂಡಿಸಲು ಈ ವೃಕ್ಷಾ ಬಂಧನ ಸಹಕಾರಿಯಾಗಿದೆ.

ಗಿಡಗಳಿಗೆ ರಾಖಿ ಕಟ್ಟಿ ಈ ಕಾರ್ಯಕ್ರಮಕ್ಕೆ ಇಂದು ಜಿಲ್ಲೆಯ ಅನೇಕ ಕಡೆಗಳಲ್ಲಿ ಜನರು ಸ್ಪಂದನೆ ನೀಡಿದ್ದಾರೆ. ಪರಿಸರದೊಂದಿಗೆ ಭಾವನಾತ್ಮಕ ಸಂಬಂಧ ಬೆಸೆಯಲು ವೃಕ್ಷಾ ಬಂಧನ ಒಂದು ವಿನೂತನ ಮಾರ್ಗವೆನಿಸಿರೋದಂತೂ ಸತ್ಯ. -ನರಸಿಂಹಮೂರ್ತಿ ಪ್ಯಾಟಿ