ಔಷಧಿ ಅಂಗಡಿ ಮೇಲ್ಛಾವಣಿ ಕೊರೆದು.. 1 ಚೀಲ ಮಾಸ್ಕ್, 50 ಮೂವ್ ಸ್ಪ್ರೇ ಕದ್ದೊಯ್ದರು!

ಬೆಳಗಾವಿ: ಔಷಧಿ ಅಂಗಡಿಯ ಮೇಲ್ಛಾವಣಿ ಕೊರೆದ ಕಳ್ಳರು ಮಾಸ್ಕ್ ಸೇರಿದಂತೆ ಇತರೆ ಔಷಧಿಗಳನ್ನು ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮಹೊಂಗಲದಲ್ಲಿ ತಡರಾತ್ರಿ ನಡೆದಿದೆ. ಕಳ್ಳರು 1 ಚೀಲ ಮಾಸ್ಕ್ ಕಳವು ಮಾಡಿದ್ದಾರೆ. ಚಂದ್ರಶೇಖರ ಹುಚ್ಚನ್ನವರ್‌ಗೆ ಸೇರಿದ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಒಂದು ಚೀಲ ಮಾಸ್ಕ್ ಜೊತೆಗೆ 50ಕ್ಕೂ ಹೆಚ್ಚು ಮೂವ್ ಸ್ಪ್ರೇ ಮತ್ತು 6 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ.

ಔಷಧಿ ಅಂಗಡಿ ಮೇಲ್ಛಾವಣಿ ಕೊರೆದು.. 1 ಚೀಲ ಮಾಸ್ಕ್, 50  ಮೂವ್ ಸ್ಪ್ರೇ ಕದ್ದೊಯ್ದರು!

Updated on: Oct 30, 2020 | 2:30 PM

ಬೆಳಗಾವಿ: ಔಷಧಿ ಅಂಗಡಿಯ ಮೇಲ್ಛಾವಣಿ ಕೊರೆದ ಕಳ್ಳರು ಮಾಸ್ಕ್ ಸೇರಿದಂತೆ ಇತರೆ ಔಷಧಿಗಳನ್ನು ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮಹೊಂಗಲದಲ್ಲಿ ತಡರಾತ್ರಿ ನಡೆದಿದೆ. ಕಳ್ಳರು 1 ಚೀಲ ಮಾಸ್ಕ್ ಕಳವು ಮಾಡಿದ್ದಾರೆ.

ಚಂದ್ರಶೇಖರ ಹುಚ್ಚನ್ನವರ್‌ಗೆ ಸೇರಿದ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಒಂದು ಚೀಲ ಮಾಸ್ಕ್ ಜೊತೆಗೆ 50ಕ್ಕೂ ಹೆಚ್ಚು ಮೂವ್ ಸ್ಪ್ರೇ ಮತ್ತು 6 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ.