ಬನ್ನೇರುಘಟ್ಟದಲ್ಲಿ ಸಫಾರಿ ಹೊರಟಾಗ.. ವ್ಯಾಘ್ರನ ಕೋಪಕ್ಕೆ ತುತ್ತಾಯ್ತು ಸಫಾರಿ ವಾಹನ
ರೊಚ್ಚಿಗೆದ್ದ ವ್ಯಾಘ್ರ ವಾಹನವನ್ನು ಎಳೆದಾಡಿದ ಪರಿಣಾಮ ಟೊಯೋಟಾದಲ್ಲಿದ್ದವರು ಕಂಗಾಲಾಗಿದ್ದರು.
ಆನೇಕಲ್: ಬನ್ನೇರುಘಟ್ಟಕ್ಕೆ ಸಫಾರಿಗೆಂದು ಹೋದಾಗ ಬೆಂಗಾಲ್ ಹುಲಿ ಟೊಯೋಟಾ ವಾಹನವನ್ನು ಎಳೆದಾಡಿದ ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದು ಇದೀಗ ವಿಡಿಯೋ ಫುಲ್ ವೈರಲ್ ಆಗಿದೆ.
ಬ್ಯಾಟರಿ ಸಮಸ್ಯೆಯಿಂದ ಟೊಯೋಟಾ ಕಾರು ಒಂದು ಕಡೆ ನಿಂತಿತ್ತು. ಇದನ್ನು ನೋಡಿ ರೊಚ್ಚಿಗೆದ್ದ ವ್ಯಾಘ್ರ ವಾಹನವನ್ನು ಎಳೆದಾಡಿದ ಪರಿಣಾಮ ಟೊಯೋಟಾದಲ್ಲಿದ್ದವರು ಕಂಗಾಲಾಗಿದ್ದರು. ಟೊಯೋಟಾ ಹಿಂದೆ ಬರುತ್ತಿದ್ದ ವಾಹನದಲ್ಲಿದ್ದವರು ಹುಲಿ ಎಳೆದಾಡಿದ ದೃಶ್ಯವನ್ನು ಸೆರೆಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ.