ಮತ್ತೆ ಹಳೆ ಚಾಳಿ ಮುಂದುವರೆಸಿದ ಶ್ರೀಶಾಂತ್.. ಇದಕ್ಕೆ 19ರ ಪೋರನ ಉತ್ತರ ಹೇಗಿತ್ತು? ವಿಡಿಯೋ ನೋಡಿ..

ಮುಂಬೈ ಪರ ಬ್ಯಾಟಿಂಗ್ ಮಾಡುತ್ತಿದ್ದ 19 ವರ್ಷದ ಯಶಸ್ವಿ ಜೈಸ್ವಾಲ್, ಶ್ರೀ ಆಪ್​ಸ್ಟಂಪ್​ನತ್ತ ಎಸೆದ ಬಾಲ್​ನಲ್ಲಿ ಬಿಗ್ ಶಾಟ್ ಹೊಡೆಯೋಕೆ ಮುಂದಾಗಿದ್ರು. ಆದ್ರೆ ಸಾಧ್ಯವಾಗಲಿಲ್ಲ. ಅಷ್ಟೇ ಶ್ರೀಶಾಂತ್ ಜೈಸ್ವಾಲ್ ಬಳಿ ಹೋಗಿ ಸ್ಲೆಡ್ಜಿಂಗ್ ಮಾಡಿಯೇ ಬಿಟ್ರು.

ಮತ್ತೆ ಹಳೆ ಚಾಳಿ ಮುಂದುವರೆಸಿದ ಶ್ರೀಶಾಂತ್.. ಇದಕ್ಕೆ 19ರ ಪೋರನ ಉತ್ತರ ಹೇಗಿತ್ತು? ವಿಡಿಯೋ ನೋಡಿ..
ಎಸ್.ಶ್ರೀಶಾಂತ್ ಹಾಗೂ ಯಶಸ್ವಿ ಜೈಸ್ವಾಲ್
pruthvi Shankar

|

Jan 15, 2021 | 12:29 PM

ಕೇರಳ ಎಕ್ಸ್​ಪ್ರೆಸ್, ವಿವಾದಿತ ಕ್ರಿಕೆಟಿಗ ಶ್ರೀಶಾಂತ್ 7 ವರ್ಷಗಳ ಬಳಿಕ ಕಾಂಪಿಟೇಟಿವ್ ಕ್ರಿಕೆಟ್​ಗೆ ಎಂಟ್ರಿ ಕೊಟ್ಟಿರೋದು ನಿಮಗೆ ಗೊತ್ತೇ ಇದೆ. ಮೊದಲ ಪಂದ್ಯದಲ್ಲಿ ವಿಕೆಟ್ ಪಡೆದು ಸಂಭ್ರಮಿಸಿದ್ದ ಶ್ರೀ, ಎರಡನೇ ಪಂದ್ಯದಲ್ಲಿ 19 ಹರೆಯದ ಬ್ಯಾಟ್ಸ್​ಮನ್​ನಿಂದ ಮುಜುಗರಕ್ಕೀಡಾಗಿದ್ದೇಗೆ ನೋಡೋಣ ಬನ್ನಿ.

ಕೇರಳ ಎಕ್ಸ್​ಪ್ರೆಸ್ ಎಸ್. ಶ್ರೀಶಾಂತ್ ಸುದೀರ್ಘ 7 ವರ್ಷಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಿದ್ದಾರೆ. ಸದ್ಯ ದೇಸಿ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇರಳ ತಂಡವನ್ನ ಪ್ರತಿನಿಧಿಸುತ್ತಿರೋ ಶ್ರೀಶಾಂತ್, ಪುದುಚೇರಿ ಮತ್ತು ಮುಂಬೈ ವಿರುದ್ಧದ ಪಂದ್ಯವನ್ನಾಡಿದ್ದಾರೆ.

29 ರನ್ ನೀಡಿ 1 ವಿಕೆಟ್ ಪಡೆದರು.. ಪುದುಚೇರಿ ವಿರುದ್ಧದ ಮೊದಲ ಪಂದ್ಯದಲ್ಲಿ  29 ರನ್ ನೀಡಿ 1 ವಿಕೆಟ್ ಪಡೆದಿದ್ದ ಶ್ರೀಶಾಂತ್​, ಪಂದ್ಯದ 2ನೇ ಓವರ್​ನಲ್ಲೇ ಪಹೀದ್ ಅಹ್ಮದ್​ರವರ ವಿಕೆಟ್​ ಪಡೆಯುವುದರ ಜೊತೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಶೈಲಿಯಲ್ಲೇ ಸಂಭ್ರಮಾಚರಣೆ ಮಾಡಿದ್ರು.

ಆದ್ರೀಗ ಮುಂಬೈ ವಿರುದ್ಧದ ಪಂದ್ಯದಲ್ಲಿ ಶ್ರೀಶಾಂತ್, ಸ್ಲೆಡ್ಜಿಂಗ್ ಮಾಡಲು ಹೋಗಿ, ಮುಜುಗರಕ್ಕೀಡಾಗಿದ್ದಾರೆ. ಮುಂಬೈ ಪರ ಬ್ಯಾಟಿಂಗ್ ಮಾಡುತ್ತಿದ್ದ 19 ವರ್ಷದ ಯಶಸ್ವಿ ಜೈಸ್ವಾಲ್, ಶ್ರೀ ಆಪ್​ಸ್ಟಂಪ್​ನತ್ತ ಎಸೆದ ಬಾಲ್​ನಲ್ಲಿ ಬಿಗ್ ಶಾಟ್ ಹೊಡೆಯೋಕೆ ಮುಂದಾಗಿದ್ರು. ಆದ್ರೆ ಸಾಧ್ಯವಾಗಲಿಲ್ಲ. ಅಷ್ಟೇ ಶ್ರೀಶಾಂತ್ ಜೈಸ್ವಾಲ್ ಬಳಿ ಹೋಗಿ ಸ್ಲೆಡ್ಜಿಂಗ್ ಮಾಡಿಯೇ ಬಿಟ್ರು.

ಶ್ರೀಶಾಂತ್ ಮಾಡಿದ ಸ್ಲೆಡ್ಜಿಂಗ್​ಗೆ ಜೈಸ್ವಾಲ್ ತಕ್ಕ ಪ್ರತ್ಯುತ್ತರ.. ಶ್ರೀಶಾಂತ್ ಮಾಡಿದ ಸ್ಲೆಡ್ಜಿಂಗ್​ಗೆ ಜೈಸ್ವಾಲ್ ತಕ್ಷಣಕ್ಕೆ ಯಾವುದೇ ಪ್ರತ್ಯುತ್ತರ ನೀಡದೇ ಸೈಲಂಟ್ ಆದ್ರು. ಆದ್ರೆ ಶ್ರೀ ಎಸೆದ ನಂತರದ ಬಾಲ್ ಅನ್ನೇ ಜೈಸ್ವಾಲ್ ಸಿಕ್ಸರ್​ಗಟ್ಟಿದ್ರು. ಇಷ್ಟಕ್ಕೆ ಸುಮ್ಮನಾದ ಜೈಸ್ವಾಲ್ ಶ್ರೀಶಾಂತ್​ಗೆ ಮತ್ತೊಂದು ಸಿಕ್ಸರ್ ಸಿಡಿಸಿದರು. ಇದು ಸಾಲದೆಂಬಂತೆ ಮುಂದಿನ ಬಾಲನ್ನು ಬೌಂಡರಿಗಟ್ಟಿ ಶ್ರೀಶಾಂತ್​ಗೆ ತಿರುಗೇಟು ನೀಡಿದ್ರು.

ಒಟ್ನಲ್ಲಿ ಸುದೀರ್ಘ ವರ್ಷಗಳ ಬಳಿಕ ದೇಸಿ ಕ್ರಿಕೆಟ್​ಗೆ ಶ್ರೀಶಾಂತ್ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ ಎಂಟ್ರಿ ಕೊಟ್ಟ 2ನೇ ಪಂದ್ಯದಲ್ಲೇ ಸ್ಲೆಡ್ಜಿಂಗ್ ಮಾಡಿ, 19 ಹರೆಯದ ಹುಡುಗನಿಂದ ಮುಜುಗರಕ್ಕೀಡಾಗಿದ್ದಾರೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada