ಪ್ರವಾಸಕ್ಕೆಂದು ಬುಕ್ ಮಾಡಿದ್ದ ಕಾರನ್ನೇ ಕದ್ದೊಯ್ದ ಖದೀಮ!

ಬೆಂಗಳೂರು: ಪ್ರವಾಸಕ್ಕೆ ಹೋಗಲು ಬುಕ್ ಮಾಡಿದ್ದ ಕಾರು ಕಳ್ಳತನವಾಗಿರುವ ಘಟನೆ ನಾಯಂಡಹಳ್ಳಿಯಲ್ಲಿ ನಡೆದಿದೆ. ಅರುಣ್ ಕುಮಾರ್​ ಎಂಬುವರಿಗೆ ಸೇರಿದ 22 ಲಕ್ಷ ಮೌಲ್ಯದ ಇನೋವಾ ಕ್ರಿಸ್ಟಾ ಕಾರು ಕಳ್ಳತನವಾಗಿದೆ. ಜಸ್ಟ್ ಡಯಲ್ ಮೂಲಕ ಆರೋಪಿ ಮೈಸೂರಿಗೆ ಪ್ರವಾಸಕ್ಕೆ ಹೋಗಲು ಕಾರ್ ಬುಕ್ ಮಾಡಿದ್ದಾನೆ. ಸೌಮ್ಯ ಟೂರ್ಸ್ ಅಂಡ್ ಟ್ರಾವೆಲ್ಸ್ ಅನ್ನು ಆರೋಪಿ ಸಂಪರ್ಕಿಸಿದ್ದಾನೆ. ಟ್ರಾವೆಲ್ಸ್​ನವರು ಅರುಣ್ ಕುಮಾರ್​ಗೆ ಮೈಸೂರಿಗೆ ಹೋಗುವಂತೆ ಹೇಳಿದ್ರು. ಕಾನಿಷ್ಕ ಹೋಟೆಲ್​ಗೆ ಪ್ರಯಾಣಿಕರನ್ನು ಕರೆ ತರಲು ಅರುಣ್ ಹೋಗಿದ್ದ. ಈ ವೇಳೆ ಕಾರ್ ಹತ್ತಿದ್ದ […]

ಪ್ರವಾಸಕ್ಕೆಂದು ಬುಕ್ ಮಾಡಿದ್ದ ಕಾರನ್ನೇ ಕದ್ದೊಯ್ದ ಖದೀಮ!
ಸಾಧು ಶ್ರೀನಾಥ್​

Updated on: Jan 04, 2020 | 9:47 AM

ಬೆಂಗಳೂರು: ಪ್ರವಾಸಕ್ಕೆ ಹೋಗಲು ಬುಕ್ ಮಾಡಿದ್ದ ಕಾರು ಕಳ್ಳತನವಾಗಿರುವ ಘಟನೆ ನಾಯಂಡಹಳ್ಳಿಯಲ್ಲಿ ನಡೆದಿದೆ. ಅರುಣ್ ಕುಮಾರ್​ ಎಂಬುವರಿಗೆ ಸೇರಿದ 22 ಲಕ್ಷ ಮೌಲ್ಯದ ಇನೋವಾ ಕ್ರಿಸ್ಟಾ ಕಾರು ಕಳ್ಳತನವಾಗಿದೆ.

ಜಸ್ಟ್ ಡಯಲ್ ಮೂಲಕ ಆರೋಪಿ ಮೈಸೂರಿಗೆ ಪ್ರವಾಸಕ್ಕೆ ಹೋಗಲು ಕಾರ್ ಬುಕ್ ಮಾಡಿದ್ದಾನೆ. ಸೌಮ್ಯ ಟೂರ್ಸ್ ಅಂಡ್ ಟ್ರಾವೆಲ್ಸ್ ಅನ್ನು ಆರೋಪಿ ಸಂಪರ್ಕಿಸಿದ್ದಾನೆ. ಟ್ರಾವೆಲ್ಸ್​ನವರು ಅರುಣ್ ಕುಮಾರ್​ಗೆ ಮೈಸೂರಿಗೆ ಹೋಗುವಂತೆ ಹೇಳಿದ್ರು. ಕಾನಿಷ್ಕ ಹೋಟೆಲ್​ಗೆ ಪ್ರಯಾಣಿಕರನ್ನು ಕರೆ ತರಲು ಅರುಣ್ ಹೋಗಿದ್ದ. ಈ ವೇಳೆ ಕಾರ್ ಹತ್ತಿದ್ದ ಪ್ರಯಾಣಿಕ ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಬಳಿಗೆ ತೆರಳುವಂತೆ ಹೇಳಿದ್ದಾನೆ.

ಮೆಟ್ರೋ ಸ್ಟೇಷನ್ ಬಳಿಯ ಹೋಟೆಲ್​ನಲ್ಲಿ ಪೇಮೆಂಟ್ ಕಲೆಕ್ಷನ್ ಮಾಡಿಕೊಳ್ಳಬೇಕಿದೆ ಅಂತಾ ಆರೋಪಿ ಹೇಳಿದ್ದಾನೆ. ಮೆಟ್ರೋ ಸ್ಟೇಷನ್ ಬಳಿಯ ಮಿಸ್ ಚಿಫ್ ಹೋಟೆಲ್​ನ ರೂಂ ನಂ. 105ರಲ್ಲಿ ನನ್ನ ಸ್ನೇಹಿತನಿದ್ದಾನೆ ಎಂದು ಹೇಳಿದ್ದಾನೆ. 10 ಸಾವಿರ ಹಣ ಕೊಡ್ತಾರೆ ತೆಗೆದುಕೊಂಡು ಬಾ ಎಂದು ಚಾಲಕ ಅರುಣ್​ಗೆ ಹೇಳಿ ಕಳಿಸಿದ್ದ. ಈ ವೇಳೆ ಎಸಿ ಆನ್ ಮಾಡಿ ಹೋಗುವಂತೆ ಚಾಲಕನಿಗೆ ಆರೋಪಿ ಹೇಳಿದ್ದಾನೆ.

ಕೀ ಕಾರ್​ನಲ್ಲೇ ಬಿಟ್ಟು ಹಣ ತೆಗೆದುಕೊಂಡು ಬರಲು ಹೋದಾಗ ಕಾರ್ ಸಮೇತ ಆರೋಪಿ ಎಸ್ಕೇಪ್ ಆಗಿದ್ದಾನೆ. ವಾಪಸ್ ಚಾಲಕ ಅರುಣ್ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us